* 3 ತಿಂಗಳ ತರಬೇತಿ ನಂತರ ಸಿಧುಗೆ ವೇತನ* ವೈದ್ಯರ ಸಲಹೆಯಂತೇ ಐಶಾರಾಮಿ ಡಯಟ್* ಜೈಲಿನಲ್ಲಿ ಸಿಧುಗೆ ಕ್ಲರ್ಕ್ ನೇಮಕ!
ಚಂಡೀಗಢ(ಮೇ.27): 1988ರ ರಸ್ತೆ ಹೊಡೆದಾಟದ ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲಾ ಕೇಂದ್ರೀಯ ಜೈಲಿನಲ್ಲಿ ಗುಮಾಸ್ತನಾಗಿ ನೇಮಕ ಮಾಡಲಾಗಿದೆ.
ಜೈಲಿನ ನಿಯಮಗಳ ಪ್ರಕಾರ ಕೈದಿಗಳನ್ನು ಕೌಶಲ್ಯರಹಿತ, ಅರೆ ಕೌಶಲ್ಯವುಗಳ್ಳ ಹಾಗೂ ಕೌಶಲ್ಯ ಹೊಂದಿದ ಕೈದಿಗಳನ್ನಾಗಿ ವರ್ಗೀಕರಿಸಲಾಗುತ್ತದೆ. ಜೈಲಿನಲ್ಲಿ ಮಾಡಿದ ಕೆಲಸಕ್ಕೆ ಅನುಗುಣವಾಗಿ ಕೌಶಲ್ಯರಹಿತ, ಅರೆ ಕೌಶಲ್ಯವುಗಳ್ಳ ಹಾಗೂ ಕೌಶಲ್ಯ ಹೊಂದಿದ ಕೈದಿಗಳಿಗೆ ಕ್ರಮವಾಗಿ ದಿನಕ್ಕೆ 40 ರು., 50 ರು. ಹಾಗೂ 60 ರು. ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಧು ಅವರನ್ನು ಕ್ಲರ್ಕ್ ಆಗಿ ನೇಮಕ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೊದಲು ಸಿಧುಗೆ 3 ತಿಂಗಳು ಕೆಲಸದ ತರಬೇತಿ ನೀಡಲಾಗುವುದು. ನಂತರ ಅವರ ವೇತನವನ್ನು ನಿರ್ಧರಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನಲ್ಲೇ ವಿಶೇಷ ಆಹಾರ:
ಐಶಾರಾಮಿ ಸ್ಪಾದಲ್ಲಿರವಂತೆ ಸಿಧು ಅವರ ಡಯೆಟ್ ಚಾರ್ಚ್ ತಯಾರಿಸಲಾಗಿದೆ. ಆರೋಗ್ಯ ತಪಾಸಣೆಯ ನಂತರ ವೈದ್ಯರ ಶಿಫಾರಸಿನ ಮೇರೆಗೆ ಸಿಧುಗೆ ಜೈಲಿನಲ್ಲಿಯೇ ವಿಶೇಷ ಆಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ಸಿಧು ಆಪ್ತರು ತಿಳಿಸಿದ್ದಾರೆ.
ಬೆಳಿಗ್ಗೆ ಎದ್ದಿದ್ದೇ ಒಂದು ಕಪ್ ರೋಸ್‌ಮೆರಿ ಚಹಾ ಅಥವಾ ಒಂದು ಗ್ಲಾಸು ಎಳೆನೀರು ಕುಡಿಯುತ್ತಾರೆ. ಬೆಳಿಗ್ಗಿನ ಉಪಹಾರಕ್ಕಾಗಿ ಇವರಿಗೆ ಒಂದು ಗ್ಲಾಸು ಕೆನೆರಹಿತ ಹಾಲು, ಒಂದು ಟೇಬಲ್ ಸ್ಪೂನ್‌ನಷ್ಟುಅಗಸೆ/ಸೂರ್ಯಕಾಂತಿ ಅಥವಾ ಚಿಯಾ ಬೀಜಗಳು, 5-6 ಬಾದಾಮಿ, ಅಕ್ರೋಟು ಹಾಗೂ 2 ಪೀಕನ್ ನಟ್‌ಗಳನ್ನು ನೀಡಲಾಗುತ್ತದೆ. ಊಟಕ್ಕೂ ಮೊದಲು ಅವರಿಗೆ ಒಂದು ಗ್ಲಾಸು ಬೀಟರೂಟ್/ ಸೌತೆಕಾಯಿ/ ಮೂಸಂಬಿ/ ನೆಲ್ಲಿಕಾಯಿ/ ಹಳದಿ/ ಕ್ಯಾರೆಟ್ ಅಥವಾ ಅಲೊವೆರಾ ಜ್ಯೂಸ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಕಲ್ಲಂಗಡಿ, ಕಿವಿ, ಸ್ಟ್ರಾಬೆರಿ, ಪೇರಲೆ, ಸೇಬು ಇವುಗಳಲ್ಲಿ ಪ್ರತಿ ದಿನವೂ ಒಂದೊಂದು ಹಣ್ಣಿನಂತೇ ನೀಡಲಾಗುತ್ತದೆ. ಇದರೊಂದಿಗೆ ಕಪ್ಪು ಕಡಲೆ (25 ಗ್ರಾಂ), ಹೆಸರು ಬೇಳೆ (25 ಗ್ರಾಂ)ಯೊಂದಿಗೆ ಸೌತೆಕಾಯಿ/ ಟೊಮೊಟೊ/ ಅರ್ಧ ನಿಂಬೆ ಹಣ್ಣು/ ಅವಕಾಡೊ ಹಣ್ಣನ್ನು ನೀಡಲಾಗುತ್ತದೆ.
