ಸಂಸತ್ತಿನಲ್ಲಿ ಕೋವಿಡ್ 19 ಗಂಭೀರತೆ ಬೆಳಕು ಚೆಲ್ಲಿದ ಸಂಸದ ಕೊರೋನಾಗೆ ಬಲಿ!

ಭಾರತದಲ್ಲಿ ಕೊರೋನಾ ತಾಂಡವ ಇನ್ನೂ ಆರಂಭಗೊಂಡಿರಲಿಲ್ಲ. ಅಲ್ಲೊಂದು ಇಲ್ಲೊಂದು ಪ್ರಕರಣ ವರದಿಯಾಗಿತ್ತು. ಸರ್ಕಾರ, ಸಂಸತ್ತು, ಕಚೇರಿ, ಕೆಲಸ ಸೇರಿದಂತೆ ಎಲ್ಲವೂ ಎಂದಿನಂತೆ ಕಾರ್ಯನಿರ್ವಹಿಸುತ್ತಿತ್ತು. ಆಗಲೇ ಸಂಸದ ಸಂಸತ್ತಿನಲ್ಲಿ ಕೊರೋನಾ ವೈರಸ್‌ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದರು. ಇಷ್ಟೇ ಅಲ್ಲ ಕೊರೋನಾ ಗಂಭೀರತೆಯ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು. ಇದೀಗ ಅದೇ ಸಂಸದ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. 
 

Congress MP H Vasanthakumar who died of Covid 19 had urged to declare corona as national disaster

ಕನ್ಯಾಕುಮಾರಿ(ಆ.29):  ಚೀನಾದಲ್ಲಿ ಕೊರೋನಾ ಅಬ್ಬರಿಸುತ್ತಿತ್ತು ಅಷ್ಟೇ. ಭಾರತದಲ್ಲಿ ಕರೋನಾ ವೈರಸ್ ಎಂಟ್ರಿ ಮಾತ್ರವಲ್ಲ ಕೊರೋನಾ ಹೆಸರು ಕೂಡ ಚಾಲ್ತಿಗೆ ಬಂದಿರಲಿಲ್ಲ. ಕೊರೋನಾ ವೈರಸ್ ಏನು ಅನ್ನೋದೇ ಜನರಿಗೆ ತಿಳಿದಿರಲಿಲ್ಲ. ಈ ಸಂದರ್ಭದಲ್ಲಿ ಕನ್ಯಾಕುಮಾರಿ ಕಾಂಗ್ರೆಸ್ ಸಂಸದ ವಸಂತ ಕುಮಾರ್ ಕೊರೋನಾ ಗಂಭೀರತೆ ಕುರಿತು ಬೆಳಕು ಚೆಲ್ಲಿದ್ದರು. ದುರಂತ ಅಂದರೆ ಇದೇ ಸಂಸದ ಇದೀಗ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.

 

ಬೆಳಗಾವಿ: ಶಾಸಕ ಅಭಯ ಪಾಟೀಲಗೆ ಕೋವಿಡ್‌ ದೃಢ, ಸಿಎಂಗೆ ಮತ್ತೊಮ್ಮೆ ಕೊರೋನಾ ಭೀತಿ

70 ವರ್ಷದ ಕಾಂಗ್ರೆಸ್ ಸಂಸದ ವಸಂತ್ ಕುಮಾರ್ ಮಾರ್ಚ್ 20 ರಂದು ಸಂಸತ್ತಿನಲ್ಲಿ ಕೊರೋನಾ ವೈರಸ್ ಕುರಿತು ಮಾತನಾಡಿದ್ದರು. ಕೊರೋನಾ ವೈರಸ್‌ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದಿದ್ದರು.  ಕೊರೋನಾ ಕಾರಣ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ದಿನಗೂಲಿ ನೌಕರರು, ಸಣ್ಣ ಉದ್ದಿಮೆದಾರರು ಸೇರಿದಂತೆ ಸಂಕಷ್ಟದಲ್ಲಿರುವವರ ಖಾತೆಗೆ ನೇರವಾಗಿ ಹಣ ವರ್ಗಾಣವಣೆ ಮಾಡಬೇಕು ಎಂದು ಆಗ್ರಹಿಸಿದ್ದರು.

ಮಾರ್ಚ್ 20 ರಂದು ವಸಂತ್ ಕುಮಾರು ಸಂಸತ್ತಿನಲ್ಲಿ ಮಾತನಾಡಿದ ಬಳಿಕ ಮಾರ್ಚ್ 25 ರಿಂದ ದೇಶದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಲಾಕ್‌ಡೌನ್ ಬಳಿಕವೇ ದೇಶದಲ್ಲಿ ಕೊರೋನಾ ಕುರಿತ ಗಂಭೀರತೆ ಅರ್ಥವಾಗಿತ್ತು. ಸೋಂಕಿತರ ಸಂಖ್ಯೆ ಹೆಚ್ಚಾಯಿತು. ಕೊರೋನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಯಿತು. ಇತ್ತ ಆರೋಗ್ಯವಾಗಿದ್ದ ಕಾಂಗ್ರೆಸ್ ಸಂಸದ ವಸಂತ್ ಕುಮಾರ್‌ಗೆ ಆಗಸ್ಟ್ ತಿಂಗಳ ಆರಂಭದಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು.

ಕೊರೋನಾ ರೋಗ ಲಕ್ಷಣ ಕಾರಣ ಚಿಕಿತ್ಸೆಗೆ ಒಳಗಾಗಿದ್ದ ವಸಂತ್ ಕುಮಾರ್ ಶುಕ್ರವಾರ(ಆ.28) ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.

Latest Videos
Follow Us:
Download App:
  • android
  • ios