ವಾಯು ರಕ್ಷಣಾ ಘಟಕದ ಕಮಾಂಡ್ ಮಾಡಿದ ಮೊದಲ ಮಹಿಳಾ ಅಧಿಕಾರಿ ಇವರೇ ನೋಡಿ

ಈ ಸಾಧನೆ ಮಾಡಿದ ಮೊದಲ ಮಹಿಳೆ ಅಂಶು ಅವರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳು ವೈರಲ್ ಆಗುತ್ತಿವೆ. ಅಂಶು ಜಮ್ವಾಲ್ ಜಮ್ಮುವಿನ ರಹ್ಯಾ ಗ್ರಾಮದವರಾಗಿದ್ದಾರೆ.

Col Anshu Jamwal Becomes First Woman Officer To Command Air Defence Unit

ನವದೆಹಲಿ: ಜುಲೈ 17ರಂದು ಕರ್ನಲ್ ಅಂಶು ಜಮ್ವಾಲ್ ಭಾರತೀಯ ಸೇನೆಯ ಕಾರ್ಯಾಚರಣೆಯ ವಾಯು ರಕ್ಷಣಾ ಘಟಕದ ಕಮಾಂಡ್ ಮಾಡಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಮಹಿಳೆ ಅಂಶು ಅವರಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳು ವೈರಲ್ ಆಗುತ್ತಿವೆ. ಅಂಶು ಜಮ್ವಾಲ್ ಜಮ್ಮುವಿನ ರಹ್ಯಾ ಗ್ರಾಮದವರಾಗಿದ್ದಾರೆ. 2006 ರ ಮಾರ್ಚ್ 18 ರಂದು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ತರಬೇತಿ ಪಡೆದು ಸೇನೆ ಸೇರ್ಪಡೆಯಾಗಿದ್ದರು. ಕರ್ನಲ್ ಅಂಶು ಜಮ್ವಾಲ್, ಸದ್ಯ  ಏರ್ ಡಿಫೆನ್ಸ್ ರೆಜಿಮೆಂಟ್‌ಗೆ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಮ್ಮುವಿನ ಗಾಂಧಿನಗರದ ಜಿಸಿಡಬ್ಲ್ಯೂನಿಂದ ಪದವಿ ಪಡೆದುಕೊಂಡಿದ್ದು, ಒಟಿಎ ಚೆನ್ನೈ ಮತ್ತು ಎಡಿ ಕಾಲೇಜಿನಲ್ಲಿ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.

ನಮ್ಮ ಮಗಳು ಏರ್ ಡಿಫೆನ್ಸ್ ರೆಜಿಮೆಂಟ್‌ಗೆ ಕಮಾಂಡ್ ಆಗಿರೋದಕ್ಕೆ ನಮಗೆ ಖುಷಿಯಾಗುತ್ತಿದೆ. ಸೇನೆಯ ಕಾರ್ಯಾಚರಣೆಯನ್ನು ಕಮಾಂಡ್ ಮಾಡಿದ ಮೊದಲ ಮಹಿಳಾ ಅಧಿಕಾರಿ ಆಗಿರೋದಕ್ಕೆ ನಮಗೆ ಹೆಮ್ಮೆ ಆಗುತ್ತಿದೆ. ಮಗಳು ಯಾವಾಗಲೂ ಎಲ್ಲರಿಗಿಂತ ಭಿನ್ನವಾದ ಕೆಲಸಗಳನ್ನು ಮಾಡುತ್ತಾ ಬಂದವಳು. ಆಕೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ನಮ್ಮ ಕನಸು ಕಂಡಿತ್ತು. ಆದ್ರೆ ಸೇನೆ ಸೇರುವ ಬಗ್ಗೆ ದೃಢ ನಿರ್ಧಾರ ಹೊಂದಿದ್ದಳು ಎಂದು  ಕರ್ನಲ್ ಅಂಶು ಜಮ್ವಾಲ್ ತಂದೆ ಬೀರ್ ಸಿಂಗ್ ಜಮ್ವಾಲ್ ಸಂತೋಷ ವ್ಯಕ್ತಪಡಿಸಿದ್ದಾರೆ. ಮಗಳು ಕಮಾಂಡ್ ತೆಗೆದುಕೊಂಡ ಸಂದರ್ಭದಲ್ಲಿ ಬೀರ್ ಸಿಂಗ್ ಜಮ್ವಾಲ್ ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನ ಅಜಿತ್ ಹೆಗಲ ಮೇಲೆ ಹಾಕಿದ ಆರ್‌ಎಸ್‌ಎಸ್‌!

ನಾನು ಸಹ ಮಗಳು ಶಿಕ್ಷಕಿಯಾಗಲೆಂದು ಕನಸು ಕಂಡಿದ್ದೆ. ಆದ್ರೆ ಮಗಳು ಮಾತ್ರ ಹೊಸದಾಗಿ ಏನಾದ್ರೂ ಸಾಧಿಸಬೇಕು ಎಂಬ ಛಲ ಹೊಂದಿದ್ದಳು. ಹಾಗಾಗಿ ನಾವು ಆಕೆಯ ಕನಸಿಗೆ ಅಡ್ಡಿ ಮಾಡಲಿಲ್ಲ. ಇದೀಗ ಮಗಳ ಸಾಧನೆ ಕಂಡು ಕುಟುಂಬಸ್ಥರೆಲ್ಲೆರೂ ಸಂತೋಷವಾಗಿದ್ದಾರೆ.  ಗಾಂಧಿ ಸ್ಮಾರಕ ಪದವಿ ಕಾಲೇಜಿನ ಜಮ್ಮುವಿನಲ್ಲಿ ರನ್ನಿಂಗ್ ಮಾಡಿದ್ದೇವೆ. ಆಕೆ ಕಾಲೇಜಿನ ಮೈದಾನದಲ್ಲಿ ಓಡುತ್ತಿದ್ದರೆ ನಾನು ಎಷ್ಟು ಸುತ್ತು ರನ್ನಿಂಗ್ ಆಗಿದೆ ಎಂದು ಲೆಕ್ಕ ಹಾಕುತ್ತಿದ್ದೆ. ಲೇಹ್ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ತನ್ನ ಮಗಳು ದೇಶಕ್ಕಾಗಿ ದುಡಿದಿದ್ದಾಳೆ ಎಂದು ಹೇಳಲು ಹೆಮ್ಮೆಪಡುತ್ತೇನೆ ಎಂದು ಬೀರ್ ಸಿಂಗ್ ಹೇಳಿದ್ದಾರೆ.

ಭಾರತದ ಕೇಜ್ರಿವಾಲ್ ಬಂಧನಕ್ಕೂ ಪಾಕ್ ಇಮ್ರಾನ್ ಖಾನ್ ಅರೆಸ್ಟ್‌ಗೂ ಏನು ಸಂಬಂಧ? ಸಿಂಘ್ವಿ ವಾದ

Latest Videos
Follow Us:
Download App:
  • android
  • ios