ಸುರಿ(ಮೇ.10): ರೈಲ್ವೆ ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್‌ ರೈಲು ಹರಿದು 16 ಜನ ಸಾವನ್ನಪ್ಪಿದ ಮಾರನೇ ದಿನವೇ ಮತ್ತೊಂದು ಅಂಥದ್ದೇ ಸಂಭಾವ್ಯ ಅಪಘಾತ ಅದೃಷ್ಟವಶಾತ್‌ ತಪ್ಪಿದೆ.

ಮಹಿಳೆಯರು, ಮಕ್ಕಳನ್ನು ಒಳಗೊಂಡ 20 ಜನರ ವಲಸಿಗರ ತಂಡ ಜಾರ್ಖಂಡ್‌ನಿಂದ ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಜಿಲ್ಲೆಗೆ ಮರಳುತ್ತಿತ್ತು. ಶುಕ್ರವಾರ ರಾತ್ರಿ ಈ ಕಾರ್ಮಿಕರು ಗುಂಪು ಬ್ರಾಂಭನಿ ನದಿಯ ಸೇತುವೆ ಮೇಲೆ ತೆರಳುತ್ತಿದ್ದ ವೇಳೆ ಏದುರಿನಿಂದ ಏಕಾಏಕಿ ತಪಾಸಣಾ ರೈಲೊಂದು ಎದುರಾಗಿದೆ.

ರೈಲಿಲ್ಲವೆಂದು ಹಳಿ ಮೇಲೆ ಮಲಗಿದ್ದ 17 ಮಂದಿ ರೈಲಿಗೆ ಸಿಲುಕಿ ಸಾವು....

ಅದೃಷ್ಟವಶಾತ್‌ ರೈಲಿನ ಚಾಲಕ, ಇವರನ್ನು ಗಮನಿಸಿ ರೈಲನ್ನು ನಿಲ್ಲಿಸ ಸಂಭಾವ್ಯ ಅವಘಢ ತಪ್ಪಿಸಿದ್ದಾರೆ. ಬಳಿಕ ರೈಲಿನ ಚಾಲಕ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಬಳಿಕ ಇವರನ್ನೆಲ್ಲಾ ರಕ್ಷಿಸಿ ಕರೆದೊಯ್ಯಲಾಗಿದೆ.