ಸಂಪುಟ ರಚನೆ ಬಳಿಕ ಪಂಜಾಬ್ ಮುಖ್ಯಮಂತ್ರಿ ಘೋಷಣೆಒಂದೇ ತಿಂಗಳಲ್ಲಿ 25 ಸಾವಿರ ಹುದ್ದೆ ಭರ್ತಿಗೆ ಆದೇಶಪೊಲೀಸ್ ಇಲಾಖೆಯಲ್ಲಿಯೇ 10 ಸಾವಿರ ಹುದ್ದೆ ಭರ್ತಿ
ಚಂಡೀಗಢ (ಮಾ. 19): ಪಂಜಾಬ್ ( Punjab ) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ( New Chief Minister ) ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲಿಯೇ ಭಗವಂತ್ ಮಾನ್ ( Bhagwant Mann ) ರಾಜ್ಯದ ಯುವ ಜನತೆಗೆ ದೊಡ್ಡ ಬಹುಮಾನ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿರುವ ನಿರುದ್ಯೋಗದ ಅಲ್ಪ ಪರಿಹಾರವಾಗಿ ಮುಂದಿನ ಒಂದೇ ತಿಂಗಳಲ್ಲಿ 25 ಸಾವಿರ ಸರ್ಕಾರಿ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದರಲ್ಲಿ ಪೊಲೀಸ್ ಇಲಾಖೆಗೆ (Police Dept) 10 ಸಾವಿರ, ವಿವಿಧ ಇಲಾಖೆಗಳಿಗೆ (Other Dept) 15 ಸಾವಿರ ಹುದ್ದೆಗಳು ಸೇರ್ಪಡೆಯಾಗಲಿವೆ. ಚುನಾವಣೆಗೂ ಮುನ್ನ ಭಗವಂತ್ ಮಾನ್ ಅವರು ತಾವು ಅಧಿಕಾರಕ್ಕೇರಿದ ದಿನದಂದೇ ಹಲವು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದರು.
ಪಂಜಾಬ್ ನಲ್ಲಿ ಸಚಿವ ಸಂಪುಟ ವಿಸ್ತರಣೆ ( PUnjab Cabinet Expansion ) ಬಳಿಕ ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಮೊದಲ ಸಂಪುಟ ಸಭೆಯಲ್ಲಿ ( First Cabinet Meeting ) ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪಂಜಾಬ್‌ನ ಸರ್ಕಾರಿ ಇಲಾಖೆಯಲ್ಲಿ (Punjab Govt Ofice) 25000 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಪೊಲೀಸ್ ಇಲಾಖೆಗೆ 10 ಸಾವಿರ, ವಿವಿಧ ಇಲಾಖೆಗಳಿಗೆ 15 ಸಾವಿರ ಹುದ್ದೆಗಳು ಸೇರ್ಪಡೆಯಾಗಲಿವೆ. ಒಂದು ತಿಂಗಳೊಳಗೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ಭಗವಂತ್ ಮಾನ್ ಈಗಾಗಲೇ ಅವರ ಸಂಪುಟ ರಚನೆ ಮಾಡಿದ್ದಾರೆ. ಸ್ವತಃ ಭಗವಂತ್ ಮಾನ್ ಅವರೇ ಹೋಳಿ ದಿನದ ಸಂಜೆ ಟ್ವೀಟ್ ಮಾಡುವ ಮೂಲಕ ತಮ್ಮ ಸಚಿವರ ಹೆಸರನ್ನು ಪ್ರಕಟಿಸಿದ್ದರು. ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಭಗವಂತ್ ಮಾನ್ ಹೊಸ ಸಂಪುಟದಲ್ಲಿ ಪ್ರತಿಯೊಂದು ವಿಭಾಗ ಮತ್ತು ಪ್ರದೇಶವನ್ನು ತಲುಪಲು ಪ್ರಯತ್ನಿಸಿದ್ದಾರೆ. ಸಚಿವ ಸಂಪುಟ ರಚನೆಯಲ್ಲೂ ಮಾಜಾ ಮತ್ತು ಮಾಳವಾ ಪ್ರದೇಶಗಳ ಪ್ರಾಬಲ್ಯ ಎದ್ದು ಕಾಣುತ್ತಿದೆ.
