ನವದೆಹಲಿ(ಏ.07): ರಾಜಧಾನಿ ದೆಹಲಿಯಲ್ಲಿ ಕೊರೋನಾ ನಿಯಂತ್ರಣಕ್ಕೇನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಸಿಎಂ ಅರವಿಂದ್ ಕೇಜ್ರೀವಾಲ್ ಬಹಿರಂಗಪಡಿಸಿದ್ದಾರೆ. 

ದೆಹಲಿ ಸರ್ಕಾರ 5T ಹೆಸರಿನ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಇದರಲ್ಲಿ ಟೆಸ್ಟಿಂಗ್, ಟ್ರೇನಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್, ಟೀಂ ವರ್ಕ್ ಹಾಗೂ ಟ್ರ್ಯಾಕಿಂಗ್ ಆಂಡ್ ಮಾನಿಟರಿಂಗ್ ಕೂಡಾ ಶಾಮೀಲಾಗಿದೆ. ಅಲ್ಲದೇ ದೆಹಲಿಯಲ್ಲಿ ಮುನ್ನೂರು ಸೋಂಕಿತರಿದ್ದರೂ ಚಿಕಿತ್ಸೆ ನೀಡಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ. ಸದ್ಯ ಇಲ್ಲಿ ಐನೂರು ಸೋಂಕಿತರಿದ್ದು, ವೈದ್ಯರು ಹಾಗೂ ದಾದಿಯರೇ ಈ ಸಮರದ ಬಹುಮುಖ್ಯ ಯೋಧರೆಂದು ತಿಳಿಸಿದ್ದಾರೆ.

ವಿಡಿಯೋ ಸಂದೇಶದಲ್ಲಿ ಈ ಮಾಹಿತಿ ನೀಡಿರುವ ಅರವಿಂದ್ ಕೇಜ್ರೀವಾಲ್ ನಾವು ಕೊರೋನಾಗಿಂತ ಮೂರು ಹೆಜ್ಜೆ ಮುಂದಿರಬೇಕು. ನಿದ್ದೆ ಮಾಡುತ್ತಾ ಉಳಿದರೆ ಇದನ್ನು ನಿಯಂತ್ರಿಸೋದು ಅಸಾಧ್ಯ ಎಂದಿದ್ದಾರೆ.

'ದೆಹಲಿಗೆ ಹೋಗಿ ಬಂದವರಿಂದಲೇ ಕೊರೋನಾ ವೈರಸ್‌ ಹೆಚ್ಚಳ'

ಟೆಸ್ಟಿಂಗ್: ಟೆಸ್ಟಿಂಗ್ ನಡೆಯದೆ ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂದು ತಿಳಿಯುವುದಿಲ್ಲ. ಹೀಗಾಗಿ ಟೆಸ್ಟಿಂಗ್ ಅತೀ ಅಗತ್ಯ ಎಂದಿದ್ದಾರೆ.

ಟ್ರೇಸಿಂಗ್: ಕೊರೋನಾ ಸೋಂಕಿತ ಹದದಿನಾಲ್ಕು ದಿನಗಳಲ್ಲಿ ಯಾರು ಯಾರನ್ನು ಬೇಟಿಯಾದ. ಅವರೆಲ್ಲರನ್ನೂ ಟ್ರೇಸ್ ಮಾಡಲಾಗುತ್ತದೆ. ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಇದಕ್ಕೆ ಪೊಲೀಸರೂ ಸಹಾಯ ಮಾಡುತ್ತಿದ್ದಾರೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ.

ಟ್ರೀಟ್ಮೆಂಟ್: ಕೊರೋನಾ ಸೋಂಕು ಯಾರಲ್ಲಿ ಕಂಡು ಬರುತ್ತದೋ ಅವರೆಲ್ಲರಿಗೂ ಚಿಕಿತ್ಸೆ ಅತೀ ಅಗತ್ಯ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ ಎಂದಿದ್ದಾರೆ.

ಟೀಂ ವರ್ಕ್: ಒಬ್ಬಂಟಿಯಾಗಿ ಕೊರೋನಾಗೆ ನಿಯಂತ್ರಿಸೋದು ಅಸಾಧ್ಯ. ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಜೋಡಿಸಿ ಕ್ರಮ ಕೈಗೊಳ್ಳುತ್ತಿರುವುದು ಅತ್ಯುತ್ತಮ. ರಾಜ್ಯ ಸರ್ಕಾರಗಳು ಇತರ ರಾಜ್ಯ ಸರ್ಕಾರವನ್ನು ನೋಡಿ, ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ಸಮದಲ್ಲಿ ವೈದ್ಯರು ಹಾಗೂ ದಾದಿಯರೇ ಬಹುದೊಡ್ಡ ಯೋಧರು ಎಂದಿದ್ದಾರೆ.

ಟ್ರ್ಯಾಕಿಂಗ್ ಆಂಡ್ ಮಾನಿಟರಿಂಗ್: ಈ ಮೇಲಿನ ನಾಲ್ಕು ಹಂತಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಾ ಎಂಬುವುದನ್ನು ಪರಿಶೀಲಿಸುವ ಕೆಲಸವನ್ನು ಸಿಎಂ ಅರವಿಂದ್ ಕೇಜ್ರೀವಾಲ್ ಖುದ್ದು ತಾವೇ ವಹಿಸಿಕೊಂಡಿದ್ದಾರೆ. ತಾವು ಸಿದ್ಧಪಡಿಸಿ, ಕಾರ್ಯ ರೂಪಕ್ಕೆ ತಂದಿರುವ ಪ್ಲಾನ್ ಸರಿಯಾಗಿ ನಡೆಯುತ್ತಿದೆಯಾ ಎಂಬುವುದನ್ನು ಅವರೇ ನೋಡಿಕೊಳ್ಳಲಿದ್ದಾರೆ.

ದಿಲ್ಲಿ ಆಸ್ಪತ್ರೆಗಳಲ್ಲಿ ತಬ್ಲೀಘಿ ಸದಸ್ಯರ ಹುಚ್ಚಾಟ, ವೈದ್ಯರ ಜೊತೆಗೆ ದುರ್ವರ್ತನೆ!

"