Asianet Suvarna News Asianet Suvarna News

ಸುಪ್ರೀಂ ಕೋರ್ಟ್‌ ಸಿಜೆಐ ಡಿವೈ ಚಂದ್ರಚೂಡ್‌ ಮರ್ಸೀಡೀಸ್‌ ಕಾರ್‌ ನಂಬರ್ ಪ್ಲೇಟ್‌ ವೈರಲ್‌!

ಹೂಡಿಕೆದಾರ ಲಾಯ್ಡ್‌ ಮಥಾಯಿಸ್‌ ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ ಸಿಜೆಐ ಅವರ ಕಾರ್‌ನ ನಂಬರ್‌ ಪ್ಲೇಟ್‌ ನೋಡಿದ ಬಳಿಕ ಅದನ್ನು ಶೇರ್‌ ಮಾಡಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

CJI DY Chandrachud Mercedes number plate goes viral sparks buzz san
Author
First Published Feb 18, 2024, 10:05 PM IST

ನವದೆಹಲಿ (ಫೆ.18): ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರ ಕಾರ್‌ನ ನಂಬರ್‌ ಪ್ಲೇಟ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿರುವುದು ಮಾತ್ರವಲ್ಲ ಚರ್ಚೆಯನ್ನೂ ಹುಟ್ಟುಹಾಕಿದೆ. ಸಿಜೆಐ ಡಿವೈ ಚಂದ್ರಚೂಡ್‌ ಅವರ ಮರ್ಸಿಡೀಸ್‌ ಕಾರ್‌ನ ನಂಬರ್‌ ಪ್ಲೇಟ್‌ ವಿಶೇಷ ನಂಬರ್‌ಅನ್ನು ಹೊಂದಿದ್ದು, ಡಿಎಲ್‌1 ಸಿಜೆಐ 0001 (DL1 CJI 0001) ಎನ್ನುವ ನಂಬರ್‌ ಹೊಂದಿದೆ. ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹೂಡಿಕೆದಾರ ಲಾಯ್ಡ್‌ ಮಥಾಯಿಸ್‌ ಎನ್ನುವವರು ಹಂಚಿಕೊಂಡಿದ್ದಾರೆ.'ದೆಹಲಿಯಲ್ಲಿ ಶನಿವಾರ ನಾನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರನ್ನು ಖಾಸಗಿ ಕಾರ್ಯಕ್ರಮದಲ್ಲಿ ನೋಡಿದೆ. ನಾನು ಸಮಾರಂಭದಿಂದ ಹೊರಬರುವ ವೇಳೆಗೆ, ಅವರ ಕಾರಿನ ನಂಬರ್‌ ಪ್ಲೇಟ್‌ನ ಕಡೆ ಕಣ್ಣು ಹಾಯಿಸೋದನ್ನು ತಡೆಯಲಾಗಲಿಲ್ಲ. ಅವರ ಕಾರ್‌ನ ನಂಬರ್ ಪ್ಲೇಟ್‌ DL1 CJI 0001 ಆಗಿದೆ. ಕೂಲ್‌ ನಂಬರ್ ಪ್ಲೇಟ್‌ ಇದು. ಬಹುಶಃ ಮುಖ್ಯ ಚುನಾವಣಾ ಆಯುಕ್ತರ ಕಾರ್‌ನ ನಂಬರ್‌ ಪ್ಲೇಟ್‌ DL1 CEC 0001 ಆಗಿದ್ದರೂ ಅಚ್ಚರಿಯಿಲ್ಲ' ಎಂದು ಬರೆದುಕೊಂಡಿದ್ದಾರೆ.

ಆದರೆ, ಇದು ಡಿವೈ ಚಂದ್ರಚೂಡ್‌ ಅವರ ವೈಯಕ್ತಿಕ ಕಾರ್‌ನ ನಂಬರ್ ಪ್ಲೇಟ್‌ ಅಲ್ಲ. ಇದು ರಿಜಿಸ್ಟ್ರಾರ್‌ ಆಫ್‌ ಸುಪ್ರೀಂ ಕೋರ್ಟ್‌ ಆಫ್‌ ಇಂಡಿಯಾದ ಹೆಸರಲ್ಲಿ ನೋಂದಣಿಯಾಗಿರುವ ಕಾರು. ಸಾಮಾನ್ಯವಾಗಿ ದೇಶದ ಪ್ರಧಾನಿ, ಸಿಜೆಐ, ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅಧಿಕೃತ ಸರ್ಕಾರಿ ಕಾರುಗಳನ್ನೇ ಬಳಸುತ್ತಾರೆ. ಅದೇ ರೀತಿಯ ದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮವಾದರೂ ಸಿಜೆಐ ಸರ್ಕಾರಿ ಕಾರು ಬಳಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನ ಸಿಜೆಐ ಆಗುವ ವ್ಯಕ್ತಿಗಳು ಮಾತ್ರವೇ ಈ ನಂಬರ್‌ ಪ್ಲೇಟ್‌ನ ಕಾರ್‌ಅನ್ನು ಬಳಸುತ್ತಾರೆ. ಅವರ ಅಧಿಕಾರವಧಿ ಮುಗಿದ ಬಳಿಕ ಇದರ ಸೇವೆ ಅವರಿಗೆ ಸಿಗುವುದಿಲ್ಲ. ಈ ಬಗ್ಗೆ ಹಲವರು ಲಾಯ್ಡ್‌ ಮಥಾಯಿಸ್‌ ಟ್ವೀಟ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ದೇಶದ ಸಿಜೆಐ ಅವರ ಕಾರ್‌ನ ನಂಬರ್‌ ಪ್ಲೇಟ್‌ ಬಹಳ ವಿಶೇಷವಾಗಿದ್ದಲ್ಲದೆ, ಅವರ ಹುದ್ದೆಯನ್ನೇ ಇದರಲ್ಲಿ ಬಿತ್ತರಿಸಲಾಗಿದೆ ಎಂದಿದ್ದಾರೆ.

