ಮೊಯ್ಲಿ, HS ಬ್ಯಾಕೋಡ್ ಸೇರಿ ಮೂವರು ಕನ್ನಡಿಗರಿಗೆ ಸಂದ ಮಹತ್ವದ ಗೌರವ
ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೋಯ್ಲಿ ಹಾಗೂ ಕನ್ನಡ ಪ್ರಭ ವರದಿಗಾರರಾಗಿದ್ದ ಎಚ್.ಎಸ್ ಬ್ಯಾಕೋಡ್ ಸೇರಿ ಕನ್ನಡದ ಮೂವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಿಸಲಾಗಿದೆ.
ನವದೆಹಲಿ (ಮಾ.13): ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯ್ಲಿ ಸೇರಿದಂತೆ ಕನ್ನಡದ ಮೂವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟಿಸಲಾಗಿದೆ.
ವೀರಪ್ಪ ಮೊಯ್ಲಿ ಅವರು ಕನ್ನಡದಲ್ಲಿ ಬರೆದ ‘ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ’ ಮಹಾಕಾವ್ಯಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಇನ್ನು ಚಾಮರಾಜನಗರ ಜಿಲ್ಲೆಯ ಕೆ.ಎಸ್. ಮಹಾದೇವ ಸ್ವಾಮಿ (ಸ್ವಾಮಿ ಪೊನ್ನಚ್ಚಿ) ಅವರಿಗೆ ‘ಧೂಪದ ಮಕ್ಕಳು’ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭ್ಯವಾಗಿದೆ.
ಮೋದಿಗೆ CERAWeek ಪ್ರಶಸ್ತಿ: ಇದು ಸಮಸ್ತ ಭಾರತೀಯರಿಗೆ ಸಂದ ಅವಾರ್ಡ್ ಎಂದ ಪ್ರಧಾನಿ! .
ಶಿವಮೊಗ್ಗ ಜಿಲ್ಲೆಯವರಾದ ಎಚ್.ಎಸ್. ಬ್ಯಾಕೋಡ ಅವರಿಗೆ ‘ನಾನೂ ಅಂಬೇಡ್ಕರ್’ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ. ಬ್ಯಾಕೋಡ್ ಅವರು ಈ ಮುನ್ನ ‘ಕನ್ನಡಪ್ರಭ’ದ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.
ಒಟ್ಟು 20 ಲೇಖಕರು 2020ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ 20 ಭಾಷೆಗಳಲ್ಲಿ ಬರೆದ 7 ಕವಿತೆ ಪುಸ್ತಕಗಳು, 5 ಸಣ್ಣ ಕತೆಗಳು, 2 ನಾಟಕಗಳು ಮತ್ತೊ ಒಂದು ಮಹಾಕಾವ್ಯ ಹಾಗೂ ಒಂದು ಆತ್ಮಚರಿತ್ರೆಗಳು ಸಾಹಿತ್ಯ ಅಕಾಡೆಮಿ ವಿವಿಧ ಪ್ರಶಸ್ತಿಗೆ ಆಯ್ಕೆ ಆಗಿವೆ.