ಗೋಮೂತ್ರದ ಹಲವು ಉಪಯೋಗಗಳ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ. ಈ ಮಧ್ಯೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಇಂದು ಸರ್ಕಾರದ ಆರೋಗ್ಯ ಇಲಾಖೆಯಿಂದ ಔಷಧ ತಯಾರಿಸಲು ಗೋಮೂತ್ರವನ್ನು ಖರೀದಿಸುವುದಾಗಿ ಘೋಷಿಸಿದ್ದಾರೆ. 

ರಾಯ್‌ಪುರ: ಗೋಮೂತ್ರದ ಹಲವು ಉಪಯೋಗಗಳ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ. ಈ ಮಧ್ಯೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಇಂದು ಸರ್ಕಾರದ ಆರೋಗ್ಯ ಇಲಾಖೆಯಿಂದ ಔಷಧ ತಯಾರಿಸಲು ಗೋಮೂತ್ರವನ್ನು ಖರೀದಿಸುವುದಾಗಿ ಘೋಷಿಸಿದ್ದಾರೆ. ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯಲ್ಲಿ ಎರಡು ಸ್ವತಂತ್ರ ಜಾನುವಾರು ಆಶ್ರಯ ಕೇಂದ್ರಗಳಲ್ಲಿ ಗೋಮೂತ್ರ ಸಂಗ್ರಹಣೆಯನ್ನು ಮಾಡಲು ನಿರ್ಧರಿಸಲಾಗಿದೆ. ಗೌತನ್ (ಜಾನುವಾರು ಆಶ್ರಯ ಕೇಂದ್ರ) ನಿರ್ವಹಣಾ ಸಮಿತಿಯು ಸ್ಥಳೀಯ ಮಟ್ಟದಲ್ಲಿ ಗೋಮೂತ್ರದ ದರವನ್ನು ನಿಗದಿಪಡಿಸಲಿದೆ. ಆದರೆ, ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆಯು ಪ್ರತಿ ಲೀಟರ್‌ ಗೋಮೂತ್ರಕ್ಕೆ ಕನಿಷ್ಠ 4 ರೂ. ನೀಡಲು ನಿರ್ಧರಿಸಿದೆ. 

ಹರೇಲಿ ಹಬ್ಬದಂದು ಗೋಮೂತ್ರ ಖರೀದಿ ಪ್ರಾರಂಭಿಸಲಾಗುವುದು. ಸಾವಯವ ಕೃಷಿಯನ್ನು ಉತ್ತೇಜಿಸುವುದರ ಜೊತೆಗೆ ನಾವು ಗೋಮೂತ್ರದಿಂದ ಔಷಧವನ್ನು ತಯಾರಿಸುತ್ತೇವೆ. ಕೇಂದ್ರ ಸರ್ಕಾರವು ಜೇಬಿನಿಂದ ಹಣವನ್ನು ತೆಗೆದುಕೊಳ್ಳುತ್ತಿರುವಾಗ ನಮ್ಮ ಸರ್ಕಾರವು ನೇರವಾಗಿ ಜನರ ಜೇಬಿಗೆ ಹಣವನ್ನು ಹಾಕುತ್ತಿದೆ ಎಂದು ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಬಾಘೆಲ್ ಪರೋಕ್ಷ ವಾಗ್ದಾಳಿ ನಡೆಸಿದರು.

Gadag; ಗೋಮೂತ್ರ, ಪಂಚಗವ್ಯ ಮೂಲಕ ಕ್ಯಾನ್ಸರ್ ಗೆ ಚಿಕಿತ್ಸೆ

ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವು ಜುಲೈ 28 ರಂದು ಸ್ಥಳೀಯ ಹಬ್ಬ 'ಹರೇಲಿ'ಯಿಂದ ಪ್ರತಿ ಲೀಟರ್‌ ಗೋಮೂತ್ರಕ್ಕೆ ಕನಿಷ್ಠ ರೂ 4 ನೀಡಿ ಖರೀದಿ ಪ್ರಾರಂಭಿಸಲಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಹಸುವಿನ ಸಗಣಿ ಸಂಗ್ರಹಣೆಯನ್ನು ಒಳಗೊಂಡಿರುವ ಪ್ರಮುಖ 'ಗೋಧನ್ ನ್ಯಾಯ್ ಯೋಜನೆ'ಯನ್ನು ಎರಡು ವರ್ಷಗಳ ಹಿಂದೆ ದನ-ಪಾಲಕರು, ಸಾವಯವ ಕೃಷಿಕರಿಗೆ ಆದಾಯವನ್ನು ಒದಗಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾಯಿತು ಎಂದು ಅವರು ಹೇಳಿದ್ದಾರೆ.

