ಭಾರತೀಯ ಸೇನೆಯ ತಾಕತ್ತು ಏನೆಂದು ಇಡೀ ವಿಶ್ವವೇ ನೋಡಿದೆ. ಸ್ವಾತಂತ್ರ್ಯೋವದ ಈ ಸಂದರ್ಭದಲ್ಲಿ ಸೇನೆಯ ಪಾರ್ಟಿಗಳಲ್ಲಿ ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ತಾರೆ ಎಂಬ ಕುತೂಹಲದ ಮಾಹಿತಿ ತೆಗೆದಿಟ್ಟಿದ್ದಾರೆ ಕರ್ನಲ್​ ದಿನೇಶ್​ ಮುಡ್ರಿ. 

ಭಾರತೀಯ ಸೇನೆಯ ತಾಕತ್ತು ಏನು ಎನ್ನುವುದು ಇದಾಗಲೇ ಇಡೀ ವಿಶ್ವ ನೋಡಿದೆ. ನಮ್ಮ ಯೋಧರ ಜಾಣ್ಮೆಗೆ ಈಚೆಗಷ್ಟೇ ನಡೆದ ಆಪರೇಷನ್​ ಸಿಂದೂರ ಕೂಡ ಸಾಕ್ಷಿಯಾಗಿದೆ. ಪಾಕಿಸ್ತಾನದ ಒಬ್ಬರೇ ಒಬ್ಬರು ನಾಗರಿಕರನ್ನು ಟಚ್​ ಮಾಡಿದೇ, ಉಗ್ರರ ತಾಣದ ಒಳಗೆ ಕ್ಷಿಪಣಿ ಹಾರಿಸಿ, ಅವರನ್ನು ಉಡೀಸ್​ ಮಾಡಿರುವ ಪರಿಗೆ ಇಡೀ ಜಗತ್ತೇ ಅಚ್ಚರಿಪಟ್ಟುಕೊಂಡಿದೆ. ಭಾರತದಲ್ಲಿಯೇ ತಯಾರಾಗಿರುವ ಮೇಕ್​ ಇನ್ ಇಂಡಿಯಾ ಶಸ್ತ್ರಾಸ್ತ್ರಗಳನ್ನೇ ಬಳಸಿ ಇಂಥ ರೋಚಕ ಕಾರ್ಯ ಮಾಡಿರುವ ಭಾರತದ ಯೋಧರಿಗೆ ಹಲವು ದೇಶಗಳ ನಾಯಕರು ಕೂಡ ಕೈಮುಗಿದಿದ್ದಾರೆ. ಭಾರತದ ಯೋಧರು ವೈರಿ ರಾಷ್ಟ್ರಗಳ ಕೈಗೆ ಸಿಕ್ಕಿಬಿದ್ದರೆ ಅದರಲ್ಲಿಯೂ ಪಾಕಿಸ್ತಾನದಂಥ ಭಯೋತ್ಪಾದಕ ರಾಷ್ಟ್ರದ ಸೈನಿಕರ ಕೈಗೆ ಸಿಕ್ಕಿಬಿದ್ದರೆ ಅವರು ನಡೆಸಿಕೊಳ್ಳುವ ಕ್ರೌರ್ಯತೆ, ಅದೇ ವೈರಿ ದೇಶದ ಸೈನಿಕರು ಭಾರತದ ಯೋಧರ ಕೈವಶವಾದರೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವ ಪರಿಗೂ ಭಾರತ ಶ್ಲಾಘನೆಗೆ ವ್ಯಕ್ತವಾಗುತ್ತಿದೆ.

ಇಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಟಾಕಿಂಗ್​ ಪ್ಯಾರೆಟ್ಸ್​ ಚಾನೆಲ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ಕರ್ನಲ್​ ದಿನೇಶ್​ ಮುದ್ರಿ ಅವರು ಭಾರತದ ಯೋಧರ ಹಲವು ವಿಷಯಗಳನ್ನು ತಿಳಿಸಿದ್ದು, ಇದರಲ್ಲಿ ಬಹಳ ಗಮನ ಸೆಳೆದದ್ದು ಹಾಗೂ ಬಹುತೇಕರಿಗೆ ತಿಳಿಯದ ವಿಷಯ, ಮಹಿಳೆಯರನ್ನು ಸೇನೆಯ ಪಾರ್ಟಿಗಳ ಸಮಯದಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವ ವಿಷಯ. ಸೇನೆಯ ಪಾರ್ಟಿಗಳಲ್ಲಿ ಹೆಣ್ಣುಮಕ್ಕಳ ಮತ್ತು ರಾಜಕೀಯ ಪಕ್ಷಗಳ ಬಗ್ಗೆ ಚರ್ಚೆ ಆಗುವುದೇ ಇಲ್ಲ, ಇದು ಕಟ್ಟುನಿಟ್ಟಿನ ನಿಯಮ, ಜೊತೆಗೆ ಹಣದ ವಿಷಯವನ್ನೂ ಮಾತನಾಡುವುದಿಲ್ಲ ಎಂದು ದಿನೇಶ್​ ಅವರು ತಿಳಿಸಿದ್ದಾರೆ.

ಇನ್ನು ಹೆಣ್ಣುಮಕ್ಕಳು ಈ ಪಾರ್ಟಿಯಲ್ಲಿ ಬಂದ ಸಮಯದಲ್ಲಿ ಅವರಿಗೆ ಸಿಗುವ ಮನ್ನಣೆಯ ಬಗೆಗಿನ ಕುತೂಹಲವನ್ನೂ ಇವರು ತೆರೆದಿಟ್ಟಿದ್ದಾರೆ. ಪಾರ್ಟಿಯ ಸಮಯದಲ್ಲಿ ಯಾವುದೇ ಹೆಣ್ಣು ಅಲ್ಲಿ ಬಂದರೆ ಅವರು ಯಾರದ್ದೇ ಪತ್ನಿ, ಸಹೋದರಿ ಯಾರೇ ಆಗಿರಬಹುದು, ಅವರ ಹುದ್ದೆ ಎಷ್ಟೇ ಚಿಕ್ಕದ್ದಾಗಿರಬಹುದು... ಹೆಣ್ಣುಮಕ್ಕಳು ಅಲ್ಲಿಗೆ ಬಂದರೆ, ಮೊದಲು ಜನರಲ್​ ಅವರು ಎದ್ದು ನಿಂತು ಅವರಿಗೆ ಗೌರವ ಸೂಚಿಸುತ್ತಾರೆ. ಇದು ಮೊದಲಿನಿಂದಲೂ ಭಾರತದ ಸೇನೆಯಲ್ಲಿ ಇರುವ ಸಂಪ್ರದಾಯ ಎಂದು ಹೇಳಿದ್ದಾರೆ.

ಸದಾ ಸೀನಿಯರ್​ ಆಫೀಸರ್​ ಮುಂದೆ ಹೋಗಬೇಕು. ಅದು ರೂಲ್ಸ್​. ಊಟದ ಸಮಯದಲ್ಲಿ ಮಹಿಳೆಯರಿಗೆ ಮೊದಲು ಊಟದ ತಟ್ಟೆ ನೀಡಲಾಗುತ್ತದೆ. ಅದಾದ ಬಳಿಕ ಸೀನಿಯರ್​ ಮೋಸ್ಟ್​ ಆಫೀಸರ್​ ಊಟದ ತಟ್ಟೆ ತೆಗೆದುಕೊಳ್ಳುತ್ತಾರೆ. ಅಂದರೆ ಅಲ್ಲಿಯೇ ಉನ್ನತ ಮಟ್ಟದ ಅಧಿಕಾರಿಗಳಿಗಿಂತಲೂ ಹೆಚ್ಚಾಗಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಊಟವಾದ ಬಳಿಕ ಮೊದಲು ಸೀನಿಯರ್​ ಮೋಸ್ಟ್​ ಅಧಿಕಾರಿ ಮತ್ತು ಅವರ ಪತ್ನಿ ಏಳಬೇಕು. ಯಾರೆಂದರೆಂದರೆ ಅವರು ಎದ್ದು ಹೋಗುವಂತಿಲ್ಲ. ಬೇರೆ ಸೋಷಿಯಲ್​ ಪಾರ್ಟಿ ಆಗಿದ್ದರೂ ಸೀನಿಯಾರಿಟಿ ಪ್ರಕಾರವೇ ಹೋಗಬೇಕು. ಇದು ನಮ್ಮ ಭಾರತೀಯ ಸೇನೆಯ ಬ್ಯೂಟಿ ಎಂದು ಹೇಳಿದ್ದಾರೆ.

YouTube video player