ಅಶ್ಲೀಲ ವಿಡಿಯೋ ಕೇಸಲ್ಲಿ ಜೈಲು ಪಾಲಾದ ಗಂಡ, ವಿದೇಶಕ್ಕೆ ಹಾರಿದ ಮಗ; ತಾಯಿ ಭವಾನಿ ರೇವಣ್ಣ ಪರಿಸ್ಥಿತಿ ಹೇಗಿದೆ?
ಹಾಸನದ ಸಂಸದನೂ ಆಗಿರುವ ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ವಿದೇಶಕ್ಕೆ ಹಾರಿದರೆ, ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಗಂಡ ಜೈಲು ಪಾಲಾಗಿದ್ದಾರೆ. ಆದರೆ, ಮನೆಯಲ್ಲಿ ಒಬ್ಬಂಟಿ ಆಗಿರುವ ಭವಾನಿ ರೇವಣ್ಣ ಅವರ ಪರಿಸ್ಥಿತಿ ಹೇಗಿದೆ ಗೊತ್ತಾ?
ಹಾಸನ (ಮೇ 06): ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸುದ್ದಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದಿಂದ ಗಂಡ ಹೆಚ್.ಡಿ. ರೇವಣ್ಣ ಜೈಲು ಸೇರಿದ್ದಾರೆ. ಇನ್ನು ಅಶ್ಲೀಲ ವಿಡಿಯೋ ಕೇಸ್ ಮುನ್ನೆಲೆಗೆ ಬರುತ್ತಲೇ ವಿದೇಶಕ್ಕೆ ಹಾರಿದ ಮಗ ಇನ್ನೂ ತಾಯ್ನಾಡು ಕಂಡಿಲ್ಲ. ಆದರೆ, ಇಬ್ಬರ ನಡುವೆ ತಾಯಿ ಪ್ರಜ್ವಲ್ ರೇವಣ್ಣ ಪರಿಸ್ಥಿತಿ ಅತಂತ್ರವಾಗಿದೆ. ಜೆಡಿಎಸ್ ನಾಯಕರು ಭವಾನಿ ರೇವಣ್ಣ ಮನೆಗೆ ಬಂದು ಸಾಂತ್ವನ ಹೇಳಿದ್ದಾರೆ.
ಹೌದು, ಮಗ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಕೇಸ್ ಬಳಿಕ ತಾಯಿ ಭವಾನಿ ರೇವಣ್ಣ ಹೇಗಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ಪ್ರಕರಣದಲ್ಲಿ, ವಿಡಿಯೋದಲ್ಲಿದ್ದ ಸಂತ್ರಸ್ಥ ಮಹಿಳೆ ಅಪಹರಣ ಮಾಡಿ ಮಾಜಿ ಸಚಿವ ರೇವಣ್ಣನೂ ಕೂಡ ಜೈಲು ಪಾಲಾಗಿದ್ದಾರೆ. ಈಗ ಅವರ ಆರೋಪಿಗಳಾದ ಪ್ರಜ್ವಲ್‌ನ ತಾಯಿ ಭವಾನಿ ರೇವಣ್ಣ ಮಾತ್ರ ತಂದೆ-ಮಗನ ಕ್ರೌರ್ಯಕ್ಕೆ ನಲುಗಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ದುಃಖಿತರಾಗಿರುವ ಭವಾನಿ ರೇವಣ್ಣ ಅವರನ್ನು ಸಂತೈಸಲು ಜೆಡಿಎಸ್ ನಾಯಕರು ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ತೆರಳಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯರಿಗಾಗಿ ಸಹಾಯವಾಣಿ ಆರಂಭಿಸಿದ ಎಸ್‌ಐಟಿ!
ಮಾಜಿ ಶಾಸಕ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಹಾಗೂ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಅವರಿಂದ ರೇವಣ್ಣ ಮನೆಗೆ ತೆರಳಿದ್ದಾರೆ. ಅಲ್ಲಿ ದುಃಖದಲ್ಲಿ ಮುಳುಗಿದ್ದ ಭವಾನಿ ರೇವಣ್ಣ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದ ಆರೋಪಗಳ ಬಳಿಕ ಪ್ರಜ್ಚಲ್ ವಿದೇಶಕ್ಕೆ ತೆರಳಿದ್ದು, ಯಾವ ದೇಶದಲ್ಲಿ ಹೇಗಿದ್ದಾರೋ ತಿಳಿಯುತ್ತಿಲ್ಲ. ಇನ್ನು ಅವರನ್ನು ಬಂಧಿಒಸಲು ಎಸ್‌ಐಟಿ ತಂಡದಿಂದ ಬ್ಲೂಕಾರ್ನರ್ ನೋಟೀಸ್ ಜಾರಿಗೊಳಿಸಲಾಗಿದೆ. ಆದರೆ, ಮಗ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋದಲ್ಲಿದ್ದ ಸಂತ್ರಸ್ತ ಮಹಿಳೆಯನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದೆ. ಈಗ ಒಬ್ಬಂಟಿ ಆಗಿರುವ ಭವಾನಿ ಅವರಿಗೆ ಜೆಡಿಎಸ್ ನಾಯಕರು ಧೈರ್ಯ ತುಂಬಿದ್ದಾರೆ.
ಹೆಚ್‌ಡಿ ರೇವಣ್ಣಗೆ ಮತ್ತೊಂದು ಶಾಕ್, ಹೆಚ್ಚಿನ ವಿಚಾರಣೆಗೆ 4 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ!
ರಾಜ್ಯದಲ್ಲಿ ಕಳೆದ ಒಂದು ವಾರಗಳಿಂದ ನಡೆಯುತ್ತಿರೊ ವಿದ್ಯಮಾನಗಳನ್ನು ಚರ್ಚಿಸಿ, ನೀವು ಧೈರ್ಯವಾಗಿರಿ. ನಿಮ್ಮ ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ವೈರಲ್ ಬಳಿಕ ನೀವು (ಭವಾನಿ ರೇವಣ್ಣ) ಮನೆಯಿಂದ ಹೊರ ಬಂದಿಲ್ಲ. ಸ್ವತಃ ರೇವಣ್ಣ ಅವರು ಈ ಪ್ರಕರಣದಲ್ಲಿ ತಮ್ಮ ತಪ್ಪಿಲ್ಲ ಎಂದು ಹೇಳುತ್ತಿದ್ದು, ಸತ್ಯ ಸಾಬೀತಾದ ಬಳಿಕ ಹೊರಗೆ ಬರಲಿದ್ದಾರೆ. ನೀವು ಕುಗ್ಗಿ ಹೋಗುವುದು ಬೇಡ. ಸ್ಥಳೀಯವಾಗಿ ಜೆಡಿಸ್ ನಾಯಕಿಯಾಗಿ ಎಲ್ಲ ಕಾರ್ಯಕರ್ತರಿಗೂ ಶಕ್ತಿ ತುಂಬಬೇಕು ಎಂದು ಜೆಡಿಎಸ್ ನಾಯಕರು ಭವಾನಿ ರೇವಣ್ಣಗೆ ಆತ್ಮಸ್ಥೈರ್ಯ ತುಂಬಿದರು.