Asianet Suvarna News Asianet Suvarna News

ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ವಿರುದ್ಧ ದೂರು

ಪ್ರಧಾನಿಯನ್ನು ಪನೌತಿ (ಅಪಶಕುನ) ಮೋದಿ ಎಂದು ಹಾಗೂ ಜೇಬುಗಳ್ಳ ಎಂದು ಟೀಕಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ. ಇದೇ ವೇಳೆ, ಮೋದಿ ಗುಜರಾತ್‌ ಮುಖ್ಯಮಂತ್ರಿಯಾದ ನಂತರ ಅವರ ಜಾತಿ ಒಬಿಸಿ ಪಟ್ಟಿಗೆ ಸೇರಿತು ಎಂದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ನೀಡಿದೆ.

Complaint against Rahul Gandhi And AICC president Mallikarjun Kharge for Using bad words against Modi akb
Author
First Published Nov 23, 2023, 8:31 AM IST

ನವದೆಹಲಿ: ಪ್ರಧಾನಿಯನ್ನು ಪನೌತಿ (ಅಪಶಕುನ) ಮೋದಿ ಎಂದು ಹಾಗೂ ಜೇಬುಗಳ್ಳ ಎಂದು ಟೀಕಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ. ಇದೇ ವೇಳೆ, ಮೋದಿ ಗುಜರಾತ್‌ ಮುಖ್ಯಮಂತ್ರಿಯಾದ ನಂತರ ಅವರ ಜಾತಿ ಒಬಿಸಿ ಪಟ್ಟಿಗೆ ಸೇರಿತು ಎಂದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ನೀಡಿದೆ.

ಇನ್ನು ಇಂದಿರಾ ಗಾಂಧಿ ಅವರು 1982ರಲ್ಲಿ ಭಾರತವು ಪಾಕ್‌ ವಿರುದ್ಧ ಹಾಕಿ ಪಂದ್ಯ ಸೋಲುವ ಲಕ್ಷಣ ಕಾಣಿಸಿದ ಬೆನ್ನಲ್ಲೇ, ಪಂದ್ಯ ವೀಕ್ಷಿಸುತ್ತಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಸ್ಟೇಡಿಯಂನಿಂದ ನಿರ್ಗಮಿಸಿದ್ದರು. ಇದು ಆಟಗಾರರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿತ್ತು. ಆದರೆ ಮೋದಿ ಹಾಗಲ್ಲ. ಭಾರತವು ಕ್ರಿಕೆಟ್‌ನಲ್ಲಿ ಸೋತರೂ ಆಟಗಾರರಿಗೆ ಧೈರ್ಯ ತುಂಬಿದರು ಎಂದು ಬಿಜೆಪಿ ಹೇಳಿದೆ.

ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಅಜ್ಜಿ ನಿಧನ!

ಪ್ರಧಾನಿ ಮೋದಿ ಮೇಲೆ ನಿರಂತರವಾಗಿ ಹೀಗೆ ಟೀಕೆ ಮಾಡುತ್ತಿರುವ ಖರ್ಗೆ (Mallikarjun Kharge) ಹಾಗೂ ರಾಹುಲ್‌ ಗಾಂಧಿ (Rahul Gandhi) ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ಆಧಾರರಹಿತ ಮತ್ತು ಸಂಕುಚಿತ ಹೇಳಿಕೆಗಳನ್ನು ನೀಡದಂತೆ ನಿಷೇಧಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ.

ಮಂಗಳವಾರ ರಾಜಸ್ಥಾನ ಚುನಾವಣಾ ಪ್ರಚಾರ (Rajasthan Assembly Election) ಸಭೆಯಲ್ಲಿ ಮಾತನಾಡಿದ್ದ ರಾಹುಲ್‌, ‘ಗೆಲ್ಲಬೇಕಿದ್ದ ಕ್ರಿಕೆಟ್‌ ಪಂದ್ಯವನ್ನು ಭಾರತ ಸೋತಿತು. ಇದಕ್ಕೆ ಕಾರಣ ಅಪಶಕುನ. ಪಿಎಂ ಅಂದರೆ ಪನೌತಿ (ಅಪಶಕುನ) ಮೋದಿ’ ಎಂದಿದ್ದರು. ಇನ್ನು ಖರ್ಗೆ ಅವರು, ‘ಮೋದಿ ತಮ್ಮನ್ನು ತಾವು ಒಬಿಸಿ ನಾಯಕ ಎನ್ನುತ್ತಾರೆ. ಆದರೆ ಮೋದಿ ಗುಜರಾತ್‌ ಮುಖ್ಯಮಂತ್ರಿಯಾದ ನಂತರ ಅವರ ಜಾತಿ ಒಬಿಸಿ ಪಟ್ಟಿಗೆ ಸೇರಿತು. ಅಲ್ಲಿಯವರೆಗೂ ಮೋದಿ ಒಬಿಸಿ (OBC) ಆಗಿರಲಿಲ್ಲ ಎಂದಿದ್ದರು.

ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ: ಖರ್ಗೆ ಹೇಳಿಕೆ ವೈರಲ್‌; ಬಿಜೆಪಿ ಲೇವಡಿ

Latest Videos
Follow Us:
Download App:
  • android
  • ios