Asianet Suvarna News Asianet Suvarna News

ಕೇಜ್ರಿಗೆ SORRY ಎಂದ ತರೂರ್: ಬಳಿಸಿದ ಪದವಾದರೂ ಏನು?

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೀಳು ಪದ ಬಳಕೆ| ಕೇಜ್ರಿವಾಲ್ ಕ್ಷಮೆ ಕೋರಿದ ಕಾಂಗ್ರೆಸ್ ಸಂಸದ ಶಶಿ ತರೂರ್| ಕೇಜ್ರಿವಾಲ್ ಅವರನ್ನು ನಪುಂಸಕ ಎಂದು ಕರೆದ ಶಶಿ ತರೂರ್| ತರೂರ್ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ| ಕೇಜ್ರಿವಾಲ್ 'ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸದೇ ಅಧಿಕಾರ ಅನುಭವಿಸುತ್ತಿದ್ದಾರೆ' ಎಂದ ತರೂರ್|

Congress MP Shashi Tharoor  Apologises For Comment On Arvind Kejriwal
Author
Bengaluru, First Published Jan 14, 2020, 3:24 PM IST

ನವದೆಹಲಿ(ಜ.14): ತೂಕದ ಪದಗಳನ್ನು ಬಳಸಿ ಮಾತನಾಡುವ ಕಾಂಗ್ರೆಸ್ ಸಂಸದ ಶಶಿ ತರೂರ್, ಈ ಬಾರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಹಗುರ ಪದಗಳನ್ನು ಬಳಸಿ ಕ್ಷಮೆ ಕೇಳಿದ ಅಪರೂಪದ ಘಟನೆ ನಡೆದಿದೆ.

ದೆಹಲಿ ಸಿಎಂ ಕೇಜ್ರಿವಾಲ್ 'ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸದೇ ಅಧಿಕಾರ ಅನುಭವಿಸುತ್ತಿದ್ದಾರೆ' ಎಂದು ಶಶಿ ತರೂರ್ ಗಂಭೀರ ಆರೋಪ ಮಾಡಿದ್ದರು. ತರೂರ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಸದ್ಯ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿರುವ ತರೂರ್, ಇದು ಯಾವ ಸಂದರ್ಭದಲ್ಲಿ ಬಳಸಲಾಗಿತ್ತು ಎಂಬ ಇತಿಹಾಸವನ್ನೂ ತಿಳಿಸಿರುವುದು ವಿಶೇಷ.

ಸ್ಟೇನ್ಲಿ ಬಾಲ್ಡ್ವಿನ್ ಬ್ರಿಟನ್ ಪ್ರಧಾನಿಯಾಗಿದ್ದ ಕಾಲದಲ್ಲಿ ಅವರ ವಿರೋಧಿಗಳು ಇದೇ ರೀತಿಯ ಆರೋಪ ಮಾಡಿದ್ದರು ಎಂದು ತರೂರ್ ಸಮಜಾಯಿಷಿ ನೀಡಿದ್ದಾರೆ.

ಆದರೆ ಇದರೊಂದಿಗೆ ತರೂರ್ ಕೇಜ್ರಿವಾಲ್ ವಿರುದ್ಧ ನಪುಂಸಕ ಎಂಬ ಪದವನ್ನೂ ಬಳಿಸಿದ್ದು, ಈ ಕುರಿತು ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಈ ಕುರಿತು ಟ್ವೀಟ್ ಮಾಡಿರುವ ತರೂರ್, ತಮ್ಮ ಹೇಳಿಕೆಗೆ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.

ಕೇಜ್ರಿವಾಲ್ ಅವರನ್ನು ನಪುಂಸಕ ಎಂದು ಜರೆದಿದ್ದರಿಂದ ತರೂರ್ ತೃತೀಯ ಲಿಂಗಿ ಸಮುದಾಯದ ಕ್ಷಮೆ ಕೇಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಆಗ್ರಹಿಸಿದ್ದರು.

Follow Us:
Download App:
  • android
  • ios