ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಾಂಗ್ರೆಸ್​ ನಾಯಕರು ಮಾಡುತ್ತಿರುವ ಪ್ರತಿಭಟನೆಯ ನಡುವೆಯೇ ಮಿಂಟಾ ದೇವಿ ಎನ್ನುವ ಮಹಿಳೆ ಈಗ ದೇಶದ ಗಮನ ಸೆಳೆದಿದ್ದಾಳೆ. ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ಮಹಿಳೆ ಗುಡುಗಿದ್ದೇಕೆ? 

ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿವಾದ ತಾರರಕ್ಕೇರಿದೆ. ಮತದಾರರ ಪಟ್ಟಿಯ ಬಗ್ಗೆ ಸುಪ್ರೀಂಕೋರ್ಟ್​ ಚುನಾವಣಾ ಆಯೋಗದ ಪರವಾಗಿ ತೀರ್ಪು ಕೊಟ್ಟಿದ್ದರೂ, ಲೋಕಸಭೆ, ರಾಜ್ಯಸಭೆ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್​ ಇದನ್ನೇ ಅಸ್ತ್ರವಾಗಿಸಿಕೊಂಡು ಪ್ರತಿಭಟನೆ ನಡೆಸುತ್ತಿದೆ. ಕಳೆದ ಕೆಲವು ದಿನಗಳಿಂದ ಲೋಕಸಭೆ, ರಾಜ್ಯಸಭೆ ಕಲಾಪಗಳಿಗೂ ಅಡ್ಡಿ ಉಂಟು ಮಾಡುತ್ತಿವೆ ಪ್ರತಿಪಕ್ಷಗಳು. ಆದರೆ, ಇದೀಗ ಸಾಮಾನ್ಯ ಮಹಿಳೆಯೊಬ್ಬಳಿಂದ ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ. ಇದಕ್ಕೆ ಕಾರಣ, ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿಭಟನೆಯ ವೇಳೆ ಕಾಂಗ್ರೆಸ್​ ನಾಯಕರೆಲ್ಲಾ ಈ ಮಹಿಳೆಯ ಫೋಟೋ ಇರುವ ಟೀ-ಷರ್ಟ್​ ಧರಿಸಿರುವುದು! ಬಿಹಾರದ ಸಿವಾನ್ ಜಿಲ್ಲೆಯ 35 ವರ್ಷದ ಮಿಂಟಾ ದೇವಿ ಎನ್ನುವವರ ಫೋಟೋ ಮತ್ತು ಹೆಸರಿನ ಟೀ-ಷರ್ಟ್​ ಧರಿಸಿ ಪ್ರತಿಭಟನೆ ನಡೆಸುತ್ತಿರುವ ವಿರುದ್ಧ ಮಿಂಟಾ ದೇವಿ ಗುಡುಗಿದ್ದಾರೆ. ತಮ್ಮ ಫೋಟೋ ಬಳಸಿಕೊಂಡಿರುವುದಕ್ಕೆ ಕೆಂಡ ಕಾರಿರುವ ಅವರು ಇದೀಗ ಮಾಧ್ಯಮದ ಮುಂದೆ ಬಂದು ಪ್ರಿಯಾಂಕಾ, ರಾಹುಲ್​ ವಿರುದ್ಧ ಹರಿಹಾಯ್ದಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಕರಡು ಮತದಾರರ ಪಟ್ಟಿಯಲ್ಲಿ ಮಿಂಟಾ ದೇವಿ (Minta Devi) ಅವರ ವಯಸ್ಸು 124 ವರ್ಷ ಎಂದು ನಮೂದು ಆಗಿದೆ. ಇದನ್ನೇ ಗಾಳವಾಗಿಸಿಕೊಂಡಿರೋ ಕಾಂಗ್ರೆಸ್​, ಮಿಂಟಾ ದೇವಿ ಹೆಸರು ಮತ್ತು ಫೋಟೋ ಇರುವ ಟೀ-ಷರ್ಟ್​ ಪ್ರಿಂಟ್​ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. '124 ನಾಟ್ ಔಟ್' ಎಂಬ ಘೋಷಣೆ ಹೊಂದಿರುವ ಟಿ-ಶರ್ಟ್‌ ಧರಿಸಿ ಅವರು ಪ್ರತಿಭಟನೆ ಮಾಡಿದ್ದು, ಇದು ಮಹಿಳೆಯನ್ನು ಕೆರಳಿಸಿದೆ. ಯಾರ್ರಿ ಅವ್ರು ಪ್ರಿಯಾಂಕಾ, ರಾಹುಲ್​? ನನ್ನ ಫೋಟೋ ಬಳಸಲು ಅವರಿಗೆ ಅಧಿಕಾರ ಕೊಟ್ಟವರು ಯಾರ್ರಿ? ಅವರ ರಾಜಕೀಯ ಉದ್ದೇಶಕ್ಕೆ ನನ್ನ ಹೆಸರು, ಫೋಟೋ ದುರ್ಬಳಕೆ ಮಾಡಿಕೊಳ್ಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

