ಒಂದು ದೇಶ, ಒಂದು ಚುನಾವಣೆ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ರಚನೆ ಆಗಿರುವ ಸಮಿತಿಗೆ ಸದಸ್ಯರಾಗಲು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಿರಾಕರಿಸಿದ್ದಾರೆ.
ನವದೆಹಲಿ (ಸೆ.03): ಒಂದು ದೇಶ, ಒಂದು ಚುನಾವಣೆ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ರಚನೆ ಆಗಿರುವ ಸಮಿತಿಗೆ ಸದಸ್ಯರಾಗಲು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನಿರಾಕರಿಸಿದ್ದಾರೆ. ‘ಸಮಿತಿ ಸದಸ್ಯನಾಗಲು ನನಗೆ ಹಿಂಜರಿಕೆ ಇಲ್ಲ. ಆದರೆ ಸಮಿತಿಯ ಪರಿಶೀಲನಾ ಕಾರ್ಯಸೂಚಿಗಳನ್ನು ಗಮನಿಸಿದರೆ, ಮೊದಲೇ ನಿರ್ಧಾರಕ್ಕೆ ಬಂದಂತಿವೆ. ಸಮಿತಿ ಕೇವಲ ಕಣ್ಣೊರೆಸುವ ತಂತ್ರ’ ಎಂದು ಅಧೀರ್ ಹೇಳಿದ್ದಾರೆ.
ಸದನದಿಂದ ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ಅಮಾನತು ರದ್ದು: ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ಬುಧವಾರ, ಸದನದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಕೆಳಮನೆಯಿಂದ ಅಮಾನತುಗೊಳಿಸಿರುವ ನಿರ್ಣಯವನ್ನು ಹಿಂಪಡೆದಿದೆ. ಆ.11 ರಂದು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನದಂದು ಲೋಕಸಭೆಯಿಂದ ಅವರನ್ನು ಅಮಾನತು ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಪದೇ ಪದೇ ಅಡ್ಡಿ ಮಾಡಿದ ಆರೋಪ ಹೊರಿಸಿ ಅವರನ್ನು ಅನಿರ್ದಿಷ್ಟಅವಧಿಗೆ ಸ್ಪೀಕರ್ ಓಂ ಬಿರ್ಲಾ ಸಸ್ಪೆಂಡ್ ಮಾಡಿದ್ದರು.
ಬಿಜೆಪಿಯಲ್ಲಿ ಟಿಕೆಟ್ ಮಾರಿಕೊಳ್ಳುವ ಪರಿಪಾಠ ಶುರು: ಜಗದೀಶ್ ಶೆಟ್ಟರ್
ಇದರ ಬೆನ್ನಲ್ಲೇ ವಿಶೇಷಾಧಿಕಾರ ಸಮಿತಿ ಮುಂದೆ ಚೌಧರಿ ಹಾಜರಾಗಿ ತಾವು ಮಾಡಿದ ಕೆಲವು ಟೀಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು ಹಾಗೂ ಯಾರಿಗೂ ನೋವು ಉಂಟು ಮಾಡುವ ಉದ್ದೇಶ ಇರಲಿಲ್ಲ ಎಂದರು. ಹೀಗಾಗಿ ಅವರ ಅಮಾನತು ರದ್ದು ಮಾಡಲು ಸಭೆ ನಿರ್ಣಯ ಕೈಗೊಂಡಿತು ಎಂದು ತಿಳಿಸಲಾಗಿದೆ. ಚೌಧರಿ ಅಮಾನತು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿತ್ತು. ಸದನದ ನಾಯಕರೊಬ್ಬರನ್ನು ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ಪಕ್ಷ ಕಿಡಿಕಾರಿತ್ತು.
ಅಧೀರ್ ಅಮಾನತು ವಿರುದ್ಧ ಸುಪ್ರೀಂಗೆ: ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸದನದಿಂದ ಅನಿರ್ದಿಷ್ಟಅವಧಿಗೆ ಅಮಾನತು ಮಾಡಿದ್ದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿ. ಶುಕ್ರವಾರದ ಕಲಾಪ ಬಹಿಷ್ಕರಿಸಿದೆ ಹಾಗೂ ಸುಪ್ರೀಂ ಕೋರ್ಚ್ ಮೊರೆ ಹೋಗುವ ಸುಳಿವು ನೀಡಿದೆ. ಸಂಸತಿನ ಅಂಬೇಡ್ಕರ್ ಪ್ರತಿಮೆ ಮುಂದೆ ಅಮಾನತು ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕ್ಷುಲ್ಲಕ ಕಾರಣಕ್ಕೆ ಅಧೀರ್ ಅವರನ್ನು ಅಮಾನತು ಮಾಡಲಾಗಿದೆ. ಅಧೀರ್ ಅವರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರೂ ಹೌದು. ಇದು ಮಹತ್ವದ ಹುದ್ದೆ. ಅವರು ಸಮಿತಿ ಸಭೆಯಲ್ಲಿ ಭಾಗವಹಿಸುವುದನ್ನು ತಡೆವ ಗುಪ್ತ ಉದ್ದೇಶ ಇರಿಸಿಕೊಂಡು ಅಮಾನತು ಮಾಡಲಾಗಿದೆ’ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾಗಿರಿ, ದಬ್ಬಾಳಿಕೆ ಆರಂಭ: ರೂಪಾಲಿ ನಾಯ್ಕ
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮಾತನಾಡಿ, ‘ಈ ಅಮಾನತು ಕ್ರಮವು ಸುಪ್ರೀಂ ಕೋರ್ಚ್‌ನಲ್ಲಿ ಪ್ರಶ್ನಿಸಲು ಅತ್ಯಂತ ಪ್ರಶಸ್ತ ವಿಷಯ’ ಎಂದರು. ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸಿದರು ಎಂಬ ಆರೋಪ ಹೊರಿಸಿ ಅಧೀರ್‌ರನ್ನು ಗುರುವಾರ ಸದನದಿಂದ ಅಮಾನತು ಮಾಡಲಾಗಿತ್ತು. ಸಂಸತ್ತಿನ ಹಕ್ಕುಬಾಧ್ಯತಾ ಸಮಿತಿ, ಸಭಾಪತಿಗೆ ವರದಿ ನೀಡುವವರೆಗೂ ಅಧೀರ್ ಅಮಾನತು ಜಾರಿಯಲ್ಲಿರುತ್ತದೆ. ವರದಿ ನೀಡಲು ಯಾವುದೇ ಕಾಲಮಿತಿ ಇಲ್ಲ.
