ಆಟವಾಡುತ್ತಿದ್ದ ವೇಳೆ ಸಾಗಿ ಬಂದ ನಾಗರ ಹಾವನ್ನು ಮಗು ಆಟಿಕೆ ಎಂದು ತಿಳಿದು ಕೈಯಲ್ಲಿ ಹಿಡಿದು ಕಚ್ಚಿದೆ. ಇದರ ಪರಿಣಾಮ ಅಸ್ವಸ್ಥಗೊಂಡಿದ್ದ 1 ವರ್ಷದ ಮಗು ಆಸ್ಪತ್ರೆಯಲ್ಲಿ ಚೇತರಿಕೆ ಕಂಡಿದ್ದರೆ, ವಿಷ ಸರ್ಪ ಸತ್ತಿದೆ.

ಪಾಟ್ನಾ (ಜು.26) ಜನವಸತಿಗಳಲ್ಲಿ ಹಾವು ಪ್ರತ್ಯಕ್ಷಗೊಂಡರೆ ಅಪಾಯ ಹೆಚ್ಚು. ಅದರಲ್ಲೂ ಮಕ್ಕಳಿರುವ ಕಡೆ ಅಪಾಯದ ತೀವ್ರತೆ ಹೆಚ್ಚು. ಇದೀಗ ಮಗು ಆಟವಾಡುತ್ತಿದ್ದ ವೇಳೆ 2 ಅಡಿ ಉದ್ದದ ನಾಗರ ಹಾವು ಮೆಲ್ಲನೆ ಮನೆಯೊಳಗೆ ಲಗ್ಗೆ ಇಟ್ಟಿದೆ. ಮಗು ಆಟವಾಡುತ್ತಿದ್ದಂತೆ ಸಾಗಿ ಬಂದ ಹಾವನ್ನು ಆಟಿಕೆ ಎಂದು ತಿಳಿದು ಕೈಯಲ್ಲಿ ಹಿಡಿದು ಕಚ್ಚಿದೆ. ಮಗು ಕಚ್ಚಿದ ಬೆನ್ನಲ್ಲೇ ಹಾವು ಜೀವ ಭಯದಿಂದ ವೇಗವಾಗಿ ಸಾಗಿದೆ. ಇತ್ತ ಮಗು ಅಸ್ವಸ್ಥಗೊಂಡಿದೆ. ಹೀಗಾಗಿ ಮಗುವನ್ನು ಆಸ್ಪತ್ರೆ ದಾಖಲಸಲಾಗಿದೆ. ಇದೀಗ ಮಗು ಚೇತರಿಸಿಕೊಂಡಿದ್ದರೆ, ಮಗು ಕಚ್ಚಿದ ವಿಷ ಸರ್ಪ ಸತ್ತ ಘಟನೆ ಬಿಹಾರದ ಬಿಟ್ಟಿಯಾ ಜಿಲ್ಲೆಯಲ್ಲಿ ನಡೆದಿದೆ.

