ನವದೆಹಲಿ(ನ.16):  ಕಾಂಗ್ರೆಸ್ ಪ್ರಭಾವಿ ನಾಯಕ, ಆನಂದಪುರ್ ಸಾಹೀಬ್ ಸಂಸದ ಮನೀಶ್ ತಿವಾರಿಗೆ ಕೊರೋನಾ ವೈರಸ್ ತಗುಲಿದೆ. ಕಾಂಗ್ರೆಸ್ ನಾಯಕ ಅಹಮ್ಮದ್ ಪಟೇಲ್ ಬೆನ್ನಲ್ಲೇ ಇದೀಗ ಮನೀಶ್ ತಿವಾರಿಗೂ ಕೊರೋನಾ ಅಂಟಿಕೊಂಡಿರುವುದು ಹಲವರ ಆತಂತಕ್ಕೆ ಕಾರಣವಾಗಿದೆ.

ಕಾಂಗ್ರೆಸ್ಸಿಗ ಸೋನಿಯಾ ಆಪ್ತ ಅಹಮದ್‌ ಪಟೇಲ್‌ ಸ್ಥಿತಿ ಗಂಭೀರ!

ಮನೀಶ್ ತಿವಾರಿ ಟ್ವಿಟರ್ ಮೂಲಕ ತಮಗೆ ಕೊರೋನಾ ವೈರಸ್ ತಗುಲಿರುವುದಾಗಿ ಹೇಳಿದ್ದಾರೆ. ಇಂದು ಮಧ್ಯಾಹ್ನ ಕೊರೋನಾ ಪರೀಕ್ಷೆ ಮಾಡಿಸಿದಾಗ ನನಗೆ ಕೊರೋನಾ ಪಾಸಿಟೀವ್ ಇರುವುದು ದೃಢಪಟ್ಟಿದೆ. ಕಳೆದ ರಾತ್ರಿ 2 ಗಂಟೆಗೆ ಸಣ್ಣ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಬೆಳಗ್ಗೆ 2 ಪರೀಕ್ಷೆ ಮಾಡಿಸಿದ್ದೇನೆ. ಈ ವೇಳೆ ಕೊರೋನಾ ಪಾಸೀಟಿವ್ ದೃಢಪಟ್ಟಿದೆ. ಇತರ ಯಾವುದೇ ರೋಗ ಲಕ್ಷಣಗಳಿಲ್ಲ. ಕಳೆದ ಕೆಲ ದಿನಗಳಿಂದ ನನ್ನ ಜೊತೆ ಸಂಪರ್ಕಕ್ಕೆ ಬಂದ ಎಲ್ಲರೂ ಮುಂಚಾಗ್ರತೆ ವಹಿಸಿ ಎಂದು ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.

 

ಕೊರೋನಾ ವೈರಸ್ ಕಾರಣ ಕಾಂಗ್ರೆಸ್ ನಾಯಕ ಅಹಮ್ಮದ್ ಪಟೇಲ್ ಅವರನ್ನು ಆಸ್ಪತ್ರೆ ದಾಖಲಿಸಿದ ಮರು ದಿನವೇ ಮತ್ತೋರ್ವ ಕಾಂಗ್ರೆಸ್ ನಾಯಕನಲ್ಲಿ ಕೊರೋನಾ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಅಹಮ್ಮದ್ ಪಟೇಲ್ ಗುರುಗ್ರಾಂದಲ್ಲಿರುವ ಮೆಂದಾಂತ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.