ಜೈಪುರ(ಸೆ.12): ರಾಜಸ್ಥಾನ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲು ಹೊರಟಿದ್ದ ನಾಯಕ ಸಚಿನ್ ಪೈಲೈಟ್ ಮತ್ತೆ ಫಕ್ಷ ಸೇರಿಕೊಂಡು ಹಲವು ದಿನಗಳಾಗಿವೆ. ಮುನಿಸು ಬದಿಗಿಟ್ಟು ರಾಜಿಯಾಗಿದ್ದರು. ಬಳಿಕ ಕೊಂಚ ಸೈಲೆಂಟ್ ಆಗಿದ್ದ ಸಚಿನ್ ಪೈಲೆಟ್ ಇದೀಗ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸುತ್ತಿರುವ ರಾಹುಲ್ ಗಾಂಧಿಗೆ ಬೆಂಬಲ ಸೂಚಿಸಿದ್ದಾರೆ. ಇಷ್ಟೇ ಪೈಲೆಟ್ ಕೂಡ ಮೋದಿ ವಿರುದ್ಧ ಗುಡುಗಿದ್ದಾರೆ.

ಬಂಡಾಯ ನಾಯಕ ಪೈಲಟ್ ಮೆತ್ತಗಾಗಿದ್ದರ ಅಸಲಿಯತ್ತು: ತೆರೆ ಹಿಂದಿನ ರಹಸ್ಯವಿದು!

ಭಾರತದ ಆರ್ಥಿಕತೆಯನ್ನು ನರೇಂದ್ರ ಮೋದಿ ಸರ್ಕಾರ ಪಾತಾಳಕ್ಕೆ ತಳ್ಳಿದೆ. ಈ ಕುರಿತು ರಾಹುಲ್ ಗಾಂಧಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದ್ದಕೆ ನ್ಯಾಯ ಸಿಗಬೇಕಿದೆ ಎಂದು ಸಚಿನ್ ಪೈಲೈಟ್ ಹೇಳಿದ್ದಾರೆ. ಭಾರತದ ಆರ್ಥಿಕ ಕುಸಿತ ಅನುಭವಿಸುತ್ತಿದೆ. 2.10 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೋಟಿ ಕೋಟಿ ಜನರ ವೇತನ ಕಡಿತವಾಗುತ್ತಿದೆ. ಮತ್ತೊಂದೆಡೆ ಚೀನಾ ನಮ್ಮ ಪ್ರದೇಶ ಆಕ್ರಮಿಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಭಾರತದ ಬಲಿಯಾಗುತ್ತಿದೆ ಎಂದು ಸಚಿನ್ ಪೈಲೆಟ್ ಹೇಳಿದ್ದಾರೆ.

ವಿಶ್ವಾಸಮತ ಗೆದ್ದ ಗೆಹ್ಲೋಟ್‌: 6 ತಿಂಗಳು ಸರ್ಕಾರ ಸೇಫ್‌!

ಭಾರತ ಹಾಗೂ ಚೀನಾ ಗಡಿ ಸಂಘರ್ಷದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರಣಿ ಟ್ವೀಟ್ ಮಾಡಿ ಕೇಂದ್ರ ಸರ್ಕಾರ ಜನತೆ ಸ್ಪಷ್ಟನೆ ನೀಡಬೇಕು ಎಂದಿದ್ದರು. ಇನ್ನು ಆರ್ಥಿಕ ಕುಸಿತ ಕುರಿತು ಮಾತನಾಡಿದ್ದರು. ಇದೀಗ ಸಚಿನ್ ಪೈಲೆಟ್ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿ ಸರ್ಕಾರ ಸರಿಯಾಗಿ ಕೋವಿಡ್ 19 ನಿಯಂತ್ರಿಸಲಿಲ್ಲ, ಇತ್ತ ಆರ್ಥಿಕತೆಗೆ ಚೇತರಿಕೆ ನೀಡುವ ಪ್ರಯತನ್ನವನ್ನೂ ಮಾಡಿಲ್ಲ ಎಂದು ಗುಡುಗಿದ್ದಾರೆ