ಸಮುದಾಯಕ್ಕೆ ಕೊರೋನಾ: ಈಗಲಾದರೂ ಒಪ್ಪಿಕೊಳ್ಳಿ| ಕೇಂದ್ರ ಸರ್ಕಾರಕ್ಕೆ ದಿಲ್ಲಿ ಸರ್ಕಾರ ಸವಾಲು
ನವದೆಹಲಿ(ಸೆ.20): ಕೊರೋನಾ ವೈರಸ್ನ ಸಾಮುದಾಯಿಕ ಹರಡುವಿಕೆ ಆಗುತ್ತಿದೆ ಎಂದು ಈಗಲಾದರೂ ಒಪ್ಪಿಕೊಳ್ಳಿ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ರಾಜಧಾನಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ದಿಲ್ಲಿ ಹಾಗೂ ದೇಶದ ಇತರ ಭಾಗಗಳಲ್ಲಿ ಕೊರೋನಾ ಸಂಖ್ಯೆ ಭಾರಿ ಏರಿಕೆ ಅಗುತ್ತಿರುವಾಗ ಸೋಂಕು ಸಾಮುದಾಯಿಕವಾಗಿ ಹರಡಿದೆ ಎಂಬುದರ ಅರ್ಥ. ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಐಸಿಎಂಆರ್ ಪ್ರತಿಕ್ರಿಯೆ ನೀಡಬೇಕು’ ಎಂದು ಆಗ್ರಹಿಸಿದರು.
ದಿಲ್ಲಿಯಲ್ಲಿ ಸೋಂಕು ದ್ವಿಗುಣ ಆಗುತ್ತಿರುವ ದರ 40 ದಿನದಷ್ಟಿದೆ ಎಂದೂ ಅವರು ಹೇಳಿದರು.
