Asianet Suvarna News Asianet Suvarna News

ತೆರಿಗೆ ವಿನಾಯಿತಿ ಘೋಷಿಸಿದ ಬೆನ್ನಲ್ಲೇ ಕೇರಳ ಸ್ಟೋರಿ ಚಿತ್ರ ವೀಕ್ಷಿಸಿದ ಯೋಗಿ ಆದಿತ್ಯನಾಥ್!

ದಿ ಕೇರಳ ಸ್ಟೋರಿ ಚಿತ್ರ ಭಾರಿ ವಿವಾದಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಕೆಲ ರಾಜ್ಯಗಳು ಕೇರಳ ಸ್ಟೋರಿ ಚಿತ್ರ ಪ್ರದರ್ಶನವನ್ನು ನಿಷೇಧಿಸಿದೆ. ಆದರೆ ಬಿಜೆಪಿ ಆಡಳಿತದ ಬಹುತೇಕ ರಾಜ್ಯದಲ್ಲಿ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಯೋಗಿ ಆದಿತ್ಯನಾಥ್ ತೆರಿಗೆ ವಿನಾಯಾತಿ ಘೋಷಿಸಿದ ಬೆನ್ನಲ್ಲೇ ಕೇರಳ ಸ್ಟೋರಿ ಚಿತ್ರ ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಣೆ ಬಳಿಕ ಯೋಗಿ ಹೇಳಿದ್ದೇನು? 

CM Yogi adityanath watches The Kerala story day after tax free announcement in Uttar Pradesh ckm
Author
First Published May 12, 2023, 4:33 PM IST | Last Updated May 12, 2023, 4:33 PM IST

ಲಖನೌ(ಮೇ.12): ಮತಾಂತರ ಮಾಡಿ ಉಗ್ರವಾದಕ್ಕೆ ತಳ್ಳುವ ಐಸಿಸಿ ಉಗ್ರರ ಕುರಿತು ದಿ ಕೇರಳ ಸ್ಟೋರಿ ಚಿತ್ರ ಭಾರತದಲ್ಲಿ ವಿವಾದ ಸೃಷ್ಟಿಸುತ್ತಿದೆ. ದಿ ಕಾಶ್ಮೀರ ಫೈಲ್ಸ್ ಬಳಿಕ ಭಾರಿ ಪರ ವಿರೋಧ ಕೇಳಿ ಬಂದ ಚಿತ್ರ ಇದೀಗ ದಿ ಕೇರಳ ಸ್ಟೋರಿ. ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯದಲ್ಲಿ ಈ ಚಿತ್ರಕ್ಕೆ ನಿಷೇಧ ಹೇರಲಾಗಿದೆ. ಆದರೆ ಇತರ ಹಲವು ರಾಜ್ಯಗಳಲ್ಲಿ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದಿ ಕೇರಳ ಸ್ಟೋರಿಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ದಿ ಕೇರಳ ಸ್ಟೋರಿ ಚಿತ್ರವನ್ನು ವೀಕ್ಷಿಸಿದ್ದಾರೆ. 

ಇಂದು(ಮೇ.12) ಲೋಕಭವನ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್ ವಿವಾದಿತ ಕೇರಳ ಸ್ಟೋರಿ ಚಿತ್ರ ವೀಕ್ಷಿಸಿದ್ದಾರೆ. ಯೋಗಿ ಆದಿತ್ಯನಾಥ್ ಜೊತೆಗೆ ಕ್ಯಾಬಿನೆಟ್ ಸಚಿವರು ಕೇರಳ ಸ್ಟೋರಿ ವೀಕ್ಷಿಸಿದ್ದಾರೆ. ಇತ್ತೀಚೆಗೆ ಕೇರಳ ಸ್ಟೋರಿ ಚಿತ್ರ ತಂಡ ಯೋಗಿ ಆದಿತ್ಯಾಥ್ ಭೇಟಿಯಾಗಿ ಚಿತ್ರ ವೀಕ್ಷಿಸುವಂತೆ ಮನವಿ ಮಾಡಿತ್ತು. ಇದೀಗ ಯೋಗಿ ಆದಿತ್ಯನಾಥ್ ಹಾಗೂ ಯುಪಿ ಸರ್ಕಾರದ ಸಚಿವರು ಕೇರಳ ಸ್ಟೋರಿ ಚಿತ್ರ ವೀಕ್ಷಿಸಿದ್ದಾರೆ. 

 

OTTಗೆ ವಿವಾದಾತ್ಮಕ 'ದಿ ಕೇರಳ ಸ್ಟೋರಿ': ಯಾವಾಗ, ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

ಗುರುವಾರ(ಮೇ.11) ಯೋಗಿ ಆದಿತ್ಯನಾಥ್ ಕೇರಳ ಸ್ಟೋರಿ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದರು. ಐಸಿಸ್ ಷಡ್ಯಂತ್ರ, ಉಗ್ರರ ಜಾಲ ಕುರಿತು ಈ ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ದೇಶದಲ್ಲಿ ನಡೆಯುತ್ತಿರುವ ವ್ಯವಸ್ಥಿತಿ ಷಡ್ಯಂತ್ರದ ಅರಿವು ಜನತೆಗೆ ಇರಬೇಕು ಎಂದು ಯೋಗಿ ಆದಿತ್ಯನಾಥ್ ತೆರಿಗೆ ವಿನಾಯಿತಿ ಘೋಷಿಸಿದ್ದರು. 

