ಭುವನೇಶ್ವರ್‌[ನ.20]: ಸದನಲ್ಲಿ ಸದಸ್ಯರು ಗದ್ದಲ ಗಲಾಟೆ ಎಬ್ಬಿಸುವುದು ಸಾಮಾನ್ಯ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕ ತಾರಾ ಪ್ರಸಾದ್‌ ಭಾಹಿನಪತಿ ಎನ್ನುವವರು ತಮಗೆ ಪ್ರಶ್ನೆ ಕೇಳಲು ಅವಕಾಶ ನೀಡಿದ್ದಕ್ಕೆ ಸ್ಪೀಕರ್‌ಗೆ ಫ್ಲೈಯಿಂಗ್‌ ಕಿಸ್‌ ನೀಡಿ ಗಮನ ಸೆಳೆದಿದ್ದಾರೆ.

ಇದರಿಂದ ಇಡೀ ಸದನ ಒಮ್ಮೆ ನಗೆಗಡಲಲ್ಲಿ ಮುಳುಗಿತು. ಈ ಬಗ್ಗೆ ಸ್ಪಷ್ಟನೆ ನೀಡಿದ ಭಾಹಿನಪತಿ, ಎಲ್ಲರೂ ಪ್ರಶ್ನೆ ಕೇಳಲು ಎದ್ದು ನಿಂತಾಗ ತಮಗೇ ಮೊದಲು ಪ್ರಶ್ನೆ ಕೇಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೃತಜ್ಞತೆ ಸೂಚಿಸಲು ಸ್ಪೀಕರ್‌ ಎಸ್‌.ಎನ್‌. ಪತ್ರೋ ಅವರಿಗೆ ಫ್ಲೈಯಿಂಗ್‌ ಕಿಸ್‌ ನೀಡಿದೆ. ನನ್ನ ಬಗ್ಗೆ ಯಾರೂ ತಪ್ಪಾಗಿ ಭಾವಿಸಬಾರದು ಎಂದು ಹೇಳಿದರು.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕಣ್ಣು ಹೊಡೆದು ಮುಜುಗರಕ್ಕೀಡಾಗಿದ್ದರು.