ಕಾಂಗ್ರೆಸ್‌ಗೆ ಮುಖ್ಯ ಕಚೇರಿಯೂ ಕೈತಪ್ಪುವ ಭೀತಿ!| ಲೀಸ್ ಅವಧಿ ಮುಕ್ತಾಯವಾಗಿರುವ ಹಿನ್ನೆಲೆ| ನಾಲ್ಕು ಕಚೇರಿ ಖಾಲಿ ಮಾಡಲು ಸೂಚನೆ?
ನವದೆಹಲಿ(ಆ.06): ಕೆಲ ವರ್ಷಗಳಿಂದ ರಾಜಕೀಯವಾಗಿ ಭಾರೀ ನಷ್ಟಅನುಭವಿಸುತ್ತಿರುವ ಕಾಂಗ್ರೆಸ್, ಇದೀಗ ದೆಹಲಿಯಲ್ಲಿನ ಕೇಂದ್ರ ಕಚೇರಿಯನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ಲೀಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಐಸಿಸಿ ಕೇಂದ್ರ ಕಚೇರಿ ಸೇರಿದಂತೆ ಕಾಂಗ್ರೆಸ್ ವಶದಲ್ಲಿರುವ ನಾಲ್ಕು ಕಟ್ಟಡಗಳನ್ನು ತೊರೆಯುವಂತೆ ಶೀಘ್ರವೇ ಪಕ್ಷಕ್ಕೆ ಕೇಂದ್ರ ಸರ್ಕಾರ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಲೋಧಿ ಗಾರ್ಡನ್‌ನಲ್ಲಿರುವ ಸರ್ಕಾರಿ ಬಂಗಲೆ ತೊರೆಯುವಂತೆ ನೋಟಿಸ್ ನೀಡಿ ಅವರು ಕಟ್ಟಡ ತೊರೆದ ಬೆನ್ನಲ್ಲೇ, ಪಕ್ಷಕ್ಕೆ ಇಂಥದ್ದೊಂದು ಸಂಕಷ್ಟದ ಭೀತಿ ಎದುರಾಗಿದೆ.
ಕಾಂಗ್ರೆಸ್‌ಗೆ ಮತ್ತೆ ಸ್ವಾಗತ, ಆದ್ರೆ ಷರತ್ತು ಅನ್ವಯ!, ಏನ್ಮಾಡ್ತಾರೆ ಪೈಲಟ್?
ದೆಹಲಿಯ 24ನೇ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಮುಖ್ಯ ಕಚೇರಿ, 26ನೇ ಅಕ್ಬರ್ ರಸ್ತೆಯಲ್ಲಿರುವ ಸೇವಾದಳ ಕಚೇರಿ, 5 ರೈಸಿನಾ ರಸ್ತೆಯಲ್ಲಿರುವ ಯುವ ಕಾಂಗ್ರೆಸ್ ಕಚೇರಿ ಹಾಗೂ ಚಾಣಕ್ಯಪುರಿಯಲ್ಲಿರುವ ಇನ್ನೊಂದು ಕಚೇರಿಯನ್ನು ಖಾಲಿ ಮಾಡಲು ಖಾಲಿ ಮಾಡಲು ಕಾಂಗ್ರೆಸ್‌ಗೆ ಸೂಚನೆ ನೀಡಬೇಕು ಎಂದು ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇವುಗಳಿಗೆ ನೀಡಲಾಗಿದ್ದ ಲೀಸ್ ಅವಧಿ ಮುಕ್ತಾಯವಾಗಿದ್ದು, ಹೀಗಾಗಿ ಖಾಲಿ ಮಾಡಲು ನಿರ್ದೇಶಿಸಬೇಕು ಎಂದು ಹೇಳಿದೆ.
ಸಿದ್ದರಾಮಯ್ಯಗೆ ಕೊರೋನಾ ದೃಢ, ಮೊಮ್ಮಗ ಕ್ವಾರಂಟೈನ್!
ಹೊಸ ಕಚೇರಿ ನಿರ್ಮಾಣ ಮಾಡುವ ವರೆಗೆ ಈ ಕಚೇರಿಯನ್ನು 3 ವರ್ಷಗಳ ಕಾಲ 2010ರಲ್ಲಿ ಲೀಸ್‌ಗೆ ನೀಡಲಾಗಿತ್ತು. ಆದರೆ ಈಗ ಲೀಸ್ ಅವಧಿ ಮುಗಿದು 7 ವರ್ಷಗಳೇ ಕಳೆದಿವೆ. 2018ರಲ್ಲೇನ ಕಚೇರಿ ತೆರವಿಗೆ ಸೂಚನೆ ನೀಡಬೇಕು ಎಂದು ಶಿಫಾರಸ್ಸು ಮಾಡಿದ್ದರೂ, 2019ರ ಲೋಕಸಭಾ ಚುನಾವಣೆ ದೃಷ್ಠಿಯಿಂದ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಇದೀಗ ನಗರಾಭಿವೃದ್ಧಿ ಸಚಿವಾಲಯ ಹೊಸ ಶಿಫಾರಸ್ಸು ಮಾಡಿದೆ.
