Asianet Suvarna News Asianet Suvarna News

Goa Assembly Election: ಪಕ್ಷಾಂತರ ತಡೆಗೆ ಗೋವಾ ಕಾಂಗ್ರೆಸ್‌ ಆಣೆ, ಪ್ರಮಾಣ..!

*   34 ಅಭ್ಯರ್ಥಿಗಳಿಂದ ಪ್ರತಿಜ್ಞೆ ಮಾಡಿಸಿದ ಪಕ್ಷ
*  ದೇಗುಲ, ಚರ್ಚ್‌, ಮಸೀದಿಯಲ್ಲಿ ಪ್ರಕ್ರಿಯೆ
*  ಈ ಕುರಿತ ಫೋಟೋ ಮತ್ತು ವಿಡಿಯೋ ಬಹಿರಂಗಪಡಿಸಿದ ಕಾಂಗ್ರೆಸ್‌ 
 

Congress Candidates Take Anti Defection Pledge in Goa grg
Author
Bengaluru, First Published Jan 24, 2022, 6:27 AM IST

ಪಣಜಿ(ಜ.24):  ಕಳೆದ 5 ವರ್ಷಗಳಲ್ಲಿ ಪಕ್ಷದ ಶಾಸಕರ ಪಕ್ಷಾಂತರ ಪರ್ವದಿಂದ ಕಂಗೆಟ್ಟಿರುವ ಕಾಂಗ್ರೆಸ್‌(Congress), ಈ ಬಾರಿ ಟಿಕೆಟ್‌ ನೀಡುವ ಹಂತದಲ್ಲೇ ಪಕ್ಷಾಂತರ ತಡೆಗೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ. ಇದರ ಭಾಗವಾಗಿ ವಿಧಾನಸಭಾ ಚುನಾವಣೆಗೆ(Assembly Election) ಪಕ್ಷದ ಟಿಕೆಟ್‌ ಪಡೆದಿರುವ 34 ಅಭ್ಯರ್ಥಿಗಳನ್ನು ಶನಿವಾರ ವಿಶೇಷ ಬಸ್ಸಿನಲ್ಲಿ ದೇವಸ್ಥಾನ(Temple), ಚರ್ಚ್‌(Church) ಮತ್ತು ದರ್ಗಾಗಳಿಗೆ(Dargah) ಕರೆದೊಯ್ದಿರುವ ಪಕ್ಷದ ನಾಯಕರು, ಗೆದ್ದ ಮೇಲೆ ಪಕ್ಷಾಂತರ(Defection) ಮಾಡುವುದಿಲ್ಲ ಎಂದು ಅವರೆಲ್ಲರಿಂದ ಆಣೆ- ಪ್ರಮಾಣ ಮಾಡಿಸಿಕೊಂಡಿದ್ದಾರೆ.

ಎಲ್ಲಾ 34 ಅಭ್ಯರ್ಥಿಗಳನ್ನು ಪಣಜಿಯ(Panajim) ಮಹಾಲಕ್ಷ್ಮೀ ದೇವಾಲಯ, ಬಂಬೋಲಿಮ್‌ನ ಚರ್ಚ್‌ ಮತ್ತು ಪಣಜಿ ಸಮೀಪದ ಬೇಟಿಂ ಎಂಬ ಹಳ್ಳಿಯ ದರ್ಗಾಕ್ಕೆ ಕರೆದೊಯ್ದು ‘ಚುನಾವಣೆಯಲ್ಲಿ ಗೆದ್ದ ಬಳಿಕವೂ ಹಣ, ಅಧಿಕಾರ ಸೇರಿದಂತೆ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ’ ಎಂದು ಪ್ರಮಾಣ ಮಾಡಿಸಿಕೊಳ್ಳಲಾಗಿದೆ. ಈ ಕುರಿತ ಫೋಟೋ ಮತ್ತು ವಿಡಿಯೋಗಳನ್ನು ಕಾಂಗ್ರೆಸ್‌ ಭಾನುವಾರ ಬಹಿರಂಗಪಡಿಸಿದೆ. ಶಾಸಕರ ಈ ಪ್ರಮಾಣದ ವೇಳೆ ರಾಜ್ಯದಲ್ಲಿ(Goa) ಪಕ್ಷದ ಉಸ್ತುವಾರಿಯಾಗಿರುವ ಪಿ.ಚಿದಂಬರಂ(P Chidambaram) ಕೂಡ ಉಪಸ್ಥಿತರಿದ್ದರು.

Congress Candidates Take Anti Defection Pledge in Goa grg

Goa Election 2022 ಗೋವಾದಲ್ಲಿ ಯಾವ ಪಕ್ಷ ಗೆದ್ದರೂ ಕನ್ನಡಿಗರದ್ದೇ ಹವಾ!