ಮಧ್ಯಾಹ್ನ ಊಟ:
ಊಟಕ್ಕೆ ಒಂದು ಚಪಾತಿ, ಒಂದು ಬಟ್ಟಲು ಹಸಿರು ತರಕಾರಿಗಳು ಹಾಗೂ ಸೌತೆಕಾಯಿ/ಬೀಟ್‌ರೂಟ್ ರಾಯಿತಾ ಜೊತೆಗೆ ಒಂದು ಗ್ಲಾಸು ಲಸ್ಸಿ ನೀಡಲಾಗುತ್ತದೆ.
ಸಂಜೆ ವೇಳೆಗೆ ಸಿಧು ಸಕ್ಕರೆ ರಹಿತ, ಕಡಿಮೆ ಕೊಬ್ಬಿನಾಂಶವಿರುವ ಹಾಲಿನಿಂದ ತಯಾರಿಸಿದ ಚಹಾ (100 ಮಿ.ಲೀ), ಪನೀರ್ (25 ಗ್ರಾಂ) ಹಾಗೂ ಅರ್ಧ ಲಿಂಬೆ ಹಣ್ಣಿನೊಂದಿಗೆ ಟೋಫು ಸೇವಿಸುತ್ತಾರೆ.
ರಾತ್ರಿ ಊಟ:
ರಾತ್ರಿ ಊಟಕ್ಕೆ ಒಂದು ಬಟ್ಟಲು ಬೇಯಿಸಿದ ಕ್ಯಾರೆಟ್, ಬೀನ್ಸ್, ಬ್ರೊಕಲಿ, ಅಣಬೆ ಹಾಗೂ ಬೆಲ್‌ಪೆಪ್ಪರ್ ಮೊದಲಾದ ಮಿಶ್ರ ತರಕಾರಿಗಳು, ಬೇಳೆ ಅಥವಾ ಕಪ್ಪು ಕಡಲೆಯ ಸೂಪ್ ನೀಡಲಾಗುತ್ತದೆ. ಪುನಃ ರಾತ್ರಿ ಮಲಗುವ ಮುನ್ನ ಕಾಮಮೈಲ್ ಚಹಾ ಹಾಗೂ ಅರ್ಧ ಗ್ಲಾಸು ಬೆಚ್ಚಗಿನ ನೀರಿನೊಂದಿಗೆ ಸೀಲಿಯಂ ಹಸ್‌್ಕ ಸೇವಿಸುತ್ತಾರೆ.
ಸಿಧು ಅವರಿಗೆ ನೀಡುವ ಆಹಾರ ತಯಾರಿಸುವಾಗ ಕಡಿಮೆ ಕೊಬ್ಬಿನಂಶವುಳ್ಳ ಆಹಾರ ಪದಾರ್ಥಗಳು, ಆಲಿವ್ ಎಣ್ಣೆ ಅಥವಾ ಕೋಲ್ಡ್ ಪ್ರೆಸ್ಡ್ ಎಣ್ಣೆ ಬಳಸಬೇಕು, ಕಡಿಮೆ ಪ್ರಮಾಣದಲ್ಲಿ ಉಪ್ಪು ಸೇರಿಸಬೇಕು. ಪ್ರತಿದಿನ ವ್ಯಾಯಾಮ ಮಾಡುವಂತೆ ತಿಳಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ
