Asianet Suvarna News Asianet Suvarna News

ಲಾಕ್‌ಡೌನ್‌ನಲ್ಲಿ ಕಾಂಗ್ರೆಸಿಗರ ಹೈಡ್ರಾಮಾ, ರಾಹುಲ್‌ ಅಪಹಾಸ್ಯ ಮಾಡಿದ ಉದ್ಯಮಿ!

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಹೈಡ್ರಾಮಾ| ಸಾಮಾಜಿಕ ಅಂತರವೇ ಇಲ್ಲ| ವೈರಲ್ ಆಯ್ತು ವಿಡಿಯೋ

Congress cadre ransack Storia Foods office over advertisement mocking Rahul Gandhi pod
Author
Bangalore, First Published Apr 27, 2021, 5:41 PM IST | Last Updated Apr 27, 2021, 7:22 PM IST

ಮುಂಬೈ(ಏ.27): ಇಡೀ ದೇಶವೇ ಕೊರೋನಾದಿಂದಾಗಿ ನರಳುತ್ತಿದೆ, ಹೀಗಿದ್ದರೂ ರಾಜಕೀಯ ಪಕ್ಷಗಳು ಮಾತ್ರ ಈವರೆಗೂ ಯಾವುದೇ ಪಾಠ ಕಲಿತಿಲ್ಲ. ತಮ್ಮಿಚ್ಛೆಯಂತೆ, ತಮಗನಿಸಿದಂತೆ ನಡೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಿದ್ದರೂ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಇದು ಯಾವುದೇ ಪರಿಣಾಮ ಬೀರಿಲ್ಲ. ರಾಹುಲ್ ಗಾಂಧಿಗೆ ಅಪಹಾಸ್ಯ ಮಾಡಿದ ವ್ಯಾಪಾರಿಗೆ ಬುದ್ಧಿ ಕಲಿಸಬೇಕೆಂದು ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ವೀಕ್ಷಕರೆಲ್ಲರೂ ಕಾಂಗ್ರೆಸ್‌ ನಾಯಕರ ನಡೆ ಅವ್ಯವಹಾರಿಕ ಎಂದಿದ್ದಾರೆ.

ಕೋವಿಡ್ ಅಂಕಿ-ಸಂಖ್ಯೆಯನ್ನು ಸರ್ಕಾರ ಮುಚ್ಚಿಡುತ್ತಿದ್ಯಾ? ಸ್ಪಷ್ಟನೆ ಕೊಟ್ಟ ಸುಧಾಕರ್

ಏನಿದು ಪ್ರಕರಣ?

ಮುಂಬೈನಲ್ಲಿ ಕಂಪನಿಯೊಂದರ ಮಾಲೀಕನೊಬ್ಬ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯಂತೆ ಮಾತನಾಡಿ, ಅಪಹಾಸ್ಯ ಮಾಡಿದ್ದರು. ಆದರೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಈ ವಿಚಾರ ಹಿಡಿಸಲಿಲ್ಲ. ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಇದ್ದರೂ ಕಾಂಗ್ರೆಸ್‌ ಕಾರ್ಯಕರ್ತರು ಕಂಪನಿಯ ಮುಂಬೈನಲ್ಲಿರುವ ಕಚೇರಿಗೆ ತಲುಪಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದಾರೆ. ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡಿರುವ ಆ್ಯಡ್ ಮಾಡಿದ್ದಕ್ಕೆ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಕಂಪನಿ ಕೇಚರಿಗೆ ಮುತ್ತಿಗೆ ಹಾಕಿದ್ದು, ಕೈ ಕಾರ್ಯಕರ್ತರ ಈ ವರ್ತನೆಗೆ ಅಪಾರ ಟೀಕೆ ವ್ಯಕ್ತವಾಗಿದೆ. 

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ, ಲಾಕ್‌ಡೌನ್‌ನಲ್ಲಿ ಇದಕ್ಕೆ ಅವಕಾಶ ಇದ್ಯಾ ಎಂಬ ಪ್ರಶ್ನೆ

ಕಾಂಗ್ರೆಸ್‌ ಕಾರ್ಯಕರ್ತರ ಈ ವರ್ತನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅವಶ್ಯಕ ಸೇವೆಗಳ ಪಟ್ಟಿಯಲ್ಲಿ ಕಾಂಗ್ರೆಸ್‌ ನಾಯಕರ ಈ ಹೈಡ್ರಾಮಾ ಕೂಡಾ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲ ಬಳಕೆದಾರರು ಲಾಖ್‌ಡೌನ್ ವೇಳೆ ಇಂತಹ ಹೈಡ್ರಾಮಾಗೆ ಅವಕಾಶ ಇದೆಯಾ ಎಂದು ಸರ್ಕಾರದ ಕಾಲೆಳೆದಿದ್ದಾರೆ. 

Latest Videos
Follow Us:
Download App:
  • android
  • ios