"ಕಾಂಗ್ರೆಸ್‌ ನಾಯಕರು ನನ್ನ ಹೆಸರು ಫೋಟೋ ಇರುವ ಟಿ-ಷರ್ಟ್​ ಧರಿಸಿರೋದು ಅಪರಾಧ. ಮತದಾರರ ಪಟ್ಟಿಯಲ್ಲಿ ನನ್ನ ವಯಸ್ಸು 124 ವರ್ಷ ಎಂದು ನಮೂದಾಗಿರುವ ಬಗ್ಗೆ ಕೆಲ ದಿನಗಳ ಹಿಂದೆ ತಿಳಿದಿತ್ತು. ಮತದಾರರ ಪಟ್ಟಿಯಲ್ಲಿ ಏನೋ ವ್ಯತ್ಯಾಸ ಆಗಿದೆ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನನಗೆ ಆಡಳಿತದಿಂದ ಇದುವರೆಗೂ ಯಾವ ಕರೆಯೂ ಬಂದಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಕಟವಾಗಿತ್ತು, ಅದು ಸರಿ. ಅದರೆ ಅದನ್ನೇ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳಲು ನನ್ನ ಹೆಸರು ಯಾಕೆ ಬೇಕು ಅವರಿಗೆ ಎಂದು ಬೈದಿದ್ದಾರೆ. "ಕಾಂಗ್ರೆಸ್‌ ನಾಯಕರು ನನ್ನ ವಯಸ್ಸಿನ ಬಗ್ಗೆ ಏಕಿಷ್ಟು ತಲೆ ಕೆಡಿಸಿಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ನನ್ನ ವಿವರಗಳನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ಆಗ್ರಹವಾಗಿದೆ. ಆದರೆ ಕಾಂಗ್ರೆಸ್‌ ನಾಯಕರು ನನ್ನ ಅನುಮತಿ ಇಲ್ಲದೇ ನನ್ನ ಫೊಟೋವನ್ನು ಟೀ-ಶರ್ಟ್‌ ಮೇಲೆ ಅಚ್ಚು ಹಾಕಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗೆ ಮಾಡಲು ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.

ನನ್ನ ಹೆಸರನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ. ನನಗೂ ಈ ವಿರೋಧ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಅವರು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಹೀಗೆ ಅವರ ರಾಜಕೀಯ ದುರುದ್ದೇಶಕ್ಕೆ ನನ್ನ ಹೆಸರು ಬಳಸಿಕೊಳ್ತಿರೋದು ಇಷ್ಟವಿಲ್ಲ ಎಂದಿದ್ದಾರೆ. ANI ಸುದ್ದಿ ಸಂಸ್ಥೆಗೆ ನೀಡಿರುವ ವಿಡಿಯೋ ಇಲ್ಲಿದೆ… 

Scroll to load tweet…