: 275 ಜನರನ್ನು ಬಲಿಪಡೆದ ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದ ತನಿಖೆಯನ್ನು ರೈಲ್ವೆ ಇಲಾಖೆಯು ಸಿಬಿಐಗೆ ನೀಡಿದ್ದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.
ನವದೆಹಲಿ: 275 ಜನರನ್ನು ಬಲಿಪಡೆದ ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದ ತನಿಖೆಯನ್ನು ರೈಲ್ವೆ ಇಲಾಖೆಯು ಸಿಬಿಐಗೆ ನೀಡಿದ್ದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಇದರಲ್ಲಿ ಖರ್ಗೆ, ತನಿಖಾ ಸಂಸ್ಥೆಗಳು ಇರುವುದು ಅಪರಾಧವನ್ನು ತನಿಖೆ ಮಾಡಲು ಹೊರತು ರೈಲು ಅಪಘಾತಗಳನ್ನು ತನಿಖೆ ಮಾಡಲು ಅಲ್ಲ. ತಾಂತ್ರಿಕ ದೋಷ, ಸಾಂಸ್ಥಿಕ ವೈಫಲ್ಯ ಮತ್ತು ರಾಜಕೀಯ ವೈಫಲ್ಯಗಳನ್ನು (Political Failure) ಸಿಬಿಐ ತನಿಖೆ (CBI Investigation) ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ತಮ್ಮ ಸುದೀರ್ಘ ನಾಲ್ಕು ಪುಟಗಳ ಪತ್ರದಲ್ಲಿ ರೈಲು ದುರಂತವನ್ನು ಭಾರತೀಯ ಇತಿಹಾಸಲ್ಲೇ ಅತ್ಯಂತ ಕೆಟ್ಟ ಘಟನೆ ಎಂದು ಬೇಸರಿಸಿರುವ ಖರ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini vaishnav) ಅವರ ಎಲ್ಲಾ ಖಾಲಿ ಸುರಕ್ಷತಾ ಕ್ರಮಗಳು ಬಯಲಾಗಿವೆ. ಹದಗೆಟ್ಟಿರುವ ರೈಲ್ವೆ ಸುರಕ್ಷತೆ ಬಗ್ಗೆ ಸಾಮಾನ್ಯ ಪ್ರಯಾಣಿಕರಲ್ಲಿ ಗಂಭೀರ ಕಳವಳ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರವು ಈ ಭೀಕರ ಅಪಘಾತದ ನಿಜವಾದ ಕಾರಣಗಳನ್ನು ಕಂಡು ಹಿಡಿದು ಬೆಳಕಿಗೆ ತರಬೇಕು. ಇದು ಸರ್ಕಾರದ ಕರ್ತವ್ಯವಾಗಿದೆ ಎಂದು ಆಗ್ರಹಿಸಿದ್ದಾರೆ.
ರೈಲು ದುರಂತ ಸ್ಥಳದಲ್ಲಿ 3 ರಾತ್ರಿ, 2 ಹಗಲು ಬಿಡುವಿಲ್ಲದೆ ಕಳೆದ ರೈಲ್ವೆ ಸಚಿವ ವೈಷ್ಣವ್
ಅಲ್ಲದೇ ರೈಲ್ವೆಯನ್ನು ತಳಮಟ್ಟದಿಂದ ಬಲಪಡಿಸುವತ್ತ ಗಮನ ಹರಿಸುವ ಬದಲು ಸುದ್ದಿಯಲ್ಲಿರಲು ಕೇವಲ ‘ಟಚ್ ಅಪ್’ (ತೋರ್ಪಡಿಕೆಗೆ ಮೇಲ್ನೋಟದ ಕೆಲಸ) ಮಾಡಲಾಗುತ್ತಿದೆ. ಸರ್ಕಾರವು ರೈಲ್ವೆಗೆ ‘ಮಲತಾಯಿ ಧೋರಣೆ’ ಮಾಡುತ್ತಿದೆ. ದೋಷಪೂರಿತ ನಿರ್ಧಾರಗಳಿಂದ ರೈಲ್ವೆ ಪ್ರಯಾಣವನ್ನು ಅಸುರಕ್ಷಿತವನ್ನಾಗಿ ಮಾಡಲಾಗಿದೆ’ ಎಂದು ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
