ನವದೆಹಲಿ(ಏ.24): ಕೊರೋನಾ ಅವಧಿಯಲ್ಲಿ ಜೈಲಿನಲ್ಲಿ ಜನಸಾಂದ್ರತೆ ಕಡಿಮೆ ಮಾಡಲು ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಗಂಭೀರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಮೂವರಿಗೆ ದೆಹಲಿ ಹೈಕೋರ್ಟ್‌ ವಿನೂತನ ಷರತ್ತು ಒಡ್ಡಿ ಜಾಮೀನು ನೀಡಿದೆ. 

ಎಲ್ಲಾ ಮೂವರು ತಮ್ಮ ಮೊಬೈಲ್‌ ಅನ್ನು ಸದಾ ಕಾಲ ಚಾಲನಾ ಸ್ಥಿತಿಯಲ್ಲಿಡಬೇಕು, ಪ್ರತಿ ಶುಕ್ರವಾರ ಬೆಳಗ್ಗೆ ತನಿಖಾಧಿಕಾರಿಗಳಿಗೆ ವಿಡಿಯೋ ಕಾಲ್‌ ಮಾಡಬೇಕು. ಜೊತೆಗೆ ಗೂಗಲ್‌ ಮ್ಯಾಪ್‌ ಮೂಲಕ ತಾವು ಇರುವ ಸ್ಥಳವನ್ನು ಡ್ರಾಪ್‌ ಎ ಪಿನ್‌ ಮಾಡಬೇಕು. ಈ ಮೂಲಕ ತಾವಿರುವ ಸ್ಥಳದ ಬಗ್ಗೆ ಖಚಿತ ಮಾಹಿತಿ ಸಿಗುವಂತೆ ಮಾಡಬೇಕು ಎಂದು ಷರತ್ತು ವಿಧಿಸಿದೆ.

ಶ್ರೀಮಂತರನ್ನು ಹೊರಗಿಟ್ಟು ಮೀಸಲಾತಿ ಪರಿಷ್ಕರಿಸಿ: ಸುಪ್ರೀಂ

ಕೊರೋನಾ ಆಸ್ಪತ್ರೆಗಳಲ್ಲಿ ಮೊಬೈಲ್‌ ಬಳಕೆಗೆ ನಿಷೇಧ ಹೇರಿ ಬಂಗಾಳ ಆದೇಶ

ಕೊಲ್ಕತ್ತಾ: ಕೊರೋನಾ ಕಾಳಜಿ ಘಟಕ ಮತ್ತು ತೀವ್ರ ನಿಗಾ ಘಟಕಗಳಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿ ಪಶ್ಚಿಮ ಬಂಗಾಳ ಸರ್ಕಾರ ಆದೇಶ ಹೊರಡಿಸಿದೆ. ಈ ನಿಯಮ ವೈದ್ಯರು, ರೋಗಿಗಳು ಸೇರಿ ಎಲ್ಲರಿಗೂ ಅನ್ವಯವಾಗಲಿದ್ದು, ಆಸ್ಪತ್ರೆಗಳಲ್ಲಿ ಲ್ಯಾಂಡ್‌ಲೈನ್‌ ಫೋನ್‌ ಸೌಲಭ್ಯ ಇರಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ‍್ಯದರ್ಶಿ ರಾಜೀವ ಸಿನ್ಹಾ ತಿಳಿಸಿದ್ದಾರೆ. 

ಈ ಕುರಿತು ಮಾತನಾಡಿದ ಅವರು, ‘ಅತಿ ಹೆಚ್ಚು ಪ್ರಮಾಣದಲ್ಲಿ ಸೋಂಕು ಹಬ್ಬಿಸುವ ಸಾಧನ ಎಂದರೆ ಅದು ನಾವು ಬಳಸುವ ಮೊಬೈಲ್‌. ನಮ್ಮ ಪಾದರಕ್ಷೆಗಿಂತ ಹೆಚ್ಚಿನ ಸೂಕ್ಷ್ಮಾ ಣುಗಳನ್ನು ಮೊಬೈಲ್‌ ಹೊತ್ತೊಯ್ಯುತ್ತದೆ. ಇದೇ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಆಸ್ಪತ್ರೆಗಳಲ್ಲಾ ಐಸಿಯು ಮತ್ತು ಸಿಸಿಯುಗಳಲ್ಲಿ ಮೊಬೈಲ್‌ ಬಳಕೆಗೆ ನಿರ್ಬಂಧ ವಿಧಿಸುತ್ತವೆ’ ಎಂದಿದ್ದಾರೆ.