ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಆಹಾರದಲ್ಲಿ ಜಿರಳೆ: ಪ್ರಯಾಣಿಕರ ಆಕ್ರೋಶ

ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಆಹಾರದಲ್ಲಿ ಜಿರಳೆ ಪತ್ತೆಯಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ.

Cockroach found in daal served to a family of Shirdi pilgrims in Vande Bharat train akb

ನವದೆಹಲಿ: ಒಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಪ್ರಯಾಣದ ವೇಳೆ ರೈಲ್ವೆಯಿಂದ ನೀಡಿದ ಆಹಾರದಲ್ಲಿ ಜಿರಳೆ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕುಟುಂಬವೊಂದು ವಂದೇ ಭಾರತ್ ರೈಲಿನಲ್ಲಿ ಶಿರ್ಡಿಯಿಂದ ಮುಂಬೈಗೆ ಪ್ರಯಾಣ ಮಾಡುತ್ತಿತ್ತು. ಪ್ರಯಾಣದ ಮಧ್ಯೆ ಇವರು ರೈಲಿನಲ್ಲಿ ಆಹಾರ ಅರ್ಡರ್ ಮಾಡಿದ್ದು, ಅದರಲ್ಲಿ ಬಂದ ದಾಲ್‌ನಲ್ಲಿ ಜಿರಳೆಯೊಂದನ್ನು ನೋಡಿದ ಕುಟುಂಬ ಗಾಬರಿಯಾಗಿದೆ. ಇದಾದ ನಂತರ ಕುಟುಂಬವೂ ಭಾರತೀಯ ರೈಲ್ವೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದಾರೆ. 

ಆಗಸ್ಟ್ 19 ರಂದು ಈ ಘಟನೆ ನಡೆದಿದ್ದು, ರಿಕ್ಕಿ ಜೇಸ್ವಾನಿ ಎಂಬುವವರು ವಂದೇ ಭಾರತ್ ರೈಲಿನಲ್ಲಿ ತಮಗಾದ ಅನುಭವವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ಆಘಾತ ವ್ಯಕ್ತಪಡಿಸಿದ್ದಾರೆ.  ಈ ಪೋಸ್ಟ್‌ನಲ್ಲಿ ರೈಲ್ವೆಗೆ ನೀಡಿರುವ ದೂರಿನ ಪ್ರತಿ, ಜಿರಳೆ ಇರುವ ದಾಲ್‌ನ ಫೋಟೋ ಇದೆ. ರಿಕ್ಕಿ ಜೇಸ್ವಾನಿ ಅವರ ಪುತ್ರ ಆಹಾರದಲ್ಲಿ ಜಿರಳೆ ಸಿಕ್ಕಿದ ಬಗ್ಗೆ ರೈಲ್ವೆ ಅಧಿಕಾರಿಗಳ ಬಳಿ  ದೂರಿದ್ದಾರೆ. ನಾನು ದಾಲ್ ಜೊತೆ ಆಹಾರ ಸೇವಿಸುತ್ತಿದ್ದಿದ್ದರಿಂದ ನನಗೆ ಮೊಸರು ತಿನ್ನಲಾಗಲಿಲ್ಲ, ನನ್ನ ಅಂಟಿಗೆ ಸಿಕ್ಕ ಆಹಾರದಲ್ಲಿ ಜಿರಳೆ ಇತ್ತು. ನನ್ನ 80 ವರ್ಷದ ಅಜ್ಜ ಕೂಡ ಅದೇ ಆಹಾರವನ್ನು ಸೇವಿಸಿದರು, ನೀವು ಕೂಡ ಅದೇ ಆಹಾರವನ್ನು ಸೇವಿಸುತ್ತೀರಾ ಎಂದು ಅವರು ಪ್ರಶ್ನಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. 

ಸ್ಲೀಪರ್‌ನಿಂದ AC ಕ್ಲಾಸ್‌ಗೆ ಉಚಿತ ಅಪ್‌ಗ್ರೇಡ್, ರೈಲ್ವೆ ಇಲಾಖೆಯ ಈ ನಿಯಮ ನಿಮಗೆ ತಿಳಿದಿರಲಿ

ಈ ವೇಳೆ ರೈಲ್ವೆ ಅಧಿಕಾರಿಗಳು ಜೇಸ್ವಾನಿ ಅವರಿಗೆ ಈ ಸಂಬಂಧ ದೂರು ನೀಡಿ, ದೂರು ನೀಡಿದರೆ ತನಿಖೆ ಮಾಡಬಹುದು ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಟ್ವಿಟ್ಟರ್‌ನಲ್ಲಿ ಈ ಪೋಸ್ಟ್‌ಗೆ ಐಆರ್‌ಸಿಟಿಸಿ ಪ್ರತಿಕ್ರಿಯಿಸಿದ್ದು, ಸರ್ವಿಸ್  ಪ್ರೊವೈಡರ್ ಮೇಲೆ ದಂಡ ಹೇರಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ನಿಮಗೆ ಹೀಗೆ ಆಗಿರುವುದಕ್ಕೆ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಈ ವಿಚಾರದವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದ್ದು, ಸರ್ವಿಸ್ ಪ್ರೊವೈಡರ್‌ಗೆ ದಂಡ ವಿಧಿಸಲಾಗಿದೆ. ಅಲ್ಲದೇ ಅಧಿಕಾರಿಗಳು ಆಹಾರ ಸೇವೆ ನೀಡುತ್ತಿರುವ ಗುತ್ತಿಗೆದಾರರ ಕಿಚನ್ ಅನ್ನು ಕೂಡ ತಪಾಸಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಹಳಿ ತಪ್ಪಿದ ಸಬರ್‌ಮತಿ ಎಕ್ಸ್‌ಪ್ರೆಸ್: ನಿರಂತರ ರೈಲ್ವೆ ಅವಘಡಗಳ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ

Latest Videos
Follow Us:
Download App:
  • android
  • ios