ಆಟಿಕೆ ನಡುವೆ ಸಾಗಿ ಬಂದ ಹಾವನ್ನೇ ಕಚ್ಚಿದ ಮಗು

1 ವರ್ಷದ ಮಗು ಗೋವಿಂದ ಮನೆಯಲ್ಲಿ ಆಟವಾಡುತ್ತಿತ್ತು. ಮಗುವಿನ ಕೆಲ ದೂರದಲ್ಲಿ ತಾಯಿ ಮನಗೆಲೆಸ ಮಾಡುತ್ತಿದ್ದರೆ, ಇತರ ಕುಟುಂಬಸ್ಥರು ಮನೆ ಒಳಗೆ ಇದ್ದರು. ಮಗು ಆಟವಾಡಲೆಂದು ಕೆಲ ಆಟಿಕೆಗಳನ್ನು ನೀಡಿದ್ದರು. ಮಗು ತನ್ನ ಆಟಿಕೆಗಳಲ್ಲಿ ಆಟವಾಡುತ್ತಿದ್ದಂತೆ 2 ಅಡಿ ಉದ್ದದ ನಾಗರಹಾವು ಸಾಗಿ ಬಂದಿದೆ. ಇದರ ಅರಿವೇ ಇಲ್ಲದ ಮಗು ತನ್ನ ಪಾಡಿಗೆ ಆಟದಲ್ಲಿ ಮುಳುಗಿತ್ತು. ಇತ್ತ ಮಗು ಕುಳಿತು ಆಟವಾಡುತ್ತಿದ್ದ ಕಾರಣ ಪೋಷಕರು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಆಟಿಗೆ ನಡುವೆ ಸಾಗಿ ಬಂದ ಹಾವನ್ನು ಮಗು ಕೈಯಲ್ಲಿ ಹಿಡಿದು ಕಚ್ಚಿದೆ. ಮಗು ಆಟಿಕೆ ಎಂದು ತಿಳಿದು ಕಚ್ಚಿದೆ. ಮಗು ಕಚ್ಚಿದ ರಭಸದಲ್ಲಿ ನಾಗರಹಾವು ಮತ್ತಷ್ಟು ಭಯಗೊಂಡಿದೆ.ಮಗುವಿನ ಕೈಯಿಂದ ತಕ್ಷಣೇ ಜಾರಿಕೊಂಡು ವೇಗವಾಗಿ ಸಾಗಿದೆ. ಮಗು ಏನು ಮಾಡುತ್ತಿದ್ದೆ ಎಂದು ನೋಡುವಷ್ಟರಲ್ಲೇ ಈ ಘಟನೆ ನಡೆದು ಹೋಗಿದೆ. ತಾಯಿ ನೋಡ ನೋಡುತ್ತಿದ್ದಂತೆ ಮಗು ಕೈಯಲ್ಲಿ ಹಿಡಿದಿರುವ ಹಾವನ್ನು ಕಚ್ಚಿದೆ. ತಾಯಿ ಓಡೋಡಿ ಬಂದಿದ್ದಾರೆ. ಅಷ್ಟರಲ್ಲೇ ಹಾವು ಮನೆಯಿಂದ ಹೊರಗೆ ಸಾಗಿದೆ.

ಹಾವು ಕಚ್ಚಿ ಅಸ್ವಸ್ಥಗೊಂಡ ಮಗು

ಹಾವು ಕಚ್ಚಿದ ಕೆಲವೇ ಕ್ಷಣದಲ್ಲಿ ಮಗು ಅಸ್ವಸ್ಥಗೊಂಡಿದೆ. ಪೋಷಕರು ಆತಂಕಗೊಂಡಿದ್ದಾರೆ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಮಗು ಚೇತರಿಸಿಕೊಂಡಿದೆ. ಆದರೆ ಇತ್ತ ಮಗು ಕಚ್ಚಿದ ವಿಷ ಸರ್ವ ಸತ್ತಿದೆ. ಹಾವಿನನಲ್ಲಿ ಮಗುವಿನ ಹಲ್ಲಿನ ಗುರುತು ಪತ್ತೆಯಾಗಿದೆ.

ಫಲಿಸಿದ ಪೋಷಕರ ಪ್ರಾರ್ಥನೆ

ಮಗುವಿನ ಹತ್ತಿರ ಸಾಗಿದ ಹಾವು ಮಗುವನ್ನು ಕಚ್ಚಿಲ್ಲ. ಇಷ್ಟೇ ಅಲ್ಲ ಮಗು ಹಾವನ್ನುಕೈಯಲ್ಲಿ ಹಿಡಿದು ಹಚ್ಚಿದರೂ ಹಾವು ಮಾತ್ರ ಕಚ್ಚಿಲ್ಲ. ಹಾವು ಜೀವ ಭಯದಿಂದ ಓಡಲು ಪ್ರಯತ್ನಿಸಿದೆ. ಹಾವು ಸತ್ತಿದ್ದರೆ, ಮಗು ಅಪಾಯದಿಂದ ಪಾರಾಗಿದೆ. ಮಗು ಅಸ್ವಸ್ಥಗೊಳ್ಳುತ್ತಿದ್ದಂತೆ ಪೋಷಕರು ಆತಂಕಗೊಂಡಿದ್ದಾರೆ. ಆಸ್ಪತ್ರೆ ದಾಖಲಿಸಿದ ಬಳಿಕ ಮಗುವಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರಾರ್ಥಿಸಿದ್ದಾರೆ. ಇದೀಗ ಪೋಷಕರ ಪ್ರಾರ್ಥನೆ ಫಲಿಸಿದೆ.