ನವದೆಹಲಿ, [ಫೆ.02]: ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

 ಇಂದು [ಭಾನುವಾರ] ಸಂಜೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಸೋನಿಯಾಗಿಂತ ರಾಹುಲ್‌ ಹೆಚ್ಚು ಜನಪ್ರಿಯ: ಸಮೀಕ್ಷೆಯಲ್ಲಿ ಬಹಿರಂಗ

73 ವರ್ಷದ ಸೋನಿಯಾ ಗಾಂಧಿ ಜ್ವರ ಹಾಗೂ ಅಸ್ತಮಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷದಿಂದ ಆಗಾಗ ಸೋನಿಯಾ ಗಾಂಧಿ ಅವರು ವೈದ್ಯಕೀಯ ಪರೀಕ್ಷೆಗಾಗಿ ಅಮೆರಿಕಾಕ್ಕೆ ತೆರಳುತ್ತಿದ್ದರು.

ಆದ್ರೆ, ಭಾನುವಾರ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು ಅಷ್ಟೇ. ಇದೀಗ ತಿಳಿದುಬಂದಿರುವ ಮಾಹಿತಿಯಂತೆ ಅವರು ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಈ ಹಿನ್ನೆಲೆಯಲ್ಲಿ ಯಾರು ಆತಂಕಪಡಬೇಕಿಲ್ಲ.