Asianet Suvarna News Asianet Suvarna News

ಸುಪ್ರೀಂ ತೀರ್ಪು ಇನ್ನು ಸರಳ ಭಾಷೆಯಲ್ಲೂ ಲಭ್ಯ : ಸಿಜೆಐ

  • ಸುಪ್ರೀಂಕೋರ್ಟ್‌ ಕಲಾಪಗಳನ್ನು ಪತ್ರಕರ್ತರು ವರ್ಚುವಲ್‌ ಆಗಿ ವೀಕ್ಷಿಸಲು ಅವಕಾಶ
  • ಆ್ಯಪ್‌ಗೆ ಚಾಲನೆ ನೀಡಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ 
  • ಜನಸಾಮಾನ್ಯರಿಗೆ ಸಾಮಾನ್ಯ ಭಾಷೆಯಲ್ಲಿ ವಿವರಿಸುವ ಕುರಿತು ಇಂಡಿಕೇಟಿವ್‌ ನೋಟ್ಸ್‌ ಎಂಬ ಹೊಸ ವ್ಯವಸ್ಥೆ
CJI NV Ramana launches new Supreme Court mobile app snr
Author
Bengaluru, First Published May 14, 2021, 9:22 AM IST

ನವದೆಹಲಿ (ಮೇ.14): ಸುಪ್ರೀಂಕೋರ್ಟ್‌ನ ಕಲಾಪ ನೇರ ಪ್ರಸಾರ ಮಾಡುವ ಪ್ರಸ್ತಾಪ ಜಾರಿ ಕುರಿತು ತಾವು ಗಂಭೀರವಾಗಿ ಪರಿಶೀಲಿಸುತ್ತಿರುವುದಾಗಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ತಿಳಿಸಿದ್ದಾರೆ. 

ಸುಪ್ರೀಂಕೋರ್ಟ್‌ ಕಲಾಪಗಳನ್ನು ಪತ್ರಕರ್ತರು ವರ್ಚುವಲ್‌ ಆಗಿ ವೀಕ್ಷಿಸಲು ಅವಕಾಶ ನೀಡುವ ಆ್ಯಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಆದರೆ ಇಂಥದ್ದೊಂದು ವಿಷಯದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ನ್ಯಾಯಾಲಯದ ಇತರೆ ನ್ಯಾಯಾಧೀಶರ ಅಭಿಪ್ರಾಯಗಳನ್ನು ತಾವು ಸಂಗ್ರಹಿಸುವುದಾಗಿ ಅವರು ಹೇಳಿದರು.

ಸುಪ್ರೀಂಕೋರ್ಟ್ ನೂತನ ಸಿಜೆಐ ಎನ್​. ವಿ. ರಮಣ ಪ್ರಮಾಣವಚನ ಸ್ವೀಕಾರ!

ಇದೇ ವೇಳೆ ಕೋರ್ಟ್‌ನ ತೀರ್ಪುಗಳನ್ನು ಪತ್ರಕರ್ತರು ಮತ್ತು ಜನಸಾಮಾನ್ಯರಿಗೆ ಸಾಮಾನ್ಯ ಭಾಷೆಯಲ್ಲಿ ವಿವರಿಸುವ ಕುರಿತು ಇಂಡಿಕೇಟಿವ್‌ ನೋಟ್ಸ್‌ ಎಂಬ ಹೊಸ ವ್ಯವಸ್ಥೆಗೂ ಗುರುವಾರ ಚಾಲನೆ ನೀಡಲಾಗಿದೆ. ಸುಪ್ರೀಂಕೋರ್ಟ್‌ ವೆಬ್‌ಸೈಟ್‌ ಮತ್ತು ಆ್ಯಪ್‌ನಲ್ಲಿ ಲಭ್ಯವಿರುವ ಈ ಸೌಲಭ್ಯ ಬಳಸಿಕೊಂಡು, ಪತ್ರಕರ್ತರು ಮತ್ತು ಜನಸಾಮಾನ್ಯರು ಕೋರ್ಟ್‌ನ ತೀರ್ಪಿನ ಕುರಿತು ಹೆಚ್ಚಿನ ಅರಿವು ಪಡೆಯಬಹುದು ಎಂದು ಹೇಳಿದರು.

ಮಾಧ್ಯಮದ ಬೆಂಬಲಕ್ಕೆ ನಿಂತ ಸುಪ್ರೀಂ.. ಮೀಡಿಯಾ ತಡೆ ಸಾಧ್ಯವಿಲ್ಲ!

ಇದೇ ವೇಳೆ ನ್ಯಾಯಾಧೀಶರಾಗುವ ಮೊದಲು ತಾವು ಕೂಡಾ ಪತ್ರಕರ್ತರಾಗಿದ್ದನ್ನು ಮತ್ತು ಆ ವೇಳೆ ತಾವು ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುತ್ತಿದ್ದ ಬಗೆಯನ್ನು ಅವರು ಸ್ಮರಿಸಿಕೊಂಡರು.

Follow Us:
Download App:
  • android
  • ios