‘ಭಾರದತಲ್ಲಿ ಬಾಂಗ್ಲಾದೇಶ ಅಕ್ರಮ ವಲಸಿಗರ ಬಂಧನ ಶಿಬಿರಗಳಿಲ್ಲ’|‘ಭಾರತದಲ್ಲಿ ಬಂಧನ ಶಿಬಿರಗಳಿವೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ’| ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು| ಗೂಗಲ್ ಸರ್ಚ್ ಮಾಡಿದರೆ ಪ್ರಧಾನಿಗೆ ಸತ್ಯ ತಿಳಿಯಲಿದೆ ಎಂದ ಕಾಂಗ್ರೆಸ್| ಕೇಂದ್ರ ಸಚಿವ ನಿತ್ಯಾನಂದ್ ರಾಯ್ ಹೇಳಿಕೆ ಉಲ್ಲೇಖಿಸಿದ ಕಾಂಗ್ರೆಸ್| 

ನವದೆಹಲಿ(ಡಿ.22): ಭಾರದತಲ್ಲಿ ಬಾಂಗ್ಲಾದೇಶ ಅಕ್ರಮ ವಲಸಿಗರ ಬಂಧನ ಶಿಬಿರಗಳಿಲ್ಲ ಎಂದ ಪ್ರಧಾನಿ ಮೋದಿಗೆ, ಗೂಗಲ್ ಸರ್ಚ್ ಮಾಡುವಂತೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಇಂದು ನವದೆಹಲಿಯಲ್ಲಿ ನಡೆದ ಬಿಜೆಪಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಭಾರತದಲ್ಲಿ ಬಂಧನ ಶಿಬಿರಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಮೋದಿ ಪ್ರತಿಕೃತಿ ಸುಡಿ, ಸಾರ್ವಜನಿಕ ಆಸ್ತಿಯನ್ನಲ್ಲ: ಪ್ರಧಾನಿ!

ಅಲ್ಲದೇ ಭಾರತದಲ್ಲಿ ಬಂಧನ ಶಿಬಿರಗಳಿವೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕುತ್ತಿದೆ ಎಂದು ಆರೋಪಿಸಿದ್ದರು.

Scroll to load tweet…

ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಕಾಂಗ್ರೆಸ್, ಅಸ್ಸಾಂನಲ್ಲಿ ಎಲ್ಲೆಲ್ಲಿ ಬಂಧನ ಶಿಬಿರಗಳಿವೆ ಎಂಬುದನ್ನು ಗೂಗಲ್ ಮಾಡಿದರೆ ಪ್ರಧಾನಿಗೆ ತಿಳಿಯಲಿದೆ ಎಂದು ವ್ಯಂಗ್ಯವಾಡಿದೆ.

ಅಲ್ಲದೇ ಅಸ್ಸಾಂನ ಬಂಧನ ಶಿಬಿರಗಳಲ್ಲಿ ಇದುವರೆಗೆ 28 ಅಕ್ರಮ ವಲಸಿಗರು ಮೃತಪಟ್ಟಿದ್ದಾರೆ ಎಂಬ ಕೇಂದ್ರ ಸಚಿವ ನಿತ್ಯಾನಂದ್ ರಾಯ್ ಅವರ ಹೇಳಿಕೆಯನ್ನೂ ಕಾಂಗ್ರೆಸ್ ಉಲ್ಲೇಖಿಸಿದೆ.