Asianet Suvarna News Asianet Suvarna News

ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಅಜ್ಜಿ ನಿಧನ!

ಪಾದಯಾತ್ರೆ ಮಾಡಿ ದಣಿದು ಬಂದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಅಜ್ಜಿ ಚಿಕ್ಕನಾಯಕನಹಳ್ಳಿಯ ಶಾರದಮ್ಮ(78) ನಿಧನರಾಗಿದ್ದಾರೆ.  ಇಳಿವಯಸ್ಸಿನಲ್ಲಿ ಫುಟ್ಪಾತ್‌ನಲ್ಲಿ ತರಕಾರಿ ಮಾರಾಟ ಮಾಡಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದ ವೃದ್ಧೆ ಶಾರದಮ್ಮ. ಆದರೆ ವಯೋ ಸಹಜ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.

Bharat jodo yatre rahul gandhi Age related illness chikkanayakanahalli Sharadamma passed away rav
Author
First Published Nov 21, 2023, 11:57 AM IST

ತುಮಕೂರು (ನ.21): ಪಾದಯಾತ್ರೆ ಮಾಡಿ ದಣಿದು ಬಂದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಅಜ್ಜಿ ಚಿಕ್ಕನಾಯಕನಹಳ್ಳಿಯ ಶಾರದಮ್ಮ(78) ನಿಧನರಾಗಿದ್ದಾರೆ. 

ಇಳಿವಯಸ್ಸಿನಲ್ಲಿ ಫುಟ್ಪಾತ್‌ನಲ್ಲಿ ತರಕಾರಿ ಮಾರಾಟ ಮಾಡಿ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದ ವೃದ್ಧೆ ಶಾರದಮ್ಮ. ಆದರೆ ವಯೋ ಸಹಜ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದಾರೆ.

 ಬಿರುಬಿಸಲಲ್ಲೂ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಪಾದಾಯತ್ರೆ ನಡೆಸಿ ಕಳೆದ ವರ್ಷ 2022ರ ಅಕ್ಟೋಬರ್ ತಿಂಗಳಲ್ಲಿ ತುಮಕೂರು ತಲುಪಿ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಭಾರತ್ ಜೋಡೋ ಯಾತ್ರೆಗೆ ಹೊರಟಿದ್ದ ರಾಹುಲ್ ಗಾಂಧಿ. ತುಮಕೂರಿನ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಹೊರಟಿದ್ದ ವೇಳೆ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ಸಂತೈಸಿದ್ದ ಶಾರದಮ್ಮ.

ಧೂಮ್ ಸರಣಿ ಚಿತ್ರಗಳ ನಿರ್ದೇಶಕ ಸಂಜಯ್ ಗಧ್ವಿ ತೀವ್ರ ಹೃದಯಾಘಾತದಿಂದ ನಿಧನ

ಪಾದಯಾತ್ರೆ ಮಾಡಿ ದಣಿದು ಬಂದಿದ್ದ ರಾಹುಲ್ ಗಾಂಧಿಯನ್ನು ತಬ್ಬಿ ಸಂತೈಸಿ ಆಶೀರ್ವಾದ ಮಾಡಿದ್ದರು. ಇದೇ ವೇಳೆ  ಇಂದಿರಾಗಾಂಧಿಯನ್ನು ವೃದ್ಧೆ ಶಾರದಮ್ಮ ಹಾಡಿಹೊಗಳಿದ್ದರು. ಶಾರದಮ್ಮಳ ಮಮತೆಗೆ ಮನಸೋತಿದ್ದ ರಾಹುಲ್ ಗಾಂಧಿ. ಅಜ್ಜಿ ಕೊಟ್ಟ ಸೌತೆಕಾಯಿ ತಿಂದು ಪಾದಾಯಾತ್ರೆ ಮುಂದುವರಿಸಿದ್ದರು. ವೃದ್ಧೆ ಶಾರದಮ್ಮ ವಯೋಸಹಜ ಅನಾರೋಗ್ಯದಿಂದ ನಿಧನರಾದ ಸುದ್ದಿ ತಿಳಿದು ಗಣ್ಯರು, ಊರಿನ ಹಿರಿಯರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಸುಬ್ರತಾ ರಾಯ್‌ ನಿಧನ, ಹಂಚಿಕೆಯಾಗದೇ ಉಳಿದ 25 ಸಾವಿರ ಕೋಟಿ ರೂಪಾಯಿಯ ಕಥೆಯೇನು?

Follow Us:
Download App:
  • android
  • ios