ದೆಹಲಿಯ ವಾಯು ಗುಣಮಟ್ಟ ತೀವ್ರವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಕೆ ಮಾಡಿ ಪೋಸ್ಟರ್ ಅನ್ನು ದೆಹಲಿ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಹಾಕಲಾಗಿದೆ.
ನವದೆಹಲಿ (ನ.5): ಭಾರತೀಯ ಜನತಾ ಪಕ್ಷದ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ಗೆ ಹೋಲಿಕೆ ಮಾಡಿ ಪೋಸ್ಟರ್ ಅನ್ನು ದೆಹಲಿ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಹಾಕಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ತೀವ್ರವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಈ ಫೋಸ್ಟರ್ ಅನ್ನು ಹಾಕಲಾಗಿದೆ. ಈ ಪೋಸ್ಟರ್ ನಲ್ಲಿ ಕೇಜ್ರಿವಾಲ್ ಅವರು ತಮ್ಮ ನಗರವನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ ಎರಡನೇ ಆಡಳಿತಗಾರ, ಹಿಟ್ಲರ್ ಮೊದಲಿಗರು" ಎಂದು ಬರೆಯಲಾಗಿದೆ. ಪೋಸ್ಟರ್ ಕುರಿತು ಮಾತನಾಡಿರುವ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು, ದೆಹಲಿಯ ಸಿಎಂ ರಾಜಕೀಯ ಪ್ರವಾಸದಲ್ಲಿದ್ದಾರೆ, ಆದರೆ ದೆಹಲಿಯಲ್ಲಿ ವಾಯು ಮಾಲಿನ್ಯದಿಂದ ರಾಷ್ಟ್ರ ರಾಜಧಾನಿಯ ಜನರು ತತ್ತರಿಸಿದ್ದಾರೆ. "ಅವರು ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದರು. ಜನರು ಮಾಲಿನ್ಯದಿಂದ ಸಾಯುತ್ತಿದ್ದಾರೆ ಆದರೆ ಅವರು ಹಿಮಾಚಲ ಮತ್ತು ಗುಜರಾತ್ ನಲ್ಲಿ ರಾಜಕೀಯ ಪ್ರವಾಸದಲ್ಲಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಕಿಡಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ, ಆದ್ದರಿಂದ ದೆಹಲಿಯ ಜನರು ಮಾಲಿನ್ಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಖವಾಡಗಳನ್ನು ಧರಿಸಬೇಕು ಎಂದು ಕಿಡಿಕಾರಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಾಂಡವಿಯಾ, ದೆಹಲಿಯ ಜನರು ಮಾಸ್ಕ್ ಧರಿಸಿ ವಾಯು ಮಾಲಿನ್ಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತೆ ಒತ್ತಾಯಿಸಲಾಗಿದೆ ಏಕೆಂದರೆ ಕೇಜ್ರಿವಾಲ್ ಜಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಉಚಿತ ರೇವಾರಿಗೆ ಸಂಬಂಧಿಸಿದ ಭರವಸೆಗಳನ್ನು ನೀಡುವಲ್ಲಿ ಮತ್ತು ದೆಹಲಿ ತೆರಿಗೆದಾರರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜಾಹೀರಾತು ನೀಡುತ್ತಿದ್ದಾರೆ ಎಂದು ಟ್ವೀಟ್ ಗುದ್ದು ನೀಡಿದ್ದಾರೆ.
450 ರ ಗಡಿ ದಾಟಿದ ಮಾಲಿನ್ಯ ಸೂಚ್ಯಂಕ: ದೆಹಲಿಯಲ್ಲಿ ವಾಯುಮಾಲಿನ್ಯ ಮತ್ತಷ್ಟುಗಂಭೀರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್ ಅವಕಾಶ ನೀಡಲಾಗಿದೆ. ಇದೇ ವೇಳೆ ಖಾಸಗಿ ಕಂಪನಿಗಳು ಕೂಡ ಇದೇ ನೀತಿ ಅನುಸರಿಸಬೇಕು ಎಂದು ಸೂಚಿಸಲಾಗಿದೆ.
ಇನ್ನೊಂದು ಕಡೆ 1ರಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ಪುಟ್ಟಮಕ್ಕಳ ಆರೋಗ್ಯದ ಸೃಷ್ಟಿಯಿಂದ ಶನಿವಾರದಿಂದ ರಜೆ ಘೋಷಿಸಲಾಗಿದೆ. ನಂತರದ ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗಿದ್ದರೂ, ಯಾವುದೇ ಹೊರಂಗಣ ಚಟುವಟಿಕೆಗಳನ್ನು ನಡೆಸದಂತೆ ಸೂಚಿಸಲಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
Delhi Air Pollution crisis; ದೆಹಲಿ ಜನರ ಪ್ರಾಣಕ್ಕೆ ವಿಷಗಾಳಿ ಕಂಟಕ!
ಇನ್ನು ವಾಯುಮಾಲಿನ್ಯ ತಗ್ಗಿಸಲು ಈ ಹಿಂದಿನಂತೆ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಮರುಜಾರಿಗೆ ಚಿಂತಿಸಲಾಗುತ್ತಿದೆ. ಜೊತೆಗೆ ಬೈಕು, ಕಾರ್‌ನಂಥ ವಾಹನಗಳನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆ ಉತ್ತೇಜಿಸಲಾಗುತ್ತಿದೆ. ಸರ್ಕಾರವೇ 500 ಸಿಎನ್‌ಜಿ ಚಾಲಿತ ಖಾಸಗಿ ಬಸ್‌ಗಳನ್ನು ‘ಪರಾರಯವರಣ ಬಸ್ ಸೇವೆ’ ಹೆಸರಿನಲ್ಲಿ ಓಡಿಸಲು ನಿರ್ಧರಿಸಿದೆ ಎಂದು ವರ್ಕ್ ಫ್ರಂ ಹೋಂ ಘೋಷಣೆ ಮಾಡುವ ವೇಳೆ ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ. ಸರ್ಕಾರದ ಸೂಚನೆ ಜಾರಿಗೆ 6 ತಂಡಗಳನ್ನು ರಚಿಸಲಾಗಿದೆ.
Delhi Pollution: ಮಿತಿಮೀರಿದ ವಾಯುಮಾಲಿನ್ಯ; ಧೂಮಪಾನಕ್ಕಿಂತಲೂ ಡೇಂಜರಸ್ ಎಂದ ತಜ್ಞರು
ಮಾಲಿನ್ಯ ನಿಯಂತ್ರಣ , ನ.10ಕ್ಕೆ ಸುಪ್ರೀಂ ವಿಚಾರಣೆ: ದೆಹಲಿಯಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕೃಷಿತ್ಯಾಜ್ಯ ಸುಡುವಿಕೆಗೆ ತಡೆ ಹೇರಿ ಹೊಸ ಮಾರ್ಗಸೂಚಿ ಮಾಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ನ.10ಕ್ಕೆ ವಿಚಾರಣೆ ನಡೆಸಲು ಸುಪ್ರೀಂಕೋರ್ಚ್ ಸಮ್ಮತಿಸಿದೆ. ವಕೀಲ ಶಶಾಂಕ್ ಶೇಖರ್ ಎಂಬುವವರು ಅರ್ಜಿ ಸಲ್ಲಿಸಿದ್ದರು.
