ನವದೆಹಲಿ(n.೧೬): ಕೆಲ ದಿನಗಳ ಹಿಂದಷ್ಟೇ ಕೋವಿಡ್‌ಗೆ ತುತ್ತಾಗಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್‌ ಪಟೇಲ್‌ ಅವರ ಆರೋಗ್ಯ ಬಿಗಡಾಯಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

71 ವರ್ಷದ ಪಟೇಲ್‌ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ. ಅವರು ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿ ಎಂದು ಅವರ ಪುತ್ರ ಫೈಸಲ್‌ ವಿನಂತಿಸಿದ್ದಾರೆ.

"

ಅ.1ರಂದು ಪಟೇಲ್‌ ಅವರಿಗೆ ಕೋವಿಡ್‌ ತಗುಲಿತ್ತು. ಈ ನಡುವೆ, ಹಿರಿಯ ನಾಯಕನ ಆರೋಗ್ಯ ಸುಧಾರಣೆಗೆ ಹಲವು ಕಾಂಗ್ರೆಸ್‌ ನಾಯಕರು ಪ್ರಾರ್ಥಿಸಿದ್ದಾರೆ.