ಈ ಕುರಿತು ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್‌ ಚೋಡಂಕರ್‌(Girish Jodankar) ‘ಜನರ ಮನಸ್ಸಿನಲ್ಲಿ ಜನಪ್ರತಿನಿಧಿಗಳ ಕುರಿತು ಭರವಸೆ ಮೂಡಿಸುವ ನಿಟ್ಟಿನಲ್ಲಿ, ಎಲ್ಲಾ ಅಭ್ಯರ್ಥಿಗಳನ್ನೂ ದೇವರ ಮುಂದೆ ಕರೆದೊಯ್ದು ಪಕ್ಷಾಂತರ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದಕ್ಕೆ ಕಾರಣವೇನು?:

2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 40 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆದ್ದು ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಇದರಲ್ಲಿ 15 ಶಾಸಕರು ಬಿಜೆಪಿಗೆ(BJP) ಪಕ್ಷಾಂತರವಾಗಿದ್ದು, ಕೇವಲ ಇಬ್ಬರು ಮಾತ್ರವೇ ಪಕ್ಷದಲ್ಲೇ ಉಳಿದುಕೊಂಡಿದ್ದಾರೆ. ಕಳೆದ 5 ವರ್ಷದಲ್ಲಿ ಗೋವಾ ವಿಧಾನಸಭೆಗೆ ಆಯ್ಕೆಯಾಗಿದ್ದ 40 ಜನರ ಪೈಕಿ ಶೇ.60ರಷ್ಟು ಅಂದರೆ 24 ಶಾಸಕರು ಪಕ್ಷ ಬದಲಾಯಿಸಿದ್ದಾರೆ.

ಏಕೆ ಈ ಕಸರತ್ತು?

- ಗೋವಾದ 40 ಕ್ಷೇತ್ರ ಪೈಕಿ 2017ರಲ್ಲಿ ಕಾಂಗ್ರೆಸ್‌ 17ರಲ್ಲಿ ಗೆದ್ದು, ಅತಿದೊಡ್ಡ ಪಕ್ಷವಾಗಿತ್ತು
- ಕಾಂಗ್ರೆಸ್‌ ಶಾಸಕರ ಸೆಳೆದು ಬಿಜೆಪಿ ಸರ್ಕಾರ ರಚಿಸಿದ್ದರಿಂದ ಪಕ್ಷಕ್ಕೆ ಮುಖಭಂಗವಾಗಿತ್ತು
- 5 ವರ್ಷಗಳ ಅವಧಿಯಲ್ಲಿ 15 ಕಾಂಗ್ರೆಸ್ಸಿಗರು ಪಕ್ಷಾಂತರ ಮಾಡಿದ್ದು, ಇಬ್ಬರಷ್ಟೆಉಳಿದಿದ್ದಾರೆ
- ಇದು ಮತ್ತೊಮ್ಮೆ ಆಗದಂತೆ ನೋಡಿಕೊಳ್ಳಲು ಅಭ್ಯರ್ಥಿಗಳಿಂದ ಕಾಂಗ್ರೆಸ್‌ ಆಣೆ ಮಾಡಿಸಿದೆ

Goa Elections: ಬಿಜೆಪಿಗೆ ಮತ್ತೊಂದು ಶಾಕ್, ಕಮಲ ಪಾಳಯಕ್ಕೆ ಮಾಜಿ ಸಿಎಂ ಗುಡ್‌ಬೈ!

ಬಿಜೆಪಿಗೆ ಇಕ್ಕಟ್ಟು, ಹಿಂದೆ ಸರಿಯಲು ಪರಿಕ್ಕರ್ ಪುತ್ರನ ಷರತ್ತು!

ಟಿಕೆಟ್‌ ನಿರಾಕರಿಸಿದ ಕಾರಣಕ್ಕೆ ಬಿಜೆಪಿಯನ್ನು ತೊರೆಯಲು ತೆಗೆದುಕೊಂಡ ನಿರ್ಧಾರ ಅತ್ಯಂತ ಕಠಿಣ ತೀರ್ಮಾನವಾಗಿತ್ತು. ಒಂದು ವೇಳೆ, ಬಿಜೆಪಿ ಈಗಲೂ ಪಣಜಿ ಕ್ಷೇತ್ರದಿಂದ ಉತ್ತಮರಿಗೆ ಟಿಕೆಟ್‌ ನೀಡಿದರೆ ಕಣದಿಂದ ಹಿಂದೆ ಸರಿಯಲು ಸಿದ್ಧ’ ಎಂದು ಮಾಜಿ ಮುಖ್ಯಮಂತ್ರಿ ಮನೋಹರ ಪರ್ರಿಕರ್‌(Manohar Parrikar) ಪುತ್ರ ಉತ್ಪಲ್‌ ಪರ್ರಿಕರ್‌(Utpal Parrikar) ತಿಳಿಸಿದ್ದಾರೆ. ತನ್ಮೂಲಕ ಅತ್ಯಾಚಾರ ಸೇರಿ ಹಲವು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಪಣಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಬುಷ್‌ ಮಾನ್ಸರೇಟ್‌ಗೆ ಟಾಂಗ್‌ ಕೊಟ್ಟಿದ್ದಾರೆ.

‘ಬಿಜೆಪಿ ನನ್ನ ಹೃದಯದಲ್ಲಿದೆ. ಅದರ ಆತ್ಮಕ್ಕಾಗಿ ನಾನು ಹೋರಾಡುತ್ತಿದ್ದೇನೆ. ನನ್ನ ನಿರ್ಧಾರದಿಂದ ನನಗೆ ಸಂತೋಷವಾಗಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ಉತ್ಪಲ್‌ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
 

Follow Us:
Download App:
  • android
  • ios