ನವದೆಹಲಿ[ಜ.28]: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆಹೊತ್ತು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ರಾಹುಲ್‌ ಗಾಂಧಿ ಅವರ ಜನಪ್ರಿಯತೆ ಕುಗ್ಗಿಲ್ಲ, ಬದಲಾಗಿ ಅವರ ಜನಪ್ರಿಯತೆ ಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಐಎಎನ್‌ಎಸ್‌-ಸಿ ವೋಟರ್‌ ನಡೆಸಿದ ಸಮೀಕ್ಷೆಯಲ್ಲಿ ಶೇ.49.5ರಷ್ಟುಜನ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಡಳಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರೆ, ಶೇ.50.5ರಷ್ಟುಜನ ತೃಪ್ತಿ ಹೊಂದಿಲ್ಲ ಎಂದಿದ್ದಾರೆ. ಅಂದರೆ ಶೇ.1.1ರಷ್ಟುಕೊರತೆ ಕಾಣಿಸಿದೆ. ಇದೇ ವೇಳೆ ರಾಹುಲ್‌ ಗಾಂಧಿ ಬಗ್ಗೆ ಶೇ.28.2ರಷ್ಟುಜನ ಅತ್ಯಂತ ತೃಪ್ತಿ ಮತ್ತು ಶೇ.24.6ರಷ್ಟುಅಲ್ಪ-ಸ್ವಲ್ಪ ತೃಪ್ತಿ ವ್ಯಕ್ತಪಡಿಸಿದ್ದಾರೆ. ಆದರೆ ಒಟ್ಟಾರೆ ಶೇ.47.2ರಷ್ಟುಜನ ರಾಹುಲ್‌ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಹೊಸ ಇಮೇಜ್‌ನೊಂದಿಗೆ ರಾಹುಲ್‌ ಮತ್ತೆ ಅಖಾಡಕ್ಕೆ!

ಅಂದರೆ ರಾಹುಲ್‌ ಬಗ್ಗೆ ಅತೃಪ್ತಿಗಿಂತಲೂ ಹೆಚ್ಚಿನ ಜನ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ವ್ಯತ್ಯಾಸದ ಪ್ರಮಾಣ ಶೇ.5.6ರಷ್ಟಿದೆ. ಅಂದರೆ ಸೋನಿಯಾ ನಕರಾತ್ಮಕ ರೇಟಿಂಗ್‌ ಹೊಂದಿದ್ದರೆ, ರಾಹುಲ್‌ ಶೇ.5.6ರಷ್ಟುಜನಪ್ರಿಯ ರೇಟಿಂಗ್‌ ಹೊಂದಿದ್ದಾರೆ. ಹೀಗಾಗಿ ಸೋನಿಯಾಗಿಂತಲೂ ರಾಹುಲ್‌ ಜನಪ್ರಿಯ ಎಂದು ಸಮೀಕ್ಷೆ ಹೇಳಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ರಾಹುಲ್‌ ಗಾಂಧಿ ಅವರ ರಾಜೀನಾಮೆ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಸೋನಿಯಾ ಅವರ ನಾಯಕತ್ವದಲ್ಲಿ ಜಾರ್ಖಂಡ್‌ ಮತ್ತು ಮಹಾರಾಷ್ಟ್ರ ಹಾಗೂ ಹರಾರ‍ಯಣ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. ಅಲ್ಲದೆ, ಜಾರ್ಖಂಡ್‌ನಲ್ಲಿ ಜೆಎಂಎಂ, ಆರ್‌ಜೆಡಿ ಮೈತ್ರಿ ಹಾಗೂ ಮಹಾರಾಷ್ಟ್ರದಲ್ಲಿ ಎನ್‌ಸಿಪಿ-ಶಿವಸೇನೆ ಜೊತೆಗೂಡಿ ಕಾಂಗ್ರೆಸ್‌ ಸರ್ಕಾರ ರಚನೆ ಮಾಡಿದೆ. ಆದರೂ ಸೋನಿಯಾ ಜನಪ್ರಿಯತೆ ಕುಸಿದಿದೆ.

ಕೇಂದ್ರದಲ್ಲಿ ಮತ್ತೆ ಬಿಜೆಪಿ, ಮೋದಿ ಪರ ಜನರ ಒಲವು: IANS, ಸಿ ವೋಟರ್‌ ಸಮೀಕ್ಷೆ!