ಅಯ್ಯರ್ ಸೆಂಚುರಿ ಸೆಲೆಬ್ರೇಷನ್ ಇಮಿಟೇಟ್ ಮಾಡಿದ ರೋಹಿತ್, ವಿಡಿಯೋ ವೈರಲ್!

ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸೆಂಚುರಿ ಸೆಲೆಬ್ರೇಷನ್ ಹೇಗಿತ್ತು ಎಂದು ನಾಯಕ ರೋಹಿತ್ ಶರ್ಮಾ ಪೆವಿಲಿಯನ್‌ನಲ್ಲಿ ಕಾಪಿ ಮಾಡಿದ್ದಾರೆ. ಇದೀಗ ರೋಹಿತ್ ಶರ್ಮಾ ಇಮಿಟೇಶನ್ ವೈರಲ್ ಆಗಿದೆ.

ICC World Cup 2023 IND vs NZ Rohit sharma Imitate Shreyas Iyer Century celebration ckm

ಮುಂಬೈ(ನ.15) ನಾಯಕ ರೋಹಿತ್ ಶರ್ಮಾ ಇಮಿಟೇಟ್ ಮಾಡುವುದು, ಇತರರ ಸ್ಟೈಲ್ ಕಾಪಿ ಮಾಡುವುದು ತೀರಾ ವಿರಳ. ಏನಿದ್ದರೂ ಮಾತಿನಲ್ಲೇ ಕಮೆಂಟ್ ಪಾಸ್ ಮಾಡುತ್ತಾರೆ. ಉಳಿದಿದ್ದೆಲ್ಲಾ ಬ್ಯಾಟಿನ್ ಮೂಲಕ ಉತ್ತರ. ಇದೀಗ ನ್ಯೂಜಿಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಅಯ್ಯರ್ ಸೆಂಚುರಿ ಸೆಲೆಬ್ರೇಷನ್‌ನ್ನು ರೋಹಿತ್ ಶರ್ಮಾ ಡ್ರೆಸ್ಸಿಂಗ್‌ ರೂಂನಲ್ಲಿ ಇಮಿಟೇಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಶ್ರೇಯಸ್ ಅಯ್ಯರ್ ಕೇವಲ 67 ಎಸೆತದಲ್ಲಿ ಶತಕ ಪೂರೈಸಿದರು. ವಿರಾಟ್ ಕೊಹ್ಲಿ ದಾಖಲೆ ಸೆಂಚುರಿ ಬೆನ್ನಲ್ಲೇ ಅಯ್ಯರ್ ಕೂಡ ಶತಕ ಸಿಡಿಸಿದರು. ಸೆಂಚುರಿ ಬಳಿಕ ಶ್ರೇಯಸ್ ಅಯ್ಯರ್ ಎಲ್ಲರಂತೆ ಸಂಭ್ರಮ ಆಚರಿಸಿದ್ದಾರೆ. ಬ್ಯಾಟ್ ಎತ್ತಿ ಸೆಲೆಬ್ರೇಷನ್ ಮಾಡಿದ್ದಾರೆ. ಆದರೆ ಜೋಶ್ ಇಲ್ಲದ ಈ ಸೆಲೆಬ್ರೇಷನ್ ಹೇಗಿತ್ತು ಅನ್ನೋದನ್ನು ರೋಹಿತ್ ಶರ್ಮಾ ಇಮಿಟೇಶನ್ ಮಾಡಿ ತೋರಿಸಿದ್ದಾರೆ.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್‌ಗೆ ವಡಾ ಪಾವ್ ಎಂದ ಬೋಗ್ಲೆ, ಸಿಡಿದೆದ್ದ ಫ್ಯಾನ್ಸ್!

ಡ್ರೆಸ್ಸಿಂಗ್ ರೂಂನಲ್ಲಿ ರೋಹಿತ್ ಶರ್ಮಾ ಕೈಮೇಲಕ್ಕೆ ಎತ್ತಿ ನಿಧಾನವಾಗಿ ನಡೆದುಕೊಂಡು ಅಯ್ಯರ್ ಸೆಂಚುರಿ ಸಂಬ್ರಮದ ಝಲಕ್ ತೋರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ರೋಹಿತ್ ಶರ್ಮಾ ಅಯ್ಯರ್ ಸ್ಟೈಲ್ ಕಾಪಿ ಮಾಡುವ ಮೂಲಕ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮ ಡಬಲ್ ಮಾಡಿದ್ದಾರೆ.

 

 

ನ್ಯೂಜಿಲೆಂಡ್ ವಿರುದ್ದ ಸೆಮಿಫೈನಲ್ ಪಂದ್ಯದಲ್ಲಿ ಸೆಂಚುರಿ ದಾಖಲಿಸುವ ಮೂಲಕ ಶ್ರೇಯಸ್ ಅಯ್ಯರ್, ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ದಾಖಲೆ ಪಟ್ಟಿಗೆ ಸೇರಿಕೊಂಡಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸತತ ಸೆಂಚುರಿ ಸಿಡಿಸಿದ ಭಾರತದ 3ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸತತ 3 ಸೆಂಚುರಿ ಸಿಡಿಸಿದ್ದರು. ಇನ್ನು 1999ರ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಸತತ 2 ಸೆಂಚುರಿ ಸಾಧನೆ ಮಾಡಿದ್ದಾರೆ. ಇದೀಗ ಶ್ರೇಯಸ್ ಅಯ್ಯರ್ ಕಳೆದ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ದ ಹಾಗೂ ಸೆಮಿಪೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಂಚುರಿ ಸಾಧನೆ ಮಾಡಿದ್ದಾರೆ.

ಸಚಿನ್ ವಿದಾಯದ ಪಂದ್ಯ ಆಡಿದ ಅದೇ ದಿನ, ಅದೇ ಮೈದಾನದಲ್ಲಿ ಕೊಹ್ಲಿ 50ನೇ ಶತಕ!

ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಎಸತದಲ್ಲಿ ಸೆಂಚುರಿ ಪೂರೈಸಿದ ಭಾರತದ ಕ್ರಿಕೆಟಿಗರ ಸಾಲಿನಲ್ಲಿ ಅಯ್ಯರ್ 3ನೇ ಸ್ಥಾನ ಅಲಂಕರಿಸಿದ್ದಾರೆ. ನೆದರ್ಲೆಂಡ್ ವಿರುದ್ದ ಕೆಎಲ್ ರಾಹುಲ್ 62 ಎಸೆತದಲ್ಲಿ ಸೆಂಚುರಿ ದಾಖಲಿಸಿದ್ದರೆ, ಇದೇ ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ಧ ರೋಹಿತ್ ಶರ್ಮಾ 63 ಎಸೆತದಲ್ಲಿ ಸೆಂಚುರಿ ಪೂರೈಸಿದ್ದರು. ಇದೀಗ ಅಯ್ಯರ್ 67 ಎಸೆತದಲ್ಲಿ ಶತಕ ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios