ರಸ್ತೆ ಗುಂಡಿ ಮುಚ್ಚಲು ಜಿಯೊಪಾಲಿಮರ್, ಮುಂಬೈಗೆ ಏಕನಾಥ್ ಶಿಂಧೆ ಹೊಸ ಸ್ಪರ್ಶ!

ಒಂದು ಮಳೆ ಬಂದರೆ ರಸ್ತೆ ನದಿಯಂತಾಗುತ್ತದೆ. ಇನ್ನು ಮಳೆ ನಿಂತರೆ ರಸ್ತೆಯಲ್ಲಿರುವ ಅಷ್ಟು ಗುಂಡಿಗಳು ಎದ್ದು ಕಾಣುತ್ತಿದೆ. ಈ ರಸ್ತೆಗಳಲ್ಲಿ ಸವಾರಿ ಅತ್ಯಂತ ಸವಾಲು. ಹಲವರ ಜೀವಕ್ಕೆ ಕುತ್ತು ಬಂದಿದೆ. ಇದೀಗ ಇಂತಹ ರಸ್ತೆಗಳನ್ನು ಸರಿಪರಿಸಲು ಮಹಾ ಸಿಎಂ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ. 

CM Eknath shinde plan to change Mumbai potholes roads announces Geopolymer technique to fill ckm

ಮುಂಬೈ(ಜು.25): ಮಹಾನಗರಗಲ್ಲಿ ರಸ್ತೆ ಗುಂಡಿ ಸಮಸ್ಯೆ, ಒಳಚರಂಡಿ ಸಮಸ್ಯೆ, ನದಿಯಂತಾಗುವ ರಸ್ತೆ ಸೇರಿದಂತೆ ಸಮಸ್ಯೆಗಳು ಒಂದೆರಡಲ್ಲ. ಅದರಲ್ಲೂ ಮುಂಬೈ ಮಹಾನಗದಲ್ಲಿ ರಸ್ತೆ ಗುಂಡಿ ವಿರುದ್ಧ ಅಭಿಯಾನವೇ ಆರಂಭಗೊಂಡಿದೆ. ಜನರ ಸಮಸ್ಯೆಗೆ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ರಸ್ತೆ ಗುಂಡಿ ಮುಚ್ಚಲು ನಿರ್ಧರಿಸಿದ್ದಾರೆ. ಇಷ್ಟೇ ಅಲ್ಲ ನೀರಿನಿಂದ ನದಿಯಂತಾಗುವ ರಸ್ತೆಗಳ ಸ್ವರೂಪ ಬದಲಿಸುವುದಾಗಿ ಶಿಂಧೆ ಘೋಷಿಸಿದ್ದಾರೆ. ರಸ್ತೆ ಗುಂಡಿ ಮುಚ್ಚಲ ಜಿಯೋಪಾಲಿಮರ್ ತಂತ್ರಜ್ಞಾನ ಬಳಸುವುದಾಗಿ ಶಿಂಧೆ ಹೇಳಿದ್ದಾರೆ. ಈ ಕುರಿತ್ ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ, ಸ್ಥಳೀಯ ಶಾಸಕರ ಜೊತೆ ಶಿಂಧೆ ಸಭೆ ನಡೆಸಿದ್ದಾರೆ. ಶೀಘ್ರದಲ್ಲೇ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಿಂಧೆ ಹೇಳಿದ್ದಾರೆ.  ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿರುವ ಎಕನಾಥ್ ಶಿಂಧೆ ಬಣ ಮುಂಬೈಗೆ ಹೊಸ ಸ್ಪರ್ಶ ನೀಡಲು ಮುಂದಾಗಿದೆ. ರಸ್ತೆ ಗುಂಡಿ ಜೊತೆಗೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಎದುರಾಗವು ಮಳೆ ನೀರಿನ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿದೆ. 

