ದೆಹಲಿ ಗಂಗಾ ರಾಮ್ ಆಸ್ಪತ್ರೆ ದಾಖಲಾದ ಸೋನಿಯಾ ಗಾಂಧಿ, ವೈದ್ಯರ ನಿಗಾದಲ್ಲಿ ಕಾಂಗ್ರೆಸ್ ನಾಯಕಿ, ಇಂದು ಬೆಳಗ್ಗೆ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆಯಿಂದ ದೆಹಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಿಯಾ ಗಾಂಧಿ ಆರೋಗ್ಯ ಕ್ಷೀಣಿಸಲು ದೆಹಲಿ ಮಾಲಿನ್ಯ ಕಾರಣವಾಯಿತೆ?
ನವದೆಹಲಿ (ಜ.06) ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆ ಕಾರಣ ದೆಹಲಿಯ ಗಂಗಾ ರಾಮ್ ಆಸ್ಪತ್ರೆ ದಾಖಲಾಗಿದ್ದಾರೆ. ಕಫ, ಶೀತ, ಉಸಿರಾಟ ಸಮಸ್ಯೆ, ಅಸ್ವಸ್ಥತೆಯಿಂದ ಬಳಲಿದ ಸೋನಿಯಾ ಗಾಂಧಿಯನ್ನು ಇಂದು ಬೆಳಗ್ಗೆ ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ನುರಿತ ವೈದ್ಯರ ತಂಡದ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ. ಸದ್ಯ ಸೋನಿಯಾ ಗಾಂಧಿ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕವಿಲ್ಲ. ರೂಟಿನ್ ಚೆಕ್ ಅಪ್ ಭಾಗವಾಗಿ ಚಿಕಿತ್ಸೆ ನಡೆಯತ್ತಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ದೆಹಲಿ ವಾಯು ಮಾಲಿನ್ಯದಿಂದ ಸೋನಿಯಾ ಗಾಂಧಿ ಆರೋಗ್ಯ ಕ್ಷೀಣಿಸಿತಾ?
ಸೋನಿಯಾ ಗಾಂಧಿ ಕಳೆದ ಹಲವು ದಿನಗಳಿಂದ ಕಫ ಸಮಸ್ಯೆ ಎದುರಿಸುತ್ತಿದ್ದಾರೆ. ಶೀತ, ಉಸಿರಾಟದ ಸಮಸ್ಯೆ ಕುರಿತು ಸೋನಿಯಾ ಗಾಂಧಿ ರೂಟಿನ್ ಚೆಕ್ಅಪ್ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇತ್ತೀಚೆಗೆ ಸೋನಿಯಾ ಗಾಂಧಿಗೆ ಕಫ ಸಮಸ್ಯೆ ಹೆಚ್ಚಾಗಿದೆ. ದೆಹಲಿ ವಾಯು ಮಾಲಿನ್ಯ ಸಮಸ್ಯೆ ಕಾರಣದಿಂದ ಸೋನಿಯಾ ಗಾಂಧಿ ಕಫ ಸಮಸ್ಯೆ ಹೆಚ್ಚಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಡಿಸೆಂಬರ್ ತಿಂಗಳಲ್ಲಿ ಸೋನಿಯಾ ಗಾಂಧಿ 79ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇತ್ತೀಚೆಗೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. 2025ರ ಜೂನ್ ತಿಂಗಳಲ್ಲಿ ಸೋನಿಯಾ ಗಾಂಧಿ ಇದೇ ಗಂಗಾ ರಾಮ್ ಆಸ್ಪತ್ರೆ ದಾಖಲಾಗಿದ್ದರು. ಹೊಟ್ಟೆ ನೋವು, ಅಸ್ವಸ್ಥತೆ ಕಾರಣದಿಂದ ಆಸ್ಪತ್ರೆ ದಾಖಲಾಗಿದ್ದರು. ಇನ್ನು ಕಳೆದ ವರ್ಷ ಹಿಮಾಚಲ ಪ್ರದೇಶ ಪ್ರವಾಸದಲ್ಲಿ ಬಿಪಿ ಸಮಸ್ಯೆಯಿಂದ ಸೋನಿಯಾ ಗಾಂಧಿ ಆಸ್ಪತ್ರೆ ದಾಖಲಾಗಿದ್ದರು.
ದೆಹಲಿ ವಾಯು ಮಾಲಿನ್ಯದಿಂದ ಹಲವರಿಗೆ ಉಸಿರಾಟ ಸಮಸ್ಯೆ
ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಮಿತಿ ಮೀರಿರುವ ಕಾರಣ ಹಲವರು ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಹಲವೆಡೆ ಅತ್ಯಂತ ಕಳಪೆ ವಾಯು ಗುಣಮಟ್ಟ ದಾಖಲಾಗಿದೆ. ಇದರ ಪರಿಣಾಮ ದೆಹಲಿ ಆಸ್ಪತ್ರೆಗಳಲ್ಲಿ ಉಸಿರಾಟ ಸಬಂಂಧ ದಾಖಲಾಗಿರುವ ಸಂಖ್ಯೆ ಹೆಚ್ಚಿದೆ. ಈ ಪೈಕಿ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ದೆಹಲಿ ವಾಯು ಮಾಲಿನ್ಯ ಸಮಸ್ಯೆಯಿಂದ ಹಲವರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ದೆಹಲಿ ವಾಯು ಮಾಲಿನ್ಯ ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಪ್ರಮುಖಾಗಿ ಹಲವು ನಿರ್ಬಂಧ ಹೇರಲಾಗಿದೆ. ಆದರೆ ಜನರ ಆರೋಗ್ಯ ಕ್ಷೀಣಿಸುತ್ತಿದೆ.


