ಚಂದ್ರಯಾನ ಯಶಸ್ಸಿನಲ್ಲೂ ರಾಜಕೀಯ, ಶುಭಕೋರಿ ಪೇಚಿಗೆ ಸಿಲುಕಿದ ಕಾಂಗ್ರೆಸ್!
ಚಂದ್ರನ ಮೇಲೆ ಭಾರತ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿ ಇತಿಹಾಸ ರಚಿಸಿದೆ. ಇಸ್ರೋ ಹಾಗೂ ಭಾರತ ಸಾಧನೆಯನ್ನು ದೇಶವೇ ಕೊಂಡಾಡುತ್ತಿದೆ. ಶುಭಾಶಯ, ಅಭಿನಂದನೆಗಳದ್ದೇ ಸದ್ದು. ಇದರ ನಡುವೆ ಎಲ್ಲಾ ಪಕ್ಷ, ನಾಯಕರು, ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ಮಾಡಿದ ಪೋಸ್ಟ್‌ನಿಂದ ಸ್ವತಃ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.
ನವದೆಹಲಿ(ಆ.23) ಚಂದ್ರನ ದಕ್ಷಿಣ ದ್ರುವದಲ್ಲಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಸ್ರೋ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿದೆ. ಇಂದು ಸಂಜೆ 6.04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್‌ನ್ನು ಯಶಸ್ವಿಯಾಗಿ ಇಳಿಸಲಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಕಾದು ಕುಳಿತಿತ್ತು. ಯಶಸ್ವಿಯಾಗಿ ಲ್ಯಾಂಡರ್ ಇಳಿಯುತ್ತಿದ್ದಂತೆ ಸಂಭ್ರಮ ಮನೆ ಮಾಡಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ, ಅಭಿನಂದನೆಗಳು ಹರಿದಾಡಿದೆ. ಇನ್ನು ಕಾಂಗ್ರೆಸ್ ಕೂಡ ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ಟ್ವೀಟ್ ಮಾಡಿದೆ. ಆದರೆ ಇದೇ ಅಭಿನಂದನೆಗಳ ಟ್ವೀಟ್‌ನಿಂದ ಸತಃ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.
ಕಾಂಗ್ರೆಸ್ ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿದೆ. ಈ ಟ್ವೀಟ್‌ನಲ್ಲಿ ಜವಾಹರ್ ಲಾಲ್ ನೆಹರೂ ದೂರದೃಷ್ಟಿ, ನೆಹರೂ ಹಾಕಿ ಕೊಟ್ಟ ಅಡಿಪಾಯ, ನೆಹರೂ ಹಾಗೂ ಕಾಂಗ್ರೆಸ್ ಸರ್ಕಾರದ ಪ್ರಯತ್ನವೇ ಚಂದ್ರಯಾನ 3 ಫಲಿತಾಂಶ ಎಂದು ಟ್ವೀಟ್ ಮಾಡಿದೆ. ಶುಭಾಶಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡಿ ಟೀಕೆಗೆ ಗುರಿಯಾಗಿದೆ. ಚಂದ್ರಯಾನ ಯಶಸ್ಸಿನ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ಮಾಡಿದ ಟ್ವೀಟ್ ಪೋಸ್ಟ್ ಮಾಡಿ ಹಲವರು ಕಾಂಗ್ರೆಸ್ ವಿರುದ್ದ ಮುಗಿ ಬಿದ್ದಿದ್ದಾರೆ.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಯಾತ್ರಿಗಳಿಗೆ ಸಲಾಂ, ಕಾಂಗ್ರೆಸ್ ಕ್ರೀಡಾ ಸಚಿವರ ಎಡವಟ್ಟು ವೈರಲ್!