ಸಣ್ಣ ಪಟ್ಟಣಗಳ ವಿದ್ಯಾರ್ಥಿಗಳು ವಕೀಲರಾಗುವ ಅವಕಾಶದಿಂದ ವಂಚಿತರಾಗದಂತೆ ಕಾನೂನಿನಲ್ಲಿ ವಿಶ್ವವಿದ್ಯಾಲಯ ಶಿಕ್ಷಣವನ್ನು ದೂರದ ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಬೇಕು ಎಂದು ಸಿಜೆಐ ಡಿವೈ ಚಂದ್ರಚೂಡ್‌ ಇತ್ತೀಚೆಗೆ ಹೇಳಿದ್ದರು. ಡಾ.ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಚಂದ್ರಚೂಡ್, "ತಂತ್ರಜ್ಞಾನವು ದೂರದ ವಿದ್ಯಾರ್ಥಿಗಳನ್ನು ತಲುಪುವ ಸಾಮರ್ಥ್ಯವನ್ನು ನಮಗೆ ನೀಡಿದೆ. ಕಾನೂನು ಶಿಕ್ಷಣದ ಬೆಳವಣಿಗೆಗಳ ಹೊರತಾಗಿಯೂ, ಸಮಕಾಲೀನ ಕಾನೂನು ಶಿಕ್ಷಣ ವ್ಯವಸ್ಥೆಯು ನಗರ ಪ್ರದೇಶದ ಇಂಗ್ಲಿಷ್ ಮಾತನಾಡುವ ಮಕ್ಕಳತ್ತ  ಮಾತ್ರ ಒಲವು ತೋರುತ್ತಿದೆ' ಎಂದಿದ್ದರು.

ರಾಮಮಂದಿರ ವಿವಾದ ಗಂಭೀರತೆ ಅರಿತು ಒಮ್ಮತದ ತೀರ್ಪು; ಈ ಕಾರಣ ತೀರ್ಪಿನಲ್ಲಿ ಜಡ್ಜ್‌ ಹೆಸರು ಹಾಕಲಿಲ್ಲ: ಚಂದ್ರಚೂಡ್

‘ಐದು ಕಾನೂನು ವಿಶ್ವವಿದ್ಯಾಲಯಗಳಲ್ಲಿ ವೈವಿಧ್ಯತೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಇಂಗ್ಲಿಷ್ ಮಾತನಾಡಲು ಸಾಧ್ಯವಾಗದ ಕಾರಣ ವಿವಿಧ ಹಿನ್ನೆಲೆಯ ಮಕ್ಕಳು ಈ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದರು. ಗಣ್ಯ ಕುಟುಂಬಗಳಿಂದ ಬರುವ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮೂಟ್ ಕೋರ್ಟ್‌ಗಳು, ಇಂಟರ್ನ್‌ಶಿಪ್‌ಗಳು ಮತ್ತು ಸ್ಪರ್ಧೆಗಳಂತಹ ಅವಕಾಶಗಳನ್ನು ಸಾಂಪ್ರದಾಯಿಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಡಿವೈ ಚಂದ್ರಚೂಡ್ ಹೇಳಿದರು. "ಕಾನೂನು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ವಿವಿಧ ಹಿನ್ನೆಲೆಯಿಂದ ಬರುವ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಬೇಕು" ಎಂದು ಅಭಿಪ್ರಾಯಪಟ್ಟಿದ್ದರು.

'ಉದಯನಿಧಿ ವಿರುದ್ಧ ದ್ವೇಷಭಾಷಣ ಕೇಸ್‌ ಯಾಕಿಲ್ಲ' ಸಿಜೆಐಗೆ ಪತ್ರ ಬರೆದ ಭಾರತದ 262 ಗಣ್ಯ ವ್ಯಕ್ತಿಗಳು!

Follow Us:
Download App:
  • android
  • ios