ನವದೆಹಲಿ(ಏ.07): ಭಾನುವಾರ ಒಂದೇ ದಿನ 30 ಮಂದಿಯ ಸಾವಿಗೆ ಕಾರಣವಾಗಿದ್ದ ಕೊರೋನಾ ವೈರಸ್‌ ಸೋಮವಾರ ಮತ್ತೆ 11 ಮಂದಿಯನ್ನು ಬಲಿ ಪಡೆದಿದೆ. ಇದರೊಂದಿಗೆ ದೇಶದಲ್ಲಿ ಈ ಮಾರಕ ವೈರಸ್‌ಗೆ ಬಲಿಯಾದವರ ಸಂಖ್ಯೆ 129ಕ್ಕೇರಿಕೆಯಾಗಿದೆ.

ಕರ್ನಾಟಕದಲ್ಲಿ 12 ಮಂದಿ ಸೇರಿ ದೇಶದಲ್ಲಿ ಸೋಮವಾರ ಒಂದೇ ದಿನ 700ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಖಚಿತಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 4678ಕ್ಕೇರಿಕೆಯಾಗಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಹಾರಾಷ್ಟ್ರವೊಂದರಲ್ಲೇ ಸೋಮವಾರ 7 ಮಂದಿ ಸಾವಿಗೀಡಾಗಿದ್ದು, ಆ ರಾಜ್ಯದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 52ಕ್ಕೆ ಹೆಚ್ಚಳವಾಗಿದೆ.

10 ದಿನದಲ್ಲಿ ಹೆಚ್ಚು ಕೊರೋನಾ, ಮಾನಸಿಕವಾಗಿ ಸಿದ್ಧರಾಗಿ: ಡಾ. ದೇವಿ ಶೆಟ್ಟಿ

ಸೋಂಕಿತರಲ್ಲಿ 76% ಪುರುಷರು

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿರುವವರಲ್ಲಿ ಪುರುಷರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸೋಂಕಿತರಲ್ಲಿ ಶೇ.76ರಷ್ಟುಪುರುಷರಿದ್ದರೆ, ಕೇವಲ 24ರಷ್ಟುಮಹಿಳೆಯರಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೊರೋನಾ ಭೀತಿ: ಲಾಕ್‌ಡೌನ್‌ನಿಂದಾಗಿ ಸಾವಿನ ಸಂಖ್ಯೆ ಶೇ.50 ನಿಯಂತ್ರಣ

60 ವರ್ಷ ಮೇಲ್ಪಟ್ಟ ಶೇ.63ರಷ್ಟುಜನ ಸಾವು

ಹಿರಿಯರನ್ನೇ ಕೊರೋನಾ ಹೆಚ್ಚಾಗಿ ಕಾಡುತ್ತದೆ ಎಂಬುದಕ್ಕೆ ಇಂಬು ನೀಡುವಂತೆ ದೇಶದಲ್ಲಿ ಈ ವೈರಸ್‌ನಿಂದ ಸಾವಿಗೀಡಾದವರಲ್ಲಿ 60 ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನವರ ಸಂಖ್ಯೆ ಶೇ.63ರಷ್ಟಿದೆ. ಶೇ.30ರಷ್ಟುವ್ಯಕ್ತಿಗಳು 40ರಿಂದ 60 ವರ್ಷದೊಳಗಿದ್ದಾರೆ. 40 ವರ್ಷದೊಳಗಿನ ಮೃತರ ಸಂಖ್ಯೆ ಕೇವಲ ಶೇ.7ರಷ್ಟಿದೆ ಎಂದು ಸರ್ಕಾರ ಹೇಳಿದೆ.