ಕಾಂಗ್ರೆಸ್ ಒಂದು ಕುಟುಂಬ ಹೊರತು ಇನ್ನೇನು ಯೋಚನೆ ಮಾಡುವುದಿಲ್ಲ. ಕಾಂಗ್ರೆಸ್‌ಗೆ ಒಂದು ಕುಟುಂಬವೇ ಎಲ್ಲಾ. ಕಾಂಗ್ರೆಸ್ ಈ ಪ್ರಯತ್ನ ಮಾಡಿದ್ದರೆ ಚಂದ್ರನಲ್ಲೂ ನೆಹರೂ ಹೆಸರು ಇಡುತ್ತಿದ್ದರು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಸ್ವತಂತ್ರ ಭಾರತದಲ್ಲಿ ಪ್ರಧಾನಿ ಜವಾಹರ್ ಲಾಲ್ ನೆಹರೂ ದೂರದೃಷ್ಟಿ ಫಲವಾಗಿ ಆರಂಭಗೊಂಡ ಭಾರತದ ಬಾಹ್ಯಾಕಾಶ ಸಂಸ್ಥೆ ಇದೀಗ ಫಲಕೊಡುತ್ತಿದೆ.ಇಂದು ಚಂದ್ರಯಾನ 3ರ ಫಲಿತಾಂಶದ ಹಿಂದೆ ಹಲವು ಪ್ರಯತ್ನಗಳಿವೆ. ಜವಾಹರ್ ಲಾಲ್ ನೆಹರೂ 1962ರಲ್ಲಿ ಇಸ್ರೋ ಸ್ಥಾಪಿಸಿದರು. ಎಪ್ರಿಲ್ 19, 1975ರಂದು ಆರ್ಯಭಟ ಸ್ಯಾಟಲೈಟ್ ಲಾಂಚ್ ಮಾಡಲಾಗಿತ್ತು. ಎಪ್ರಿಲ್3, 1984ರಲ್ಲಿ ಭಾರತ ಮೊದಲ ಬಾರಿಗೆ ಬಾಹ್ಯಕಾಶಕ್ಕೆ ಕಾಲಿಟ್ಟಿತು. ಅಕ್ಟೋಬರ್ 22, 2008ರಲ್ಲಿ ಚಂದ್ರಯಾನ 1 ಮಿಷನ್ ಆರಂಭಿಸಲಾಯಿತು. ನವೆಂಬರ್ 5, 2013ರಂದು ಮಂಗಳ ಮಿಷನ್ ಆರಂಭಿಸಲಾಗಿತ್ತು. ನೆಹರೂ ವಿಷನ್‌ನಿಂದ ಬಾಹ್ಯಾಕಾಶ ಪ್ರಕಾಶಿಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಚಂದ್ರಯಾನಕ್ಕೆ 615 ಕೋಟಿ ರೂ, ದುಪ್ಪಟ್ಟು ಖರ್ಚು ಮಾಡಿದ BBMPಗೆ ಇನ್ನು ರಸ್ತೆ ಗುಂಡಿ ಮುಚ್ಚಿಲ್ಲ, ಮೀಮ್ಸ್ ವೈರಲ್!
ಕಾಂಗ್ರೆಸ್ ಮಾಡಿದ ಟ್ವೀಟ್‌ನಲ್ಲಿ ನೆಹರೂ ಹಾಗೂ ಕಾಂಗ್ರೆಸ್ ಮಾಡಿದ ಪ್ರಯತ್ನಗಳ ವಿವರ ನೀಡಲಾಗಿದೆ. ಹೊರತು ಚಂದ್ರಯಾನದ ಫೋಟೋ, ಯಶಸ್ವಿ ವಿಕ್ರಮ್ ಲ್ಯಾಂಡರ್ ಇಳಿಸಿದ ಇಸ್ರೋ ಕುರಿತು ಒಂದ ಅಕ್ಷರನ್ನು ಕಾಂಗ್ರೆಸ್ ಬರೆದಿಲ್ಲ.
ಇದೇ ವೇಳೆ ಬಿಜೆಪಿ ಇಸ್ರೋಗೆ ಅಭಿನಂದನೆಗಳು.ಭಾರತ ಇದೀಗ ಚಂದ್ರನ ಮೇಲೆ ಅತ್ಯಂತ ಹೆಮ್ಮೆಯಿಂದ ಬೀಗುತ್ತಿದೆ. ಜೊತೆಗೆ ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಫೋಟೋವನ್ನು ಪೋಸ್ಟ್ ಮಾಡಿದೆ.