ಲಖನೌ (ಫೆ.12): ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಪ್ರಿಯಾಂಕಾ ಗಾಂಧಿ ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಅಲಹಾಬಾದ್‌ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. 

ಸಂಗಮವು ಗಂಗಾ, ಯಮುನಾ ಮತ್ತು ಸರಸ್ವತಿ ಮೂರೂ ನದಿಗಳು ಕೂಡುವ ಪವಿತ್ರ ಸ್ಥಳವಾಗಿದೆ. ಈ ವೇಳೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಪುತ್ರಿ ಮತ್ತು ಕಾಂಗ್ರೆಸ್‌ ಶಾಸಕಿ ಆರಾಧನಾ ಮಿಶ್ರಾ ಅವರೂ ಇದ್ದರು.

 

 ಪವಿತ್ರ ಸ್ನಾನದ ಬಳಿಕ ಆನಂದ ಭವನಕ್ಕೆ ಭೇಟಿ ನೀಡಿ ನಿರ್ಗತಿಕ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಹೆಣ್ಣುಮಗುವೊಂದನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದು ವಿಶೇಷವಾಗಿತ್ತು.