ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಕುಟುಂಬಸ್ಥರು ನಾಳೆ ಆಯೋಧ್ಯೆಗೆ ಭೇಟಿ ನೀಡಿ ರಾಮ ಲಲ್ಲಾ ದರ್ಶನ ಪಡೆಯಲಿದ್ದಾರೆ.  

ಆಯೋಧ್ಯೆ(ಫೆ.11) ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೊಂಡ ಬಳಿಕ ಪ್ರತಿ ದಿನ ಲಕ್ಷಾಂತರ ಭಕ್ತರು ರಾಮ ಲಲ್ಲಾ ದರ್ಶನ ಪಡೆಯುತ್ತಿದ್ದಾರೆ. ಇದರ ನಡುವೆ ನಾಯಕರು, ಸೆಲೆಬ್ರೆಟಿಗಳು ಸೇರಿದಂತೆ ಹಲವರು ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಕುಟುಂಬಸ್ಥರು ಆಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಎರಡು ರಾಜ್ಯದ ಸಿಎಂಗಳು ರಾಮ ಲಲ್ಲಾ ದರ್ಶನ ಪಡೆಯುವ ಕುರಿತು ಆಪ್ ಖಚಿತಪಡಿಸಿದೆ.

ರಾಮ ಮಂದಿರ ಪ್ರಾಣಪ್ರತಿಷ್ಠೆ ದಿನ ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಸೇರಿದಂತೆ ಕೆಲ ನಾಯಕರಿಗೆ ಆಹ್ವಾನ ಸಿಕ್ಕಿರಲಿಲ್ಲ. ಈ ಕುರಿತು ಆರೋಪ ಪ್ರತ್ಯಾರೋಪಗಳು ನಡೆದಿತ್ತು. ಆದರೆ ಆಹ್ವಾನ ಸಿಗದೇ ಇರುವ ಕುರಿತು ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದರು. ರಾಮ ಮಂದಿರ ಪ್ರಾಣಪ್ರತಿಷ್ಠೆ ಬಳಿಕ ಆಯೋಧ್ಯೆಗೆ ತೆರಳಿ ರಾಮ ಮಂದಿರ ದರ್ಶನ ಪಡೆಯುವುದಾಗಿ ಹೇಳಿದ್ದರು. ಇದೀಗ ಫೆಬ್ರವರಿ 12ರಂದು ಅರವಿಂದ್ ಕೇಜ್ರಿವಾಲ್ ಹಾಗೂ ಮಾನ್ ಕುಟುಂಬ ಸಮೇತ ಆಯೋಧ್ಯೆ ದರ್ಶನ ಮಾಡುತ್ತಿದ್ದಾರೆ.

ಅರಗಿನ ಮನೆ ಸ್ಥಳ ಹಿಂದೂಗಳಿಗೆ ಸೇರಿದ್ದು: ರಾಮಾಯಣ ಬಳಿಕ ಮಹಾಭಾರತ ಕೇಸಲ್ಲೂ ಹಿಂದೂಗಳಿಗೆ ಜಯ!

ಇಂದು ಉತ್ತರ ಪ್ರದೇಶದ ಸಚಿವರು, ಶಾಸಕರು ಆಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಇಂದು ರಾಮ ಲಲ್ಲಾ ದರ್ಶನ ಪಡೆದಿದ್ದಾರೆ. ಬಿಜೆಪಿ ಸಚಿವರು, ಶಾಸಕರು ಮಾತ್ರವಲ್ಲ, ಕಾಂಗ್ರೆಸ್, ಮಾಯವತಿಯ ಬಹುಜನ ಸಮಾಜ್ ಪಾರ್ಟಿ, ರಾಜ್‌ಬಬ್ಬರ್ ನೇತೃತ್ವದ ಎಸ್‌ಬಿಎಸ್‌ಪಿ, ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕ ದಳ ಪಪಕ್ಷದ ಸದಸ್ಯರು ಬಸ್ ಮೂಲಕ ಆಯೋಧ್ಯೆಗೆ ತೆರಳಿ ರಾಮಮ ಲಲ್ಲಾ ದರ್ಶನ ಪಡೆದಿದ್ದಾರೆ.

ವಿರೋಧ ಪಕ್ಷದ ನಾಯಕ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ರಾಮ ಮಂದಿರ ದರ್ಶನ ಪ್ರವಾಸದಿಂದ ದೂರ ಉಳಿದಿದ್ದರು. ಅಲ್ಪಸಂಖ್ಯಾತರನ್ನು ಒಲೈಸಲು ಅಖಿಲೇಶ್ ಯಾದವ್ ರಾಮ ಮಂದಿರ ದರ್ಶನದಿಂದ ದೂರ ಉಳಿದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಫೆ.17 ರ ಇಡಿ ವಿಚಾರಣೆಗೆ ಹಾಜರಾಗಿ: ಕೇಜ್ರಿವಾಲ್‌ಗೆ ದೆಹಲಿ ಕೋರ್ಟ್ ಸಮನ್ಸ್