ಕರ್ನಾಟಕ ಕಾಂಗ್ರೆಸ್‌ನ 9 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್, ಗ್ರಾಮಂತರದಿಂದ ಡಿಕೆ ಸುರೇಶ್?
ಲೋಕಸಭಾ ಚುನಾವಣೆ ಕಸರತ್ತು ತೀವ್ರಗೊಂಡಿದೆ. ಕಾಂಗ್ರೆಸ್ ಚುನಾವಣಾ ಸಮಿತಿ ಸತತ ಸಭೆ ನಡೆಸುತ್ತಿದೆ. ಈ ಸಭೆಯಲ್ಲಿ ದೇಶದ 40 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದೆ. ಈ ಪೈಕಿ ಕರ್ನಾಟಕ 9 ಕ್ಷೇತ್ರಗಳೂ ಇವೆ. ಡಿಕೆ ಸುರೇಶ್ ಸೇರಿದಂತೆ ಟಿಕೆಟ್ ಗಿಟ್ಟಿಸಿಕೊಳ್ಳಲಿರುವ 9 ಅಭ್ಯರ್ಥಿಗಳ ಪಟ್ಟಿ ಹಾಗೂ ಕ್ಷೇತ್ರ ಇಲ್ಲಿದೆ.
ದೆಹಲಿ(ಮಾ.08) ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಜ್ಜಾಗಿದೆ. ದೆಹಲಿಯಲ್ಲಿ ಸರಣಿ ಸಭೆ ನಡೆಸುತ್ತಿರುವ ಕಾಂಗ್ರೆಸ್ ದೇಶದ 40 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿದೆ. ಈ ಪೈಕಿ ಕರ್ನಾಟಕದ 9 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಂತರದಿಂದ ಡಿಕೆ ಸುರೇಶ್‌ಗೆ ಟಿಕೆಟ್ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ.
ಕರ್ನಾಟಕ 9 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಬಹುತೇಕ ಫೈನಲ್(ಸಂಭಾವ್ಯ ಪಟ್ಟಿ)
1 ಬೆಂಗಳೂರು ಗ್ರಾಮಾಂತರ; ಡಿಕೆ ಸುರೇಶ್
2 ಮಂಡ್ಯ; ಸ್ಟಾರ್ ಚಂದ್ರು
3 ವಿಜಯಪುರ; ರಾಜು ಹುಲುಗೂರು
4 ಬೀದರ್; ರಾಜಶೇಕರ್ ಪಾಟೀಲ್
5 ಹಾಸನ ಶ್ರೇಯಸ್ ಪಾಟಿಲ್
6 ತುಮಕೂರು; ಮುದ್ದೆ ಹನುಮೇ ಗೌಡ
7 ಚಿತ್ರದುರ್ಗ; ಬಿಎನ್ ಚಂದ್ರಪ್ಪ
8 ಕಲಬುರಗಿ; ರಾಧಾ ಕೃಷ್ಣ(ಮಲ್ಲಿಕಾರ್ಜುನ ಖರ್ಗೆ ಅಳಿಯ)
9 ರಾಯಚೂರು; ಕುಮಾರ್ ನಾಯ್ಕ್(ನಿವೃತ್ತಿ ಕೆಎಎಸ್ ಅಧಿಕಾರಿ)
ಸಿಎಂ ಆಗುವ ಅರ್ಹತೆ ಪರಮೇಶ್ವರ್‌ಗೆ ಇದೆ: ಸಚಿವ ಕೆ.ಎನ್.ರಾಜಣ್ಣ
ಇಂದು(ಮಾ.08 ಸಂಜೆಯೊಳಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ದೇಶದ 40 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಈ ಪಟ್ಟಿಯಲ್ಲಿ ರಾಹುಲ್ ಗಾಂಧಿ, ವೇಣುಗೋಪಾಲ್, ಶಶಿ ತರೂರ್ ಸೇರಿದಂತೆ ಹಲವು ದಿಗ್ಗಜರು ಇದ್ದಾರೆ. ರಾಹುಲ್ ಗಾಂಧಿಯ ವಯನಾಡು ಕ್ಷೇತ್ರದಿಂದ ಟಿಕೆಟ್ ಫೈನಲ್ ಆಗಿದೆ ಎಂದು ಮೂಲಗಲು ಹೇಳಿವೆ. ಆದರೆ ಅಮೇಥಿ ಕ್ಷೇತ್ರದ ಕುರಿತು ಚರ್ಚೆಗಳು ನಡೆಯುತ್ತಿದೆ. ಹೀಗಾಗಿ ಎರಡನೇ ಪಟ್ಟಿಯಲ್ಲಿ ಅಮೇಥಿ ಸೇರಿದಂತೆ ಇತರ ಕ್ಷೇತ್ರಗಳ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಕುರಿತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿ್ಕ್ರಿಯೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಕಾಂಗ್ರೆಸ್ ಚುನಾವಣಾ ಸಮಿತಿಗೆ ನೀಡಿದೆ. ಕೆಲ ಕ್ಷೇತ್ರಗಳ ಕುರಿತು ಚರ್ಚೆಯಾಗಿದೆ. ಯಾವ ಕ್ಷೇತ್ರ, ಯಾರು ಅನ್ನೋದು ಚುನಾವಣಾ ಸಮಿತಿ ನಿರ್ಧರಿಸಲಿದೆ. ಯಾರಿಗೆ ಫೈನಲ್ ಆಗಿದೆ ಅನ್ನೋ ಮಾಹಿತಿಯನ್ನು ಅವರೇ ಪ್ರಕಟಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿಯಿಂದ ನನಗೆ ಆಮಿಷ ಬಂದಿದ್ದು ನಿಜ: ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್