Asianet Suvarna News Asianet Suvarna News

ಮಾಧ್ಯಮದ ಬೆಂಬಲಕ್ಕೆ ನಿಂತ ಸುಪ್ರೀಂ.. ಮೀಡಿಯಾ ತಡೆ ಸಾಧ್ಯವಿಲ್ಲ!

ಸಾಮಾಜಿಕ ಚಿಂತನೆಯಿಂದ ವರದಿ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ/ ಸುಪ್ರೀಂ ನಲ್ಲಿ ಚುನಾವಣಾ ಆಯೋಗದ ಅರ್ಜಿ/ ಕೊರೋನಾ ಎರಡನೇರ ಅಲೆ  ನಡುವೆ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದ ಆಯೋಗ

Media cannot be stopped from reporting oral observations made by judges mah
Author
Bengaluru, First Published May 3, 2021, 5:32 PM IST

ನವದೆಹಲಿ(ಮೇ 03) ವಿಚಾರಣೆ ವೇಳೆ  ನ್ಯಾಯಾಧೀಶರು ವ್ಯಕ್ತಡಿಸುವ ಮೌಖಿಕ ಅಭಿಪ್ರಾಯಗಳನ್ನು ಮಾಧ್ಯಮಗಳು ಸಾಮಾಜಿಕ ಚಿಂತನೆಯಿಂದ ವರದಿ ಮಾಡುತ್ತಿದ್ದರೆ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಳೆದ ತಿಂಗಳು ನಡೆದ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಮೆರವಣಿಗೆಗಳ ಬಗ್ಗೆ ಬಗ್ಗೆ ಮದ್ರಾಸ್ ಹೈಕೋರ್ಟ್ ಯಾವುದೇ ಪುರಾವೆಗಳಿಲ್ಲದೆ ದೋಷಾರೋಪಣೆ ಮಾಡಿದೆ ಎಂದು ಚುನಾವಣಾ  ಆಯೋಗ ಸಲ್ಲಿಸಿದ್ದ ದೂರಿನ ವಿಚಾರಣೆ ವೇಳೆ ಈ ಅಭಿಪ್ರಾಯವನ್ನು ನ್ಯಾಯಾಲಯ ಮುಂದಿಟ್ಟಿದೆ.  ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಂ.ಆರ್.ಅವರು (ಹೈಕೋರ್ಟ್ ನ್ಯಾಯಾಧೀಶರು) ಸಹ ಮಾನವರು ಮತ್ತು ಅವರು ಸಹ ಒತ್ತಡಕ್ಕೊಳಗಾಗಿದ್ದಾರೆ. ಇದನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಿ. ಮಾಧ್ಯಮ ಸಹ ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭ  ಎಂಬುದನ್ನು  ಮರೆಯಬೇಡಿ ಎಂದು ತಿಳಿಸಿದೆ.

ಚಾಮರಾಜನಗರ ದುರಂತಕ್ಕೆ ಯಾರು ಹೊಣೆ?

ಹೈಕೋರ್ಟ್ ನ್ಯಾಯಾಧೀಶರು ಸಹ ಒತ್ತಡಕ್ಕೆ ಒಳಗಾಗಬೇಕಾದ ಅಗತ್ಯ ಇಲ್ಲ. ಅವರನ್ನು ಒತ್ತಡದಿಂದ ಕಟ್ಟಿಹಾಕುವ ಯತ್ನ ಮಾಡುವುದು ಸರಿ ಅಲ್ಲ ಎಂದು ಹೇಳಿದೆ.

ಕೊರೋನಾ ಸಂಕಷ್ಟದ ಕಾಲದಲ್ಲಿ ಹೈಕೋರ್ಟ್  ನ್ಯಾಯಾಧೀಶರು ತಮ್ಮ ಕೆಲಸವನ್ನು ಸಮರ್ಪಕವಾಗಿ ಮಾಡಿಕೊಂಡು ಬಂದಿದ್ದಾರೆ.  ಯಾವುದೆ ಹಳೆಯ ವಿಚಾರವನ್ನು ಇಟ್ಟುಕೊಂಡು ಅದನ್ನು ಇಲ್ಲಿಗೆ ತಾಳೆ ಹಾಕಬೇಡಿ ಎಂದು  ಚುನಾವಣಾ ಆಯೋಗಕ್ಕೂ ಹೇಳಿದೆ.

ಚುನಾವಣಾ ಆಯೋಗದ ಪರವಾಗಿ ವಾದ ಮಾಡಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ,  ಆಯೋಗಕ್ಕೆ ಮಾತನಾಡಲು ಅವಕಾಶ ನೀಡದೇ  ಅಭಿಪ್ರಾಯ ವ್ಯಕ್ತಮಾಡಿರುವುದು ಎಷ್ಟು ಸರಿ ಎಂದು  ಪ್ರಶ್ನೆ ಮಾಡಿದರು.

ಕೊರೋನಾ  ಎರಡನೇ ಅಲೆ ಆತಂಕದ ಮನಡುವೆಯೂ ಚುನಾವಣಾ ಆಯೋಗ  ಪಂಚರಾಜ್ಯಗಳ ಚುನಾವಣೆ ಘೋಷಣೆ ಮಾಡಿತ್ತು.. ಅದರ ಫಲಿತಾಂಶವೂ ಪ್ರಕಟವಾಗಿದೆ. ಕೊರೋನಾ ಎರಡನೇ ಅಲೆಯಂತಹ ಕಠಿಣ ಪರಿಸ್ಥಿತಿಯಲ್ಲಿ ಚುವಾನಣೆಗೆ ಅವಕಾಶ ಮಾಡಿಕೊಟ್ಟ ನಿಮ್ಮ ಮೇಲೆ ಕೊಲೆ ಪ್ರಕರಣ  ಯಾಕೆ ದಾಖಲುಮಾಡಬಾರದು ಎಂದು ಮದ್ರಾಸ್ ಹೈ ಕೋರ್ಟ್ ಆಯೋಗವನ್ನು ಕೇಳಿತ್ತು.. ಇದನ್ನು ಮಾಧ್ಯಮಗಳು ವರದಿ ಮಾಡಿದ್ದವು. 

"

Follow Us:
Download App:
  • android
  • ios