ನವದೆಹಲಿ(ಜು.30): ಆಗಸ್ಟ್ 1ರ ಬಳಿಕ ಭದ್ರತಾ ಕಾರಣಕ್ಕೆ ನೀಡಿದ್ದ ಸರ್ಕಾರಿ ಬಂಗಲೆಯಲ್ಲಿ ಉಳಿದರೆ ದಂಡ ಹಾಗೂ ಬಾಡಿಗೆ ಕಟ್ಟಬೇಕು ಎಂಬ ಎಚ್ಚರಿಕೆ ಬೆನ್ನಲ್ಲೇ ಇದೀಗ  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ತಮ್ಮ ಅಧಿಕೃತ ಸರ್ಕಾರಿ ಬಂಗಲೆ ತೆರವು ಮಾಡಿದ್ದಾರೆ.  ಲೋದಿ ಎಸ್ಟೇಟ್ 35 ಬಂಗಲೆಯಲ್ಲಿನ ವಸ್ತುಗಳನ್ನು ಖಾಲಿ ಮಾಡಿದ ಪ್ರಿಯಾಂಕಾ ಮನೆ ಕೀಯನ್ನು CPWD(ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್) ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. 

ಕಾಮಿಡಿ ಸರ್ಕಸ್ ಬಿಡಿ: ಮೋದಿ ನಕ್ಕರಾ ಅಕ್ಕ-ತಮ್ಮಂದಿರ ವಾಗ್ದಾಳಿ ನೋಡಿ?.

ಲೋದಿ ಎಸ್ಟೇಟ್ 25 ಮನೆ ಖಾಲಿ ಮಾಡುವ ಮುನ್ನ ಬಾಕಿ ಉಳಿಸಿದ್ದ ನೀರಿನ ಬಿಲ್, ವಿದ್ಯುತ್ ಬಿಲ್ ಪಾವತಿಸಿದ್ದಾರೆ. ಬಳಿಕ ಮನೆ ಕೀಯನ್ನು ಹಸ್ತಾಂತರಿಸಿದ ಪ್ರಿಯಾಂಕಾ ವಾದ್ರಾ ಲೋದಿ ಎಸ್ಟೇಟ್ 25 ಸರ್ಕಾರಿ ಬಂಗಲೆಯಿಂದ ಹೊರನಡೆದಿದ್ದಾರೆ. ಈ ಮೂಲಕ ಸುದೀರ್ಘ ದಿನಗಳ ವಾಕ್ಸಮರಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ್ದಾರೆ.

 

ಹಕ್ಕು ಕಸಿಯುವುದು ದೇಶದ್ರೋಹಿ ಕೃತ್ಯಕ್ಕಿಂತ ಹೀನ: ಪ್ರಿಯಾಂಕಾ!

ಪ್ರಿಯಾಂಕ ವಾದ್ರಾ ಗಾಂಧಿಗೆ ಭದ್ರತಾ ಕಾರಣಕ್ಕೆ ಸರ್ಕಾರಿ ಬಂಗಲೆ ನೀಡಲಾಗಿತ್ತು. ಜುಲೈ 1 ರಂದು ಕೇಂದ್ರ ಸರ್ಕಾರ ಸರ್ಕಾರ ಬಂಗಲೆ ತೆರವು ಮಾಡುವಂತೆ ನೊಟೀಸ್ ನೀಡಿತ್ತು. ಆಗಸ್ಟ್ 1 ರೊಳಗೆ ಬಂಗಲೆ ತೆರವು ಮಾಡಬೇಕು. ಇಲ್ಲವಾದಲ್ಲಿ ದಂಡ ಹಾಗೂ ಬಾಡಿಗೆ ನೀಡಬೇಕು ಎಂದು ನೊಟೀಸ್‌ನಲ್ಲಿ ಸೂಚಿಸಲಾಗಿತ್ತು.

ನೊಟೀಸ್ ಬೆನ್ನಲ್ಲೇ ಪ್ರಿಯಾಂಕ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ  ವಿರುದ್ಧ ಕಿಡಿ ಕಾರಿದ್ದರು. ಇದು ದ್ವೇಷದ ರಾಜಕಾರಣ. ಬಿಜೆಪಿ ಸರ್ಕಾರದಿಂದ ಇದಕ್ಕಿಂತ ಬೇರೇನು ನಿರೀಕ್ಷಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರನ್ನು ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡುತ್ದಿದೆ ಎಂದು ಆರೋಪಿಸಿತ್ತು. ಈ ಆರೋಪ-ಪತ್ಯಾರೋಪದ ನಡುವೆ ಇದೀಗ ದಿಢೀರ್ ಪ್ರಿಯಾಂಕ ವಾದ್ರಾ ಗಾಂಧಿ ಬಂಗಲೆ ಖಾಲಿ ಮಾಡಿದ್ದಾರೆ.