ಪ್ರತಿ ಜಿಲ್ಲೆಯಲ್ಲಿ ಗೋಶಾಲೆ, ಗೋಮೂತ್ರದಿಂದ ಸೋಪು, ಶಾಂಪು ತಯಾರಿ: ಸಚಿವ ಚವ್ಹಾಣ್‌!

ಕೃಷಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಹರೇಲಿ ಉತ್ಸವವನ್ನು ಪ್ರಾರಂಭಿಸುವ ಮೊದಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಗೌಧನ್ ನ್ಯಾಯ್ ಮಿಷನ್ ನಿರ್ದೇಶಕ ಅಯಾಜ್ ತಾಂಬೋಳಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಗೋಮೂತ್ರ (Cow Urine) ಮತ್ತು ಗೋಮೂತ್ರದ ಔಷಧೀಯ ಪ್ರಯೋಜನಗಳ ಬಗ್ಗೆ ಸಚಿವರು ಸೇರಿದಂತೆ ಜನರು ಸಾಮಾಜಿಕ ಮಾಧ್ಯಮದಲ್ಲಿ (Social Media) ಹೇಳಿಕೊಳ್ಳುವುದು ಸಾಮಾನ್ಯ. ಅಲ್ಲದೇ ಗೋಮೂತ್ರ ಬಳಕೆಯಿಂದಾಗುವ ಪ್ರಯೋಜನಗಳ ಬಗ್ಗೆ ಜನರು ಕ್ಯಾಮೆರಾ ಮುಂದೆ ಬಂದು ತಮ್ಮ ಅಭಿಪ್ರಾಯ (Opinion) ಹೇಳುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗುತ್ತವೆ. ಕೆಲವು ಬಾರಿ ಈ ವಿಷಯದ ಪರ ವಿರೋಧದ ಚರ್ಚೆಗಳು ಕೂಡ ನಡೆಯುತ್ತವೆ. ಕೆಲ ದಿನಗಳ ಹಿಂದೆ ಈ ವಿಚಾರಕ್ಕೆ ಇನ್ನಷ್ಟು ಪುಷ್ಟಿ ಎಂಬಂತೆ, ಹರಿಯಾಣದ ವೈದ್ಯರೊಬ್ಬರು ಹಸುವಿನ ಸಗಣಿ (Cow Dung) ತಿಂದು ಗೋಮೂತ್ರವನ್ನು ಕುಡಿದು ದೇಹ, ಮನಸ್ಸು ಮತ್ತು ಆತ್ಮವನ್ನು (Body Mind and Soul) ಶುದ್ಧಗೊಳಿಸಿಕೊಳ್ಳಿ ಎಂದು ವಿಡಿಯೋವೊಂದರಲ್ಲಿ ಹೇಳಿದ್ದರು. 

ಹರಿಯಾಣದ ಈ ವೈರಲ್ ಲೈವ್ (live) ವೀಡಿಯೊದಲ್ಲಿ, ಕರ್ನಾಲ್‌ನ ಡಾ ಮನೋಜ್ ಮಿತ್ತಲ್ (Manoj Mittal) ಅವರು ಕೆಲವು ಗೋವುಗಳಿಂದ ಸುತ್ತುವರಿದ ಹಸುವಿನ ಕೊಟ್ಟಿಗೆಯಲ್ಲಿ ನಿಂತಿದ್ದಾರೆ ಮತ್ತು ಕೈಯಲ್ಲಿ ಸಗಣಿಯನ್ನು ಹಿಡಿದಿದ್ದಾರೆ. ಅವರು ‘ಪಂಚಗವ್ಯ’ ಅಥವಾ ಪ್ರಾಣಿ ಒದಗಿಸುವ ಐದು ಅಂಶಗಳ ಬಗ್ಗೆ ವಿವರಿಸುವಾಗ, ಅವರು ಸ್ವಲ್ಪ ಪ್ರಮಾಣದ ಹಸುವಿನ ಸಗಣಿಯನ್ನು ಎತ್ತಿಕೊಂಡು ಅದನ್ನು ಬಾಯಿಗೆ ಹಾಕಿಕೊಳ್ಳುವುದನ್ನು ಕಾಣಬಹುದು. ಅವರ ತಾಯಿ ಅದನ್ನೇ ತಿನ್ನುವ ಮೂಲಕ ಉಪವಾಸ (Fast) ಮುರಿಯುತ್ತಿದ್ದರು ಎಂದು ಅವರು ಹೇಳಿದ್ದಾರೆ. ಜತೆಗೆ ಗೋಮೂತ್ರವನ್ನು ಸ್ವತಃ ಕುಡಿಯುವ ಮೂಲಕ ಇದು ದೇಹವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿದೆ ಮತ್ತು ರಕ್ತದೊತ್ತಡದ (Blood Pessure) ಸಮಸ್ಯೆಗಳನ್ನು ಹತೋಟಿಯಲ್ಲಿಡುತ್ತದೆ ಎಂದು ಹೇಳಿದ್ದರು.