ದೆಹಲಿ(ಜೂ.27): ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಹಲವು ಏರಿಯಾಗಳು ಸೀಲ್‌ಡೌನ್ ಆಗುತ್ತಿದೆ. ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳು ಮತ್ತೆ ಲಾಕ್‌ಡೌನ್ ಜಾರಿ ಮಾಡಿದೆ. ದೆಹಲಿ ಪರಸ್ಥಿತಿ ಕೈಮೀರಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಕೊರೋ ವೈರಸ್ ಪ್ರಕರಣಗಲು ಹೆಚ್ಚಾಗುತ್ತಿದೆ. ಇದಕ್ಕಾಗಿ 5 ಕಾರ್ಯಕ್ರಮಗಳನ್ನು ಮಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜಾರಿ ಮಾಡಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಿಸ್‌ ಇಂಡಿಯಾ ಕಂಟೆಸ್ಟೆಂಟ್ ಆಗಿದ್ದಾಗ ಹೀಗಿದ್ರು..!.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ, ಟೆಸ್ಟಿಂಗ್, ಆಸ್ಪತ್ರೆ, ಮುಂಜಾಗ್ರತ ಕ್ರಮಗಳು ಸೇರಿದಂತೆ ಹಲವು ಅಂಶಗಳನ್ನು ಕೇಜ್ರಿವಾಲ್ ತಮ್ಮ 5 ಅಂಶಗಳ ಕಾರ್ಯಕ್ರಮದಲ್ಲಿ ಸೇರಿಸಿದ್ದಾರೆ. 

ಸಿಎಂ ಕೇಜ್ರಿವಾಲ್ 5 ಅಂಶ ಕಾರ್ಯಕ್ರಮ:
ಮೊದಲ ಹೆಜ್ಜೆ:

ಸೋಂಕಿತರ ಚಿಕಿತ್ಸಗೆ ಬೆಡ್ ಜಾಸ್ತಿ ಮಾಡಲಾಗಿದೆ. ಜೂನ್ ಮೊದಲ ವಾರದಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ಸಿಗುತ್ತಿರಲಿಲ್ಲ. ಇದೀಗ ಎಲ್ಲಾ ಕಡೆ ಬೆಡ್ ಸಿಗುತ್ತಿವೆ. ರಾಧಾಾ ಸ್ವಾಮಿ ಸತ್‌ ಸಂಗ್‌ದಲ್ಲಿ 10 ಸಾವಿರ ಬೆಡ್ ರೆಡಿ ಮಾಡಲಾಗುತ್ತಿದೆ. 

ಎರಡನೇ ಹೆಜ್ಹೆ
ದೆಹಲಿಯ ಪ್ರತಿ ಗಲ್ಲಿ ಗಲ್ಲಿಯಲ್ಲಿ ಟೆಸ್ಟಿಂಗ್ ಮಾಡಲಾಗತ್ತಿದೆ. ಪ್ರತಿ ದಿನ 20,000 ಟೆಸ್ಟ್ ಮಾಡಲಾಗುತ್ತಿದೆ. ಟೆಸ್ಟಿಂಗ್ ಹಾಗೂ ಐಸೋಲೇಶನ್ ಸೆಂಟರ್ ಹೆಚ್ಚಿಸಲಾಗಿದೆ. 
 
ಮೂರನೇ ಹೆಜ್ಜೆ
ಸೋಂಕಿತರಿಗೆ ಆಕ್ಸಿಜನ್ ಮೀಟರ್ ನೀಡಲಾಗುತ್ತಿದೆ. 4 ಸಾವಿರ ಆಕ್ಸಿಜನ್ ಕಾನ್ಸೆಂಟರ್ ಖರೀದಿ ಮಾಡಲಾಗಿದೆ. 
 
ನಾಲ್ಕನೇ ಹೆಜ್ಜೆ
ಪ್ಲಾಸ್ಮ ಥೆರಪಿ: ಡ್ರಗ್ ಕಂಟ್ರೋಲ್ ಪತ್ರ ಬರೆಯಲಾಗಿದ್ದು, ಮಾಡ್ರೇಟ್ ಪೇಷೆಂಟ್ ಗೆ ಹೆಚ್ಚು ಅನುಕೂಲ

ಐದನೇ ಹೆಜ್ಜೆ
ಸರ್ವೇ, ಸ್ಕ್ರೀನಿಂಗ್- ಗಲ್ಲಿ ಗಲ್ಲಿ ಸರ್ವೇ ,ಸ್ಕ್ರೀನಿಂಗ್ ಮಾಡಲಾಗುತ್ತದೆ