ಮಾನ್ ಅವರ ಸಂಪುಟದಲ್ಲಿ ಸ್ಥಾನ ಪಡೆದಿರುವ ಸಚಿವರುಗಳು, ಅನೇಕ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ. ಆಮ್ ಆದ್ಮಿ ಪಕ್ಷದ ಹೊಸದಾಗಿ ಚುನಾಯಿತ ಶಾಸಕರಲ್ಲಿ ವಿವಿಧ ಪ್ರದೇಶಗಳಿಂದ ಬರುವ ಜನರು ಸೇರಿದ್ದಾರೆ. ಇವರಲ್ಲಿ ಇಬ್ಬರು ರೈತರು, ಮೂವರು ವಕೀಲರು, ಇಬ್ಬರು ವೈದ್ಯರು, ಒಬ್ಬ ಸಮಾಜ ಸೇವಕ, ಒಬ್ಬ ಇಂಜಿನಿಯರ್ ಮತ್ತು ಒಬ್ಬರು ಭಗವಂತ್ ಮಾನ್ ಅವರ ಸಂಪುಟದಲ್ಲಿ ಪ್ರಮಾಣ ವಚನ ಪಡೆದುಕೊಂಡಿದ್ದಾರೆ.
ರೈತ, ವಕೀಲ, ಡಾಕ್ಟರ್, ಇಂಜಿನಿಯರ್: ನೂತನ 'ಕ್ಯಾಪ್ಟನ್' ಮಾನ್ ಟೀಂ 10 ಇದು!
ಪಂಜಾಬ್ ಚುನಾವಣೆಯಲ್ಲಿ ( Punjab Election ) ಭಾರೀ ಗೆಲುವಿನ ನಂತರ, ಆಮ್ ಆದ್ಮಿ ಪಕ್ಷದ (ಎಎಪಿ) (Aam Aadmi Party ) ಭಗವಂತ್ ಮಾನ್ ಮಾರ್ಚ್ 16 ರಂದು ಶಹೀದ್-ಎ-ಆಜಮ್ ಭಗತ್ ಸಿಂಗ್ ಅವರ ಸ್ಥಳೀಯ ಗ್ರಾಮವಾದ ಖಟ್ಕರ್ಕಲನ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ತಮ್ಮ ಹಸಿರು ಪೆನ್ ಮೊದಲಿಗೆ ಯುವಕರಿಗೆ ಉದ್ಯೋಗ ಸಿಗುಔ ಭರವಸೆಗಳಿಗೆ ಸಹಿ ಹಾಕುತ್ತದೆ' ಎಂದು ಭಗವಂತ್ ಮಾನ್ ಈ ಮುನ್ನ ಹೇಳಿದ್ದರು.
Punjab Cabinet: ಮಾನ್ ಸಂಪುಟದಲ್ಲಿ ಓರ್ವ ಮಹಿಳೆ, 2ನೇ ಬಾರಿ ಶಾಸಕರಾದವರ ನಿರ್ಲಕ್ಷ್ಯ!
ಶನಿವಾರದಂದು, ಭಗವಂತ್ ಮಾನ್ ನೇತೃತ್ವದ ಪಂಜಾಬ್‌ನ ಕ್ಯಾಬಿನೆಟ್‌ಗೆ ಮಹಿಳಾ ಸದಸ್ಯೆ ಸೇರಿದಂತೆ 10 ಎಎಪಿ ಶಾಸಕರನ್ನು ಸೇರಿಸಿಕೊಳ್ಳಲಾಯಿತು. ಪಂಜಾಬ್ ನ ರಾಜಭವನದ ಗುರುನಾನಕ್ ದೇವ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು 10 ಮಂದಿ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
