ಚಂದ್ರಯಾನಕ್ಕೆ 615 ಕೋಟಿ ರೂ, ದುಪ್ಪಟ್ಟು ಖರ್ಚು ಮಾಡಿದ BBMPಗೆ ಇನ್ನು ರಸ್ತೆ ಗುಂಡಿ ಮುಚ್ಚಿಲ್ಲ, ಮೀಮ್ಸ್ ವೈರಲ್!
615 ಕೋಟಿಯಲ್ಲಿ ಇಸ್ರೋಗೆ ಲಕ್ಷ ಲಕ್ಷ ದೂರದಲ್ಲಿರುವ ಚಂದ್ರ ಲೋಕಕ್ಕೆ ತೆರಳಲು ಸಾಧ್ಯವಾಗಿದೆ. ಆದರೆ ಇದಕ್ಕಿಂತ ದುಪ್ಪಟ್ಟು ಖರ್ಚು ಮಾಡಿರುವ ನಮ್ಮ ಬಿಬಿಎಂಪಿಗೆ 10 ಕಿಲೋಮೀಟರ್ ರಸ್ತೆ ಗುಂಡಿ ಮುಚ್ಚಲು ಇನ್ನೂ ಸಾಧ್ಯವಾಗಿಲ್ಲ ಎಂದು ಟ್ರೋಲ್ ಮಾಡಲಾಗುತ್ತಿದೆ. ಚಂದ್ರಯಾನ 3 ಯಶಸ್ಸಿನ ಕುರಿತು ಸಾಮಾಜಿಕ ಮಾಧ್ಯಮದ ಪ್ರತಿಕ್ರಿಯೆ ಇಲ್ಲಿದೆ.

ಬೆಂಗಳೂರು(ಆ.23) ಚಂದ್ರಯಾನ 3 ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರತದ ಹೆಮ್ಮೆಯ ಸಾಧನೆಯೇ ತುಂಬಿಕೊಂಡಿದೆ. ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಚಂದ್ರನ ಮೇಲೆ ಭಾರತ. ಜೀವನವನ್ನೇ ಮುಡಿಪಾಗಿಟ್ಟು ಕೆಲಸ ಮಾಡಿದ ಇಸ್ರೋಗೆ ಅಭಿನಂದನೆ, ಬಾಹ್ಯಾಕಾಶದಲ್ಲಿ ಭಾರತ ವಿಶ್ವಗುರು ಸೇರಿದಂತೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇದರ ಜೊತೆಗೆ ಹಲವರು ಇದೇ ಯಶಸ್ವಿ ಚಂದ್ರಯಾನ ಹಿಡಿದು, ಹಲವು ವಿಚಾರಗಳನ್ನು ಮುನ್ನಲೆಗೆ ತಂದು ಟ್ರೋಲ್ ಮಾಡಿದ್ದಾರೆ. ಪ್ರಮುಖವಾಗಿ 615 ಕೋಟಿ ರೂಪಾಯಿ ವೆಚ್ಚದಲ್ಲಿ ಇಸ್ರೋ ಚಂದ್ರಲೋಕಕ್ಕೆ ಲ್ಯಾಂಡರ್ ಕಳುಹಿಸಿದೆ. ಆದರೆ ಅದಕ್ಕಿಂತ ದುಪ್ಪಟ್ಟು ವೆಚ್ಚ ಮಾಡಿದರೂ ಬಿಬಿಎಂಪಿಗೆ 10 ಕಿಲೋಮೀಟರ್ ರಸ್ತೆ ನೆಟ್ಟಗೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಂದ್ರಯಾನ 3 ಮಿಷನ್ ಕುರಿತು ವ್ಯಂಗ್ಯ ಹಾಗೂ ಟೀಕೆ ಮಾಡಿದ ನಟ ಪ್ರಕಾಶ್ ರಾಜ್ ವಿರುದ್ದವೂ ಮತ್ತೆ ಟ್ರೋಲ್ ವ್ಯಕ್ತವಾಗಿದೆ. ಪ್ರಕಾಶ್ ರಾಜ್ ಚಿತ್ರದ ಕೆಲ ಫೋಟೋಗಳನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಲ್ಯಾಂಡ್ ಆದ ತಕ್ಷಣ ಲ್ಯಾಂಡರ್ ತೆಗೆದ ಮೊದಲ ಚಿತ್ರ ಎಂದು ಪ್ರಕಾಶ್ ರಾಜ್ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಚಂದ್ರಯಾನ ಯಶಸ್ವಿಯಾದ ಬೆನ್ನಲ್ಲೇ ಪ್ರಕಾಶ್ ರಾಜ್ ಮತ್ತೆ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಇಡೀ ದೇಶವೇ ಸಂಭ್ರಮಿಸುತ್ತಿದ್ದರೆ, ಒಬ್ಬ ಮಾತ್ರ ಕೊತ ಕೊತ ಕುದಿಯುತ್ತಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ.
ಚಂದ್ರ ಬಹಳ ದೂರದಲ್ಲಿಲ್ಲ, ಚಂದ್ರನ ಮೇಲೆ ನಾವಿದ್ದೇವೆ, ಇಸ್ರೋ ಸಾಧನೆಗೆ ಮೋದಿ ಅಭಿನಂದನೆ!
ಇಂಡಿಯಾ ಈಸ್ ರಾಕಿಂಗ್(India ISRO cking) ಎಂದು ಹಲವರು ಕಮೆಂಟ್ ಮಾಡಿದ್ದಾರೆ.ಇನ್ನು ಭಾರತ ರಕ್ಷಾ ಬಂಧನ ಅನ್ನೋ ಲ್ಯಾಂಡರ್ ಹಿಡಿದು ಚಂದ್ರನ ಮೇಲೆ ಇಳಿದಿದೆ. ರಾಖಿ ಹಬ್ಬಕ್ಕೆ ಭಾರತ ಅತೀ ದೊಡ್ಡ ಗಿಫ್ಟ್ ನೀಡಲಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ತಿರುಪತಿ ತಿಮ್ಮಪ್ಪ, ಅಯ್ಯಪ್ಪ ಸೇರಿದಂತೆ ಭಾರತದ ಎಲ್ಲಾ ದೇವರ ಆಶೀರ್ವಾದದಿಂದ ಚಂದ್ರಯಾನ ಯಶಸ್ವಿಯಾಗಿದೆ. ಹಲವರು ದೇವಸ್ಥಾನಕ್ಕೆ ಭೇಟಿ ನೀಡಿದ್ದು ಯಾಕೆ? ಅನ್ನೋ ವಿವಾದಕ್ಕೆ ತಿರುಗೇಟು ನೀಡಿದ ಹಲವು ಕಮೆಂಟ್‌ಗಳು ವ್ಯಕ್ತವಾಗಿದೆ.ಇನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ವಿಕ್ರಮ್ ಲ್ಯಾಂಡರ್ ಚಿತ್ರ ತಿರುಪತಿ ತಿಮ್ಮಪ್ಪನ ಕಿರೀಟ ರೀತಿಯಲ್ಲೇ ಇತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.