ಮುಂಬೈನಲ್ಲಿ ರಸ್ತೆಗಳ ಸಮಸ್ಯೆಗೆ ಶೀಘ್ರ ಪರಿಹಾರ ನೀಡಲು ಏಕನಾಥ್ ಶಿಂಧೆ ಮುಂಬೈ ಪಾಲಿಕೆಗೆ ಸೂಚಿಸಿದ್ದಾರೆ. ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸಿ ಶಾಶ್ವತ ಪರಿಹಾರಕ್ಕೆ ಮಾರ್ಗ ಕಂಡುಕೊಂಡಿದ್ದಾರೆ. ಇದೀಗ ಜಿಯೋಪಾಲಿಮರ್ ಮೂಲಕ ರಸ್ತೆ ಗುಂಡಿ ಮುಚ್ಚಿ ಸವಾರರಿಗೆ ಅನೂಕೂಲ ಮಾಡಿಕೊಡುವ ಭರವಸೆಯನ್ನು ಶಿಂಧೆ ನೀಡಿದ್ದಾರೆ. ಮುಂಬೈನ ಹಲವು ಪ್ರದೇಶಗಳು ಮಳೆ ನೀರಿನಿಂದ ಮುಳುಗಡೆ ಸಾಮಾನ್ಯವಾಗಿದೆ. ಈ  ಸಮಸ್ಯೆಗೆ ಪರಿಹಾರ ನೀಡಲು ಶಿಂಧೆ ಸೂಚಿಸಿದ್ದಾರೆ.

ಉದ್ಧವ್‌ ಠಾಕ್ರೆ ವಿರುದ್ಧ ಅಂತಿಮ ಅಸ್ತ್ರ ಪ್ರಯೋಗ: ಶಿವಸೇನೆ ಹಕ್ಕುದಾರಿಕೆ ಕೋರಿ ಆಯೋಗದ ಮೆಟ್ಟಿಲೇರಿದ ಶಿಂಧೆ

ರಾಜಕೀಯ ತಿಕ್ಕಾಟ, ಬಣ ರಾಜಕೀಯ, ಶಿವಸೇನೆ ಪಕ್ಷದ ಕಾದಾಟ, ಕಾನೂನು ಹೋರಾಟದ ನಡುವೆ ಏಕನಾಥ್ ಶಿಂಧೆ ಮುಂಬೈಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಇತ್ತ ಶಿಂಧೆಗೆ ಭರ್ಜರಿ ಬೆಂಬಲವೂ ವ್ಯಕ್ತವಾಗುತ್ತಿದೆ.  ಉದ್ಧವ್ ಠಾಕ್ರೆ ಬಣದಲ್ಲಿದ್ದ ಸಂಸದರು ಇದೀಗ ಶಿಂಧೆ ಬಣ ಸೇರಿಕೊಳ್ಳುತ್ತಿದ್ದಾರೆ.    19 ಶಿವಸೇನಾ ಸಂಸದರ ಪೈಕಿ 12 ಮಂದಿ ಸೋಮವಾರ ಮುಖ್ಯಮಂತ್ರಿ ಏಕನಾಥ ಶಿಂಧೆ ಜತೆ ಗುರುತಿಸಿಕೊಂಡಿದ್ದಾರೆ.

ಅಲ್ಲದೆ, ಉದ್ಧವ್‌ ಬಣದ ಶಿವಸೇನೆಯ ಲೋಕಸಭೆ ನಾಯಕರಾಗಿದ್ದ ವಿನಾಯಕ ರಾವುತ್‌ರನ್ನು ಬದಲಿಸಬೇಕು. ತಮ್ಮದೇ ಬಣದ ರಾಹುಲ್‌ ಶೇವಳೆ ಅವರನ್ನು ಸದನದ ನಾಯಕ ಮಾಡ ಬೇಕು ಎಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಶಿಂಧೆ ಬಣ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪೀಕರ್‌ ಸಮ್ಮತಿಸಿದ್ದು, ಶೇವಳೆ ಅವರನ್ನು ಲೋಕಸಭೆಯ ಶಿವಸೇನೆ ನಾಯಕನನ್ನಾಗಿ ನೇಮಿಸಿ ಮಾನ್ಯತೆ ನೀಡಿದ್ದಾರೆ.

 

ಏಕನಾಥ್ ಶಿಂಧೆಗೆ ರಾಜಕೀಯದ ಪ್ರಶ್ನೆ ಕೇಳಿದ ಪೋರಿ, ನಗು ತಡೆಯದಾದ ಮಹಾರರಾಷ್ಟ್ರ ಸಿಎಂ

ಬಿಜೆಪಿ ಜತೆ ಮೈತ್ರಿಗೆ ಠಾಕ್ರೆಗೆ ಒಲವಿತ್ತು:
ಅಲ್ಲದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಳೆದ ವರ್ಷ ಉದ್ಧವ್‌ ಠಾಕ್ರೆ ಮುಂದಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ಹಿಂದೆ ಸರಿದರು ಎಂದು ಶಿಂಧೆ ಹೇಳಿದ್ದಾರೆ.

Latest Videos
Follow Us:
Download App:
  • android
  • ios