ದಿಲ್ಲಿ ಆಸ್ಪತ್ರೆಗಳಲ್ಲಿ ತಬ್ಲೀಘಿ ಸದಸ್ಯರ ಹುಚ್ಚಾಟ, ವೈದ್ಯರ ಜೊತೆಗೆ ದುರ್ವರ್ತನೆ!
ಮತ್ತಷ್ಟುದಿಲ್ಲಿ ಆಸ್ಪತ್ರೆಗಳಲ್ಲಿ ತಬ್ಲೀಘಿ ಸದಸ್ಯರ ಹುಚ್ಚಾಟ!| ಚಿಕಿತ್ಸೆಗೆ ಸ್ಪಂದಿಸದೆ, ವೈದ್ಯರ ಜೊತೆಗೆ ದುರ್ವರ್ತನೆ| ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಕೇಸು ದಾಖಲು| ದೇಶಾದ್ಯಂತ ಸೋಂಕಿತರಲ್ಲಿ ತಬ್ಲೀಘಿಗಳೇ ಶೇ.30
ನವದೆಹಲಿ(ಏ.04): ಇಲ್ಲಿನ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ಕಾನೂನುಬಾಹಿರವಾಗಿ ಕಾರ್ಯಕ್ರಮ ನಡೆಸಿದ್ದ ತಬ್ಲೀಘಿ ಜಮಾತ್ ಕಾರ್ಯಕರ್ತರು, ಇದೀಗ ಆಸ್ಪತ್ರೆಯಲ್ಲೂ ತಮ್ಮ ಅನುಚಿತ ವರ್ತನೆ ಮುಂದುವರೆಸಿದ್ದಾರೆ. ಕೊರೋನಾ ಸೋಂಕು ಪೀಡಿತರಾಗಿ ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಕಾರ್ಯಕರ್ತರು, ಔಷಧಿ ಸೇವಿಸಲು ನಿರಾಕರಿಸುತ್ತಿರುವುದಲ್ಲದೇ, ವೈದ್ಯಕೀಯ ಸಿಬ್ಬಂದಿ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ದೆಹಲಿಯ ಹಲವು ಆಸ್ಪತ್ರೆಗಳ ವೈದ್ಯರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸೂಕ್ತ ಭದ್ರತೆಗೆ ಮನವಿ ಮಾಡಿದ್ದಾರೆ.
ಭಾರತ ಲಾಕ್‌ಡೌನ್ ಮೋದಿಯ ದೂರದೃಷ್ಟಿ ಹಾಗೂ ಧೈರ್ಯದ ನಿರ್ಧಾರ: WHO ರಾಯಭಾರಿ!
ಈ ನಡುವೆ ಉತ್ತರಪ್ರದೇಶದ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಮಹಿಳಾ ನರ್ಸ್‌ಗಳ ಜೊತೆಗೆ ಅನುಚಿತವಾಗಿ ವರ್ತಿಸಿದ ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಪ್ರಕರಣ ದಾಖಲಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಇನ್ನುಮುಂದೆ ಕೊರೋನಾವೈರಸ್ ಸೋಂಕಿತ ಅಥವಾ ಶಂಕಿತ ತಬ್ಲೀಘಿ ಸದಸ್ಯರಿಗೆ ಚಿಕಿತ್ಸೆ ನೀಡುವ ಅಥವಾ ಕ್ವಾರಂಟೈನ್ ಮಾಡುವ ಸ್ಥಳಗಳಲ್ಲಿ ಮಹಿಳಾ ನರ್ಸ್‌ಗಳು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬಾರದು. ಪುರುಷ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಬೇಕು ಎಂದೂ ನಿರ್ದೇಶನ ನೀಡಿದ್ದಾರೆ.
ಕೊರೋನಾ ಅಟ್ಟಹಾಸ: ಅಮೆರಿಕದಲ್ಲಿ ಒಂದು ಲಕ್ಷ ಶವಬ್ಯಾಗ್ ಸಿದ್ಧತೆ..!
ಗಾಜಿಯಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರುವ ಕೆಲ ತಬ್ಲೀಘಿ ಸದಸ್ಯರು ಗುರುವಾರ ವೈದ್ಯಕೀಯ ಸಿಬ್ಬಂದಿಯ ಮೇಲೆ ಉಗುಳುವುದು, ಅವರನ್ನು ನಿಂದಿಸುವುದು, ಮಹಿಳಾ ನರ್ಸ್‌ಗಳು ಬಂದಾಗ ಬೆತ್ತಲೆ ಓಡಾಡುವುದು ಮುಂತಾದ ರೀತಿಯಲ್ಲಿ ಅನುಚಿತವಾಗಿ ವರ್ತಿಸಿದ್ದರು.