Asianet Suvarna News Asianet Suvarna News

ಹಣವಿಲ್ಲ ಎಂದು ಎಲೆಕ್ಷನ್‌ಗೆ ನೂರಾರು ಕೋಟಿ ಖರ್ಚು ಮಾಡಿದ ಕಾಂಗ್ರೆಸ್‌!

ಜಾಹೀರಾತು ಮತ್ತು ಮಾಧ್ಯಮ ಪ್ರಚಾರಕ್ಕೆ 410 ಕೋಟಿ ರು., ಸಾಮಾಜಿಕ ಜಾಲತಾಣ, ಆ್ಯಪ್‌ಗಳಲ್ಲಿ ಪ್ರಚಾರಕ್ಕೆ 46 ಕೋಟಿ ರು., ಪ್ರಚಾರ ಸಾಮಗ್ರಿಗಳ ಮುದ್ರಣಕ್ಕೆ 68.62 ಕೋಟಿ ರು., ಸ್ಟಾರ್ ಪ್ರಚಾರಕರ ವಿಮಾನ ಪ್ರಯಾಣಕ್ಕೆ 105 ಕೋಟಿ ರು. ಖರ್ಚಾಗಿದೆ ಎಂದು ತಿಳಿಸಿದ ಕಾಂಗ್ರೆಸ್‌ 

Congress spent 585 crores for Lok Sabha and 4 state assembly elections grg
Author
First Published Oct 8, 2024, 8:52 AM IST | Last Updated Oct 8, 2024, 8:52 AM IST

ನವದೆಹಲಿ(ಅ.08):  2024ರ ಲೋಕಸಭೆಗೂ ಮುನ್ನ ಪಕ್ಷದ ಖಾತೆಗಳನ್ನು ತೆರಿಗೆ ಇಲಾಖೆ ಜಪ್ತಿ ಮಾಡಿದ ಕಾರಣ ಹಣದ ಬಿಕ್ಕಟ್ಟು ಉಂಟಾಗಿದೆ ಎಂದು ದೂರಿದ್ದ ಕಾಂಗ್ರೆಸ್, ಲೋಕಸಭೆ ಹಾಗೂ 4 ರಾಜ್ಯಗಳ ವಿಧಾನಸಭೆ ಚುನಾವಣೆಗೆ 585 ಕೋಟಿ ರು. ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.

ಇದರಲ್ಲಿ ಜಾಹೀರಾತು ಮತ್ತು ಮಾಧ್ಯಮ ಪ್ರಚಾರಕ್ಕೆ 410 ಕೋಟಿ ರು., ಸಾಮಾಜಿಕ ಜಾಲತಾಣ, ಆ್ಯಪ್‌ಗಳಲ್ಲಿ ಪ್ರಚಾರಕ್ಕೆ 46 ಕೋಟಿ ರು., ಪ್ರಚಾರ ಸಾಮಗ್ರಿಗಳ ಮುದ್ರಣಕ್ಕೆ 68.62 ಕೋಟಿ ರು., ಸ್ಟಾರ್ ಪ್ರಚಾರಕರ ವಿಮಾನ ಪ್ರಯಾಣಕ್ಕೆ 105 ಕೋಟಿ ರು. ಖರ್ಚಾಗಿದೆ ಎಂದು ತಿಳಿಸಲಾಗಿದೆ. 

ಏಕಕಾಲ ಚುನಾವಣೆಗೆ ಶೀಘ್ರ ಕೇಂದ್ರದಿಂದ 3 ವಿಧೇಯಕ? ಎಷ್ಟು ರಾಜ್ಯಗಳ ಒಪ್ಪಿಗೆ ಬೇಕು?

ಚುನಾವಣೆ ವೇಳೆ ಠೇವಣಿಗಳ ರೂಪದಲ್ಲಿ 170 ಕೋಟಿ ರು. ಇದೆ ಎಂದಿದ್ದ ಕಾಂಗ್ರೆಸ್, ವಿವಿಧ ಮೂಲಗಳಿಂದ 539.37 ಕೋಟಿ ರು. ಸಂಗ್ರಹಿಸಿರುವುದಾಗಿ ತಿಳಿಸಿತ್ತು.

Latest Videos
Follow Us:
Download App:
  • android
  • ios