ಕೇರಳ ಸ್ಟೋರಿ’ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಷೇಧಿಸಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳ ಸಿನಿಮಾಗೆ ನಿಷೇಧ ವಿಧಿಸಿದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಈ ಸಿನಿಮಾ ದ್ವೇಷ ಮತ್ತು ಹಿಂಸೆಯನ್ನು ಹರಡುತ್ತದೆ ಎಂಬ ಕಾರಣವನ್ನು ನೀಡಿರುವ ಮಮತಾ ಬ್ಯಾನರ್ಜಿ, ‘ಇದು ಕೇರಳ ರಾಜ್ಯಕ್ಕೆ ಅವಮಾನ ಮಾಡುತ್ತದೆ. ಇದೇ ರೀತಿಯ ದ್ವೇಷ ರಾಜ್ಯದಲ್ಲಿ ಹರಡುವುದನ್ನು ತಪ್ಪಿಸುವುದಕ್ಕಾಗಿ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಲಾಗಿದೆ’ ಎಂದು ಹೇಳಿದ್ದಾರೆ. ಅಲ್ಲದೇ ಸಿನಿಮಾ ಪ್ರದರ್ಶನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರದ ನಿಷೇಧ ಹಾಗೂ ತಮಿಳುನಾಡಿನಲ್ಲಿನ ‘ದಿ ಫ್ಯಾಕ್ಟೊ’ ನಿರ್ಬಂಧದ (ಚಿತ್ರವನ್ನು ಪ್ರದರ್ಶಿಸದಂತೆ ಸ್ವತ ಪ್ರದರ್ಶಕರೇ ವಿಧಿಸಿಕೊಂಡ ನಿರ್ಬಂಧ) ವಿರುದ್ಧ ಚಿತ್ರ ನಿರ್ಮಾಪಕ ವಿಪುಲ್‌ ಶಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. 

 

ನಾಳೆ 37 ವಿದೇಶಗಳಲ್ಲಿ ‘The Kerala story’ ಬಿಡುಗಡೆ!

ಕೇರಳ ಸ್ಟೋರಿ ಚಿತ್ರವು ನಿರ್ದೇಶಕ ಮತ್ತು ಚಿತ್ರಕಥೆಗಾರರ ಕಲಾತ್ಮಕ ಚಿತ್ರವಾಗಿದೆ’ ಎಂದು ಕೇರಳ ಕ್ಯಾಥೊಲಿಕ್‌ ಬಿಷಪ್‌ಗಳ ಪರಿಷತ್ತು (ಕೆಸಿಬಿಸಿ) ಪ್ರಶಂಸಿಸಿದೆ. ಈ ಕುರಿತು ಮಾತನಾಡಿದ ಕೆಸಿಬಿಸಿ ವಕ್ತಾರ ಫಾದರ್‌ ಜಾಕೋಬ್‌ ಪಾಲಕಪಿಲ್ಲಿ, ‘ಚಿತ್ರವು ಇಸ್ಲಾಮಿಕ್‌ ಸ್ಟೇಟ್‌ ನಡೆಸಿದ ದೌರ್ಜನ್ಯವನ್ನು ಬಹಿರಂಗಪಡಿಸುತ್ತದೆ. ಇದನ್ನು ಕೋಮುವಾದದ ಮಾದರಿಯಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಮಹಿಳೆಯರನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿ ಅವರನ್ನು ಐಸಿಸ್‌ಗೆ ಸೇರಿಸಿದ ಬಗ್ಗೆ ಬಹಳ ನಿದರ್ಶನಗಳಿವೆ. ಚಿತ್ರ ಅದನ್ನು ತೋರಿಸಿದೆ. ಆದರೆ ಇದರಿಂದ ಅನೇಕರಿಗೆ ಅಸಮಾಧಾನವಾಗಿದೆ. ಐಸಿಸ್‌ಅನ್ನು ಮುಸ್ಲಿಮರು ಅಥವಾ ಇಸ್ಲಾಂ ಎಂದು ಯಾರೂ ಹೇಳುತ್ತಿಲ್ಲ. ಲವ್‌ ಜಿಹಾದ್‌ ಎಂಬುದು ಸತ್ಯ. ಬಲವಂತದ ಮತಾಂತರ ಅಥವಾ ಪ್ರೀತಿ ಹೆಸರಿನಲ್ಲಿ ಮತಾಂತರ ಮಾಡುವುದು ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.
 

Latest Videos
Follow Us:
Download App:
  • android
  • ios