Asianet Suvarna News Asianet Suvarna News

18+ಗೆ ‘ಆನ್‌ಸೈಟ್‌ ಲಸಿಕೆ’: ಕೋ-ವಿನ್‌ ವೆಬ್‌ನಲ್ಲಿ ನೋಂದಣಿ ಮಾಡುವ ಅಗ​ತ್ಯ​ವಿ​ಲ್ಲ!

* 18+ಗೆ ‘ಆನ್‌ಸೈಟ್‌ ಲಸಿಕೆ’

* ಕೋ-ವಿನ್‌ ವೆಬ್‌ನಲ್ಲಿ ನೋಂದಣಿ ಮಾಡುವ ಅಗ​ತ್ಯ​ವಿ​ಲ್ಲ

* ನೇರವಾಗಿ ಲಸಿಕೆ ಕೇಂದ್ರಕ್ಕೆ ತೆರಳಿ ನೋಂದಾಯಿಸಬಹುದು

Co WIN registration for Covid vaccine not mandatory pod
Author
Bangalore, First Published Jun 16, 2021, 9:58 AM IST

ನವ​ದೆ​ಹ​ಲಿ(ಜೂ.16): ಕೋವಿಡ್‌ ನಿಯಂತ್ರ​ಣ​ಕ್ಕಾಗಿ ಪ್ರತಿ​ಯೊ​ಬ್ಬ​ರಿಗೂ ಉಚಿತ ಕೊರೋನಾ ಲಸಿಕೆ ನೀಡಲು ಮುಂದಾ​ಗಿ​ರುವ ಕೇಂದ್ರ ಸರ್ಕಾರ ಇದೀಗ 18 ವರ್ಷ ತುಂಬಿದ ಎಲ್ಲರಿಗೂ ನೇರ​ವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆ​ಯುವ ಅವ​ಕಾ​ಶ​ವನ್ನು ಕಲ್ಪಿ​ಸಿದೆ. ಅಂದರೆ ಲಸಿಕೆ ಕೇಂದ್ರಕ್ಕೆ ತೆರಳಿ ಕೋವಿ​ನ್‌​ ವೆಬ್‌ನಲ್ಲಿ ಹೆಸರು ನೋಂದಾ​ಯಿಸಿ ಲಸಿಕೆ ಪಡೆ​ಯ​ಬ​ಹುದು.

ಮೊದ​ಲಿಗೆ ಲಸಿಕೆ ಆಕಾಂಕ್ಷಿ​ತರು ಕೋವಿನ್‌ ಆ್ಯಪ್‌​ನಲ್ಲಿ ತಮ್ಮ ಹೆಸರು ಮತ್ತು ಆಧಾರ್‌ ಸಂಖ್ಯೆ​ಯೊಂದಿಗೆ ನೋಂದಣಿ ಮಾಡಿ​ಕೊ​ಳ್ಳ​ಬೇ​ಕಿತ್ತು. ಆ ಬಳಿಕ ತಮ್ಮ ಸರದಿ ಬಂದಾಗ ಲಸಿಕೆ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆ​ಯ​ಬೇ​ಕಿತ್ತು. ಆದರೆ ಇದೀಗ ಲಸಿಕೆ ಆಕಾಂಕ್ಷಿ​ತರು ಕೋವಿನ್‌ ಆ್ಯಪ್‌​ನಲ್ಲಿ ಲಸಿ​ಕೆ​ ಕಾಯ್ದಿ​ರಿ​ಸುವುದು ಕಡ್ಡಾ​ಯ​ವಲ್ಲ. ಇದ​ರಿಂದ ತ್ವರಿ​ತ​ಗ​ತಿ​ಯಲ್ಲಿ ಹೆಚ್ಚು ಮಂದಿಗೆ ಲಸಿಕೆ ವಿತ​ರಿ​ಸಬಹುದು. ದೇಶದ ಬಹು​ಸಂಖ್ಯಾ​ತ​ರಾದ 18-44 ವರ್ಷ​ದ​ವ​ರಿಗೆ ಲಸಿಕೆ ನೀಡು​ವು​ದ​ರಿಂದ ಆರ್ಥಿಕ ಚಟು​ವ​ಟಿ​ಕೆ​ಗಳು ಮತ್ತು ವಾಣಿ​ಜ್ಯಾ​ತ್ಮಕ ಚಟು​ವ​ಟಿ​ಕೆ​ಗ​ಳ ಮೇಲಿನ ನಿರ್ಬಂಧ ತೆರ​ವಿಗೆ ಅನು​ಕೂ​ಲ​ವಾ​ಗ​ಲಿದೆ ಎಂದು ಸರ್ಕಾರ ಹೇಳಿದೆ.

ಮೇ 24ರಂದೂ ಕೇಂದ್ರ ಇಂಥದ್ದೇ ಪ್ರಕಟಣೆ ನೀಡಿತ್ತಾದರೂ ಆನ್‌ಸೈಟ್‌ ನೋಂದಣಿ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದಿತ್ತು.

ಮತ್ತೊಂದೆಡೆ ಲಸಿಕೆ ಪಡೆ​ಯಲು ಜನರಲ್ಲಿ ಹಿಂಜ​ರಿಕೆ ಇರು​ವು​ದನ್ನು ಒಪ್ಪಿ​ಕೊ​ಳ್ಳ​ಲೇ​ಬೇಕು. ಜೊತೆಗೆ ಇದು ಜಾಗ​ತಿಕ ಬೆಳ​ವ​ಣಿ​ಗೆ​ಯಾ​ಗಿದ್ದು, ಈ ಸಮ​ಸ್ಯೆ​ಯನ್ನು ಸಮು​ದಾ​ಯದ ಹಂತ​ದಲ್ಲಿ ವೈಜ್ಞಾ​ನಿ​ಕ​ವಾಗಿ ಪರಿ​ಹ​ರಿ​ಸಿ​ಕೊ​ಳ್ಳ​ಬೆಕಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

Follow Us:
Download App:
  • android
  • ios