ದೇಶಕ್ಕೆ ಬಂದ ಮಗಳು ಅಳಿಯ, ಸಾಂಪ್ರದಾಯಿಕವಾಗಿ ಕಚ್ಚೆ ಪಂಚೆ ಧರಿಸಿ ಸ್ವಾಗತಿಸಿದ ಕೇಂದ್ರ ಸಚಿವ!
ಜಿ20 ಶೃಂಗಸಭೆಗೆ ಬೇರೆ ಎಲ್ಲಾ ದೇಶದ ನಾಯಕರು ಬರುವುದು ಒಂದು ರೀತಿಯಾದರೆ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಬಂದಿರುವುದು ಬೇರೆಯದೇ ರೀತಿಯ ಸಂಭ್ರಮ. ದೇಶಕ್ಕೆ ಮಗಳು-ಅಳಿಯ ಭೇಟಿ ನೀಡಿದ ಸಂಭ್ರಮ. ಇಬ್ಬರನ್ನೂ ಕೂಡ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.
ಜಿ20 ಶೃಂಗಸಭೆಗಾಗಿ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಶುಕ್ರವಾರ ನವದೆಹಲಿಗೆ ಆಗಮಿಸಿದರು.
ಯುನೈಟೆಡ್ ಕಿಂಗ್‌ಡಮ್‌ನ ಅಧಿಕೃತ ಏರ್‌ಲೈನ್ಸ್‌ನಲ್ಲಿ ನವದೆಹಲಿಗೆ ಆಗಮಿಸಿದ ಈ ಜೋಡಿಯನ್ನು ಭಾರತ ಸರ್ಕಾರದ ಸಚಿವರು ಸ್ವಾಗತಿಸಿದರು.
ಭಾರತಕ್ಕೆ ಭೇಟಿ ನೀಡಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸಿರುವ ಬ್ರಿಟನ್ ಪ್ರಧಾನಿ ಸುನಕ್, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟ್ರೇಡ್ ಡೀಲ್ ವಿಚಾರವಾಗಿ ಆತುರ ಮಾಡೋದಿಲ್ಲ ಎಂದು ಹೇಳಿದ್ದಾರೆ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಪುತ್ರಿಯಾಗಿರುವ ಅಕ್ಷತಾ ಮೂರ್ತಿ, ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಎರಡನ್ನೂ ಬಿಂಬಿಸುವ ಡ್ರೆಸ್‌ಅನ್ನು ಧರಿಸಿ ಆಗಮಿಸಿದ್ದರು.
ಮಗಳು-ಅಳಿಯ ಮನೆಗೆ ಬಂದಾಗ ಸಾಂಪ್ರದಾಯಿಕವಾಗಿ ಸ್ವಾಗತ ಮಾಡುವ ರೀತಿಯಲ್ಲಿ ಇವರನ್ನು ಸ್ವಾಗತಿಸಲಾಯಿತು. ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಇವರನ್ನು ಸ್ವಾಗತಿಸಿದರು.
ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ಅವರನ್ನು ಸ್ವಾಗತಿಸುವ ಸಲುವಾಗಿ ಕೇಂದ್ರ ಸಚಿವ ಅಶ್ವಿನಿ ಕುಮಾರ್, ಕಚ್ಚೆ ಪಂಚೆ ಧರಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಇನ್ನು ವಿಮಾನ ನಿಲ್ದಾಣದ ಒಳಗೆ ಬಂದ ಇವರಿಗೆ ಅಸ್ಸಾಂನ ಬಿಹು ನೃತ್ಯಗಾರ್ತಿಯರು ಸಾಂಪ್ರದಾಯಿಕ ಶೈಲಿನ ನೃತ್ಯ ಪ್ರದರ್ಶನ ಮಾಡಿದರು.
ಆ ಬಳಿಕ ನವದೆಹಲಿಯಲ್ಲಿ ಬ್ರಿಟಿಷ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಈ ಜೋಡಿ ಭೇಟಿ ಮಾಡಿತು. ಈ ವೇಳೆ ಸುನಕ್ ತಾನು ಭವಿಷ್ಯದ ನಾಯಕರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದ್ದರು.
ಮಕ್ಕಳೊಂದಿಗೆ ವಿವಿಧ ಆಟದಲ್ಲಿ ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿ ಭಾಗಿಯಾಗಿದ್ದರು. ಅದರೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಿದವರೊಂದಿಗೂ ಚರ್ಚೆ ನಡೆಸಿದರು.
ನಾನು ಹಿಂದು.ನಾನು ಬೆಳೆದಿದ್ದೇ ಅದೇ ರೀತಿಯಲ್ಲಿ. ಈಗ ಭಾರತಕ್ಕೆ ಬಂದಿದ್ದೇನೆ. ದೇವಸ್ಥಾನಕ್ಕೆ ಭೇಟಿ ನೀಡುವ ಇರಾದೆ ಇದೆ ಎಂದು ರಿಷಿ ಸುನಕ್ ಹೇಳಿದ್ದಾರೆ.
'ನಾನೊಬ್ಬ ಹೆಮ್ಮೆಯ ಹಿಂದೂ, ನಾನು ಬೆಳೆದಿದ್ದೂ ಕೂಡ ಅದೇ ರೀತಿ